ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಅದ್ವಿತಿ ಶೆಟ್ಟಿ ನಟನೆಯ ಕನ್ನಡದ 'ಬ್ರಹ್ಮ ಕಮಲ' ಪ್ರದರ್ಶನ

ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಬ್ರಹ್ಮ ಕಮಲ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ನಾಯಕಿ ನಟ ಅದ್ವಿತಿ ಶೆಟ್ಟಿ ಅವರು ಇಂಡೋ-ಸಿಂಗಾಪುರ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 
ಬ್ರಹ್ಮಕಮಲ - ಅದ್ವಿತಿ ಶೆಟ್ಟಿ
ಬ್ರಹ್ಮಕಮಲ - ಅದ್ವಿತಿ ಶೆಟ್ಟಿ
Updated on

ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಬ್ರಹ್ಮ ಕಮಲ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಫ್ರಾನ್ಸ್‌ನಲ್ಲಿ ನಡೆದ ಈಡಿಪ್ಲೇ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್, ಸಿಡ್ನಿಯಲ್ಲಿ ನಡೆದ ವಂಡರ್‌ಲ್ಯಾಂಡ್ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಮತ್ತು ನೇಪಾಳದ ಓಲ್ಡ್ ಮಾಂಕ್ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಈ  ಸಿನಿಮಾ ಈಗಾಗಲೇ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಗೆದ್ದಿದೆ. 

ಚಿತ್ರದ ನಾಯಕಿ ನಟ ಅದ್ವಿತಿ ಶೆಟ್ಟಿ ಅವರು ಇಂಡೋ-ಸಿಂಗಾಪುರ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ದಾದಾ ಸಾಹೇಬ್ ಫಾಲ್ಕೆ, ಅರುಣೋದಯ ಮತ್ತು ಕಲಾಕಾರಿ ಚಲನಚಿತ್ರೋತ್ಸವಗಳು ಸೇರಿದಂತೆ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಬ್ರಹ್ಮ ಕಮಲವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. 

ಚಿತ್ರದ ವಿಶಿಷ್ಟ ಕಥಾಹಂದರದ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಮಾತನಾಡುವ ನಿರ್ದೇಶಕ ಸಿದ್ದು, 'ಈ ಕಥೆಯ ವಿಶಿಷ್ಟತೆಯಿಂದಾಗಿ ನನಗೆ ಮೊದಲಿನಿಂದಲೂ ಈ ವಿಷಯದ ಮೇಲೆ ನಂಬಿಕೆ ಇತ್ತು. ಈ ಚಿತ್ರ ಇನ್ನೂ ಹಲವು ಪ್ರಶಸ್ತಿಗಳನ್ನು ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ' ಎಂದರು.

ರಾಮನಗರದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ ಬ್ರಹ್ಮಕಮಲ. ಚಿತ್ರದ ಸಂಗೀತವನ್ನು ಅನಂತ್ ಆರ್ಯನ್ ಸಂಯೋಜಿಸಿದ್ದಾರೆ ಮತ್ತು ಲೋಕ ಸೂರ್ಯ ಮತ್ತು ದೀಪು ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com