'TRP ರಾಮ' ಮೂಲಕ ಬೆಳ್ಳಿತೆರೆಗೆ ಮಹಾಲಕ್ಷ್ಮಿ; ಎರಡನೇ ಇನಿಂಗ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ

1980ರ ದಶಕದ ಆರಂಭದಿಂದ 1991 ರವರೆಗೆ ಚಿತ್ರರಂಗದಲ್ಲಿ ಗಮನಾರ್ಹ ಹೆಸರು ಮಾಡಿದ್ದ ನಟಿ ಮಹಾಲಕ್ಷ್ಮಿ ಅವರು 30 ವರ್ಷಗಳ ಸುದೀರ್ಘ ವಿರಾಮದ ನಂತರ ಇದೀಗ 'TRP ರಾಮ' ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. 
ಮಹಾಲಕ್ಷ್ಮಿ
ಮಹಾಲಕ್ಷ್ಮಿ

1980ರ ದಶಕದ ಆರಂಭದಿಂದ 1991 ರವರೆಗೆ ಚಿತ್ರರಂಗದಲ್ಲಿ ಗಮನಾರ್ಹ ಹೆಸರು ಮಾಡಿದ್ದ ನಟಿ ಮಹಾಲಕ್ಷ್ಮಿ ಅವರು 30 ವರ್ಷಗಳ ಸುದೀರ್ಘ ವಿರಾಮದ ನಂತರ ಇದೀಗ 'TRP ರಾಮ' ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. 

'ನೀವು ವೃತ್ತಿಯನ್ನು ಪ್ರೀತಿಸಿದಾಗ, ನೀವು ಎಷ್ಟೇ ವಿರಾಮದ ನಂತರ ಹಿಂತಿರುಗಿದಾಗಲೂ, ನಿಮ್ಮಲ್ಲಿ ಅದೇ ಪ್ರೀತಿ ಮತ್ತು ಪ್ರಾಮಾಣಿಕತೆ ತುಂಬಿರುತ್ತದೆ. ಈ ವಾರ ಬಿಡುಗಡೆಯಾಗುವ ಚಿತ್ರವನ್ನು ಪ್ರೇಕ್ಷಕರೊಂದಿಗೆ ವೀಕ್ಷಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ' ಎನ್ನುತ್ತಾರೆ ಮಹಾಲಕ್ಷ್ಮಿ.

'ನನ್ನ ಕುಟುಂಬಕ್ಕೆ ಆದ್ಯತೆ ನೀಡಲು ನಾನು ಈ ವಿರಾಮವನ್ನು ತೆಗೆದುಕೊಂಡೆ. ಈಗ ಮತ್ತೆ ನಟನೆಗೆ ಮರಳುತ್ತಿರುವುದು ಮುಖ್ಯವಾಗಿ ನನ್ನನ್ನು ನಾನು ಕೆಲಸದಲ್ಲಿ ತೊಡಗಿಕೊಳ್ಳಲು. ಟಿಆರ್‌ಪಿ ರಾಮ ನಿರ್ದೇಶಕರು ಪಾತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ, ನಾನು ನಟಿಸಲು ಒಪ್ಪಿಕೊಂಡೆ. ನಟನೆ ಒಂದು ವೃತ್ತಿಯಾಗಿದೆ ಮತ್ತು ನಾನು ಯಾವಾಗಲೂ ಅದರ ಭಾಗವಾಗಿರಬೇಕೆಂದು ಬಯಸುತ್ತೇನೆ' ಎಂದು ಹೇಳಿದರು.

30 ವರ್ಷಗಳ ವಿರಾಮದ ನಂತರ ಇಂದಿನ ಪೀಳಿಗೆಯಲ್ಲಿ ಜನಪ್ರಿಯವಾಗಿರುವ ಸಿನಿಮಾಗಳ ಬಗ್ಗೆ ಮಾತನಾಡುವ ಮಹಾಲಕ್ಷ್ಮಿ, 'ಹಿಂದೆ, ಚಲನಚಿತ್ರಗಳು ಉತ್ತಮ ಕಥೆಯನ್ನು ಹೊಂದಿರುತ್ತಿದ್ದವು. ಈಗಲೂ ಬಲಿಷ್ಠವಾದ ಕಥಾಹಂದರ ಮತ್ತು ಸ್ತ್ರೀ-ಕೇಂದ್ರಿತ ಸಿನಿಮಾಗಳ ಮೂಲ ಕಲ್ಪನೆಯು ಉಳಿದುಕೊಂಡಿದೆ. ಆದರೆ, ಇಂದಿನ ಕಾಲದ ಆದ್ಯತೆಗಳು ಮತ್ತು ಪ್ರವೃತ್ತಿಗಳಿಗೆ ತಕ್ಕಂತೆ ಸಿನಿಮಾಗಳು ವಿಕಸನಗೊಂಡಿವೆ' ಎನ್ನುತ್ತಾರೆ.

ರವಿ ಪ್ರಸಾದ್ ನಿರ್ದೇಶನದ TRP ರಾಮ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಮಹಾಲಕ್ಷ್ಮಿ, “ನಿರ್ದೇಶಕರು ನನಗೆ ಬಲಿಷ್ಠವಾದ ಮತ್ತು ಬೋಲ್ಡ್ ತಾಯಿಯ ಪಾತ್ರವನ್ನು ನೀಡಿದ್ದಾರೆ. ಆಕೆ ತನ್ನ ಮಗನನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತಾಳೆ. ಚಿತ್ರ ಬಿಡುಗಡೆಯ ನಂತರವೇ ಹೆಚ್ಚಿನ ವಿವರಗಳು ತಿಳಿಯಲಿವೆ' ಎಂದು ಅವರು ಹೇಳುತ್ತಾರೆ.

'ಸಿನಿಮಾದ ದೃಶ್ಯವನ್ನು ನೋಡಿದ ಜನರು ನನ್ನ ಪಾತ್ರವನ್ನು ಋಣಾತ್ಮಕವೆಂದು ಗ್ರಹಿಸಬಹುದು. ಆದರೆ, ಪ್ರೇಕ್ಷಕರ ಆಸಕ್ತಿಯನ್ನು ಖಂಡಿತವಾಗಿ ಕೆರಳಿಸುವ ಪಾತ್ರ ಇದಾಗಿದೆ' ಎನ್ನುತ್ತಾರೆ ಈವರೆಗೂ ಬೇರೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡಿರುವ ಮಹಾಲಕ್ಷ್ಮಿ ಇಂಡಸ್ಟ್ರಿಯಲ್ಲಿಯೇ ತಮ್ಮ ಪಯಣ ಮುಂದುವರಿಸಲು ಬಯಸಿದ್ದಾರೆ. 'ನಾನು ಮತ್ತೆ ಉದ್ಯಮಕ್ಕೆ ಬಂದಿದ್ದೇನೆ ಮತ್ತು ಈ ಹೊಸ ಅಧ್ಯಾಯವನ್ನು ಸ್ವೀಕರಿಸಲು ನಾನು ಉತ್ಸುಕಳಾಗಿದ್ದೇನೆ' ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com