ಪ್ರಜ್ವಲ್ ದೇವರಾಜ್ ನಟನೆಯ, ರಾಜಾ ಕಲೈ ಕುಮಾರ್ ನಿರ್ದೇಶನದ ಚಿತ್ರದ ಟೈಟಲ್ ರಿವೀಲ್!

ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಅವರು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ಈ ಹಿಂದೆ ವರದಿ ಮಾಡಲಾಗಿತ್ತು. ಇದೀಗ ಚಿತ್ರಕ್ಕೆ 'ಚೀತಾ' ಎಂದು ಹೆಸರಿಡಲಾಗಿದೆ ಎಂದು ಚಿತ್ರತಂಡ ಘೋಷಿಸಿದೆ. 
ನಟ ಪ್ರಜ್ವಲ್ ದೇವರಾಜ್
ನಟ ಪ್ರಜ್ವಲ್ ದೇವರಾಜ್

ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಅವರು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ಈ ಹಿಂದೆ ವರದಿ ಮಾಡಲಾಗಿತ್ತು. ಇದೀಗ ಚಿತ್ರಕ್ಕೆ 'ಚೀತಾ' ಎಂದು ಹೆಸರಿಡಲಾಗಿದೆ ಎಂದು ಚಿತ್ರತಂಡ ಘೋಷಿಸಿದೆ. ಎಸ್ಎಸ್ ರಾಜಮೌಳಿಯವರ ಬಾಹುಬಲಿ ಸಿನಿಮಾದ ಮೊದಲ ಪೋಸ್ಟರ್‌ಗೆ ಹೋಲುವ ಪೋಸ್ಟರ್ ಜೊತೆಗೆ ಶೀರ್ಷಿಕೆಯನ್ನು ಘೋಷಿಸಲಾಗಿದೆ.

ಪೋಸ್ಟರ್‌ನಲ್ಲಿ ಮಾರುಕಟ್ಟೆಯ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿರುವ ತಾಯಿ ಅಲುತ್ತಿರುವ ತನ್ನ ನವಜಾತ ಶಿಶುವನ್ನು ಮೇಲಕ್ಕೆತ್ತಿ ಹಿಡಿದಿರುವುದನ್ನು ತೋರಿಸುತ್ತದೆ. ಈ ಪೋಸ್ಟರ್ ಮತ್ತು ಶೀರ್ಷಿಕೆಯ ಮಹತ್ವದ ಬಗ್ಗೆ ನಿರ್ದೇಶಕರನ್ನು ಕೇಳಿದಾಗ, 'ಮಗುವಿಗೆ ಜನ್ಮ ನೀಡಿ ತನ್ನ ಜೀವನವನ್ನು ತ್ಯಾಗ ಮಾಡಿದ ತಾಯಿ, ಜನರ ಪರವಾಗಿ ಮಗು ಧ್ವನಿ ಎತ್ತಲಿ ಎಂದು ಹಂಬಲಿಸುತ್ತಾಳೆ. ಇದುವೇ ನಮ್ಮ ಫಸ್ಟ್ ಲುಕ್ ಪೋಸ್ಟರ್‌ನ ಸಾರ ಮತ್ತು ಚಿತ್ರದ ಥೀಮ್' ಎನ್ನುತ್ತಾರೆ.

ರಾಜಲಕ್ಷ್ಮಿ ಎಂಟರ್‌ಟೈನ್‌ಮೆಂಟ್‌ ಅಡಿ ಪ್ರತಿಬಾ ನರೇಶ್ ನಿರ್ಮಿಸಿರುವ ಚೀತಾ ಸಿನಿಮಾ ಮೂಲಕ ತೆಲುಗು ನಟ ಸುನೀಲ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಮತ್ತು ಹಿಂದೆಂದೂ ನೋಡಿರದ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್ ಕಾಣಿಸಿಕೊಳ್ಳಲಿದ್ದಾರೆ.

ಅದ್ಧೂರಿ ಮುಹೂರ್ತದೊಂದಿಗೆ ಅಧಿಕೃತವಾಗಿ ಸೆಟ್ಟೇರಿರುವ ಈ ಚಿತ್ರ ನಾಳೆಯಿಂದ ಚಿತ್ರೀಕರಣವನ್ನು ಪ್ರಾರಂಭಿಸಲಿದೆ. ಒಂದೇ ಹಂತದಲ್ಲಿ 25 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲು ಚಿತ್ರತಂಡ ಯೋಜಿಸಿದೆ. 

ಚೀತಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾದ ಅಶಿಮಾ ನರ್ವಾಲ್

ರಾಜಾ ಕಲೈ ಕುಮಾರ್ ಅವರ ಚೀತಾ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಲು ನಟಿ ಅಶಿಮಾ ನರ್ವಾಲ್ ಸಿದ್ಧರಾಗಿದ್ದಾರೆ. ನಾಟಕಂ, ಜೆಸ್ಸಿ, ಕೊಲೈಗಾರನ್, ಪಿತ್ತ ಕಥಾಲು ಮತ್ತು ಇನ್ನೂ ಬಿಡುಗಡೆಯಾಗದ ರಾಜಭೀಮಾ ಮುಂತಾದ ಚಿತ್ರಗಳ ಮೂಲಕ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈಗಾಗಲೇ ಛಾಪು ಮೂಡಿಸಿರುವ ರೂಪದರ್ಶಿ-ನಟಿ, ಇದೀಗ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಅಶಿಮಾ ಅವರು ಈ ಗುರುವಾರ ಚಿತ್ರದ ಸೆಟ್‌ಗೆ ಸೇರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com