ಯಶಸ್ಸು ಸಿಕ್ಕಾಗ ಎಲ್ಲರೂ ಜೊತೆಗಿರುತ್ತಾರೆ, ಸೋಲಿನಲ್ಲಿ ಒಂಟಿ: ನಟ ಬಿ.ಸಿ. ಪಾಟೀಲ್

ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ.ಪಾಟೀಲ್, ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರೂ ನಟರಾಗಿ ಜನಪ್ರಿಯರಾಗಿದ್ದಾರೆ. ಕೌರವ ಚಿತ್ರದಲ್ಲಿನ ತಮ್ಮ ಅಪ್ರತಿಮ ಪಾತ್ರಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ವೃತ್ತಿ ಮತ್ತು ನಟನೆ ಎರಡನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ
ಗರಡಿ ಸಿನಿಮಾದ ಸ್ಟಿಲ್
ಗರಡಿ ಸಿನಿಮಾದ ಸ್ಟಿಲ್

ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ.ಪಾಟೀಲ್, ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರೂ ನಟರಾಗಿ ಜನಪ್ರಿಯರಾಗಿದ್ದಾರೆ. ಕೌರವ ಚಿತ್ರದಲ್ಲಿನ ತಮ್ಮ ಅಪ್ರತಿಮ ಪಾತ್ರಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ವೃತ್ತಿ ಮತ್ತು ನಟನೆ ಎರಡನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. 'ಮನಸ್ಸಿದ್ದರೆ ಮಾರ್ಗ' ಎಂಬುದನ್ನು ದೃಢವಾಗಿ ನಂಬಿದ್ದು,ತನ್ನ ಜೀವನದ ಎರಡು ಅಂಶಗಳನ್ನು ಕೌಶಲ್ಯದಿಂದ ನಿರ್ವಹಿಸಿದ್ದನ್ನು ಒಪ್ಪಿಕೊಳ್ಳುತ್ತಾರೆ. ಅವರು ಪ್ರತಿ ಯಶಸ್ಸಿನ ಹಿಂದೆ ತ್ಯಾಗವಿದೆ ಎಂಬ ಕಲ್ಪನೆಯ ಪ್ರಬಲ ಪ್ರತಿಪಾದಕರು.

ಪ್ರಾರಂಭದಲ್ಲಿ ನಟನಾಗುವ ಆಕಾಂಕ್ಷೆ ಹೊಂದಿದ್ದ ಪಾಟೀಲ್, ಅದರಲ್ಲಿನ ಅಪರಿಮಿತ ಉತ್ಸಾವ ಕುಟುಂಬದವರ ಹಿಂಜರಿಕೆ ನಡುವೆ ಅದರಲ್ಲಿ ಮುಂದುವರೆಯುವಂತೆ ಮಾಡುತ್ತದೆ. ಈಗ ತನ್ನ ಪಯಣವನ್ನು ಹಿಂತಿರುಗಿ ನೋಡಿದಾಗ, ಸ್ನಾತಕೋತ್ತರ ಪದವಿಯಲ್ಲಿ ನಾಟಕಗಳಲ್ಲಿ ಅಭಿನಯದ ನಂತರ ತನ್ನ ಪಾತ್ರಕ್ಕೆ ಭಾರಿ ಮೆಚ್ಚುಗೆ ಸಿಕ್ಕಾಗ, ಜನಪ್ರಿಯನಾಗಬೇಕು ಎಂಬ ಗುರಿ ಸಾಧಿಸಲು ಇದರಿಂದ ಸಾಧ್ಯ ಎಂಬುದನ್ನು ಅರಿತು ನಟನಾಗಿ ಮುಂದುವರೆಯಲು ನಿರ್ಧರಿಸಿದ್ದಾಗಿ ತಿಳಿಸಿದರು.

ಬಿ.ಸಿ. ಪಾಟೀಲ್ ಸದ್ಯ, ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಅದರ ಬಗ್ಗೆ ಕುತೂಹಲ ಹೊಂದಿದ್ದಾರೆ. ಈ ಚಿತ್ರದಲ್ಲಿ ಸೂರ್ಯ, ಸೋನಾಲ್ ಮಾಂತೆರೋ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನಾ ರಾಜಕಾರಣಿ ಹಾಗೂ ತಮ್ಮ ಹಿಂದಿನ ದಿನಗಳನ್ನುಅವರು ನೆನಪಿಸಿಕೊಂಡರು. 

"ನಟನಾಗಿ ಈ ಮಟ್ಟಕ್ಕೆ ತಲುಪುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಮತ್ತು ನಾನು ನಿರ್ಮಾಪಕನಾಗುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಬಹುತೇಕ ಚಿತ್ರಗಳು ಆಕಸ್ಮಿಕವಾಗಿ ನನ್ನ ಬಳಿಗೆ ಬಂದವು. ಸಂಘರ್ಷದಲ್ಲಿ ಸಣ್ಣ ಪಾತ್ರವನ್ನು ಪ್ರಾರಂಭಿಸಿದೆ, ಅದು ದುರದೃಷ್ಟವಶಾತ್ ವೈಫಲ್ಯದಲ್ಲಿ ಕೊನೆಗೊಂಡಿತು. "ಸಿನಿಮಾ ಜಗತ್ತಿನಲ್ಲಿ ಯಶಸ್ಸು ಬೆಂಬಲಿಗರನ್ನು ತರುತ್ತದೆ ಆದರೆ ವೈಫಲ್ಯ ನಿಮ್ಮನ್ನು ಏಕಾಂಗಿಯಾಗಿ ಬಿಡಬಹುದು ಎಂಬುದನ್ನು ನಾನು ಕಲಿತಿದ್ದೇನೆ. ಒಂದು ಚಿತ್ರ ಯಶಸ್ವಿಯಾದಾಗ, ಪ್ರತಿಯೊಬ್ಬರೂ ಕ್ರೆಡಿಟ್ ಅನ್ನು ಹೇಳಿಕೊಳ್ಳುತ್ತಾರೆ, ಆದರೆ ನಿರ್ಮಾಪಕರು ಸಾಮಾನ್ಯವಾಗಿ ಗಮನಿಸುವುದಿಲ್ಲ. ವ್ಯತಿರಿಕ್ತವಾಗಿ, ಒಂದು ಚಿತ್ರ ವಿಫಲವಾದಾಗ, ಯೋಜನೆಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯತ್ತ ಎಲ್ಲರ ಕಣ್ಣುಗಳು ತಿರುಗುತ್ತವೆ ಎಂದು ಹೇಳಿದರು. 

<strong>ಬಿಸಿ ಪಾಟೀಲ್</strong>
ಬಿಸಿ ಪಾಟೀಲ್

ತಮ್ಮ ಮೊದಲ ನಿರ್ಮಾಣದ ಚಿತ್ರ ನಿಷ್ಕರ್ಷ ಸವಾಲುಗಳನ್ನು ಎದುರಿಸಿತು. ಆದರೆ ವಿಷ್ಣುವರ್ಧನ್ ಜೊತೆಗೆ ಖಳನಾಯಕನ ಪಾತ್ರ ಮಾಡಿದ ಸಂಗತಿಯನ್ನು ಹಂಚಿಕೊಂಡರು. “ಯಾರೂ ನನ್ನನ್ನು ಹೀರೋ ಎಂದು ಒಪ್ಪಿಕೊಳ್ಳುವುದಿಲ್ಲ. ಸುನೀಲ್ ಕುಮಾರ್ ದೇಸಾಯಿ ಅವರ ತರ್ಕ ಮತ್ತು ಉತ್ಕರ್ಷದಿಂದ ಸ್ಫೂರ್ತಿ ಪಡೆದ ನನಗೆ, ವಿಷ್ಣುವರ್ಧನ್ ಅಭಿನಯದ ಚಿತ್ರ  ನಿರ್ಮಿಸಿದರೆ, ನೆಗೆಟಿವ್ ಪಾತ್ರ ನಿರ್ವಹಿಸಬೇಕು ಎಂಬ ಷರತ್ತು ಇತ್ತು.  ಇದು  ವೈಟ್ ಕಾಲರ್ ವಿಲನ್ ಎಂದು ಹೆಸರು ತಂದುಕೊಟ್ಟಿತು. ಆದಾಗ್ಯೂ, ಆಪರೇಷನ್ ಯಶಸ್ವಿಯಾಯಿತು. ಆದರೆ ರೋಗಿ ಸತ್ತರು.  ನಿಷ್ಕರ್ಷ 100 ದಿನಗಳ ಕಾಲ ಓಡಿತು ಆದರೆ ನಂಬಿದ ಮಧ್ಯವರ್ತಿಗಳ ಆರ್ಥಿಕ ದುರುಪಯೋಗದಿಂದ ನಿರೀಕ್ಷಿತ ಆದಾಯಕ್ಕೆ ಕೊರತೆಯಾಯಿತು. ನಾನು ಇನ್ನೂ ಕೆಲವು ಚಿತ್ರಗಳನ್ನು ಮಾಡಿದೆ, ನಷ್ಟವನ್ನು ಅನುಭವಿಸಿದೆ. ನಂತರ ದಾವಣಗೆರೆಯಲ್ಲಿ ಒಂದು ಮನೆಯನ್ನು ಸಹ ಮಾರಾಟ ಮಾಡಬೇಕಾಗಿತ್ತು ಎಂದು ತಿಳಿಸಿದರು. 

ಕೌರವ ಚಿತ್ರದಲ್ಲಿ  ನಾನೇ ಹೀರೋ ಆಗಬೇಕೆಂದು ನಿರ್ದೇಶಕ ಎಸ್. ಮಹೇಂದರ್ ಹಠ ಇಡಿದರು. ಇತರರ ಮೇಲೆ ಹಣ ಕಳೆದುಕೊಳ್ಳುವ ಬದಲು, ನನ್ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಮತ್ತು ಅದು ಫಲ ನೀಡಿತು. ನಂತರ, ಸರ್ಕಾರಿ ಅಧಿಕಾರಿಗಳು ಸೇವೆಯಲ್ಲಿದ್ದಾಗ ಕಾರ್ಯನಿರ್ವಹಿಸಬಾರದು ಎಂದು ಹೇಳುವ ಹೊಸ ಕಾನೂನು ಹೊರಬಂದಿತು. ನಂತರ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದ್ದೇನೆ.  ರಾಜಕೀಯ ಜೀವನ ಏರಿಳಿತ ಹೊಂದಿತ್ತು, ಆದರೆ ಈಗ  ಗರಡಿಯೊಂದಿಗೆ ಪುನರಾಗಮನವನ್ನು ಮಾಡಲು ರೋಮಾಂಚನಗೊಂಡಿದ್ದೇನೆ ಎಂದರು. 

ಯೋಗರಾಜ್ ಭಟ್ ನಿರ್ದೇಶನದ ಗರಡಿಯಲ್ಲಿ ಸ್ಕ್ರಿಪ್ಟಿಂಗ್ ಹಂತದಿಂದಲೇ ತೊಡಗಿಸಿಕೊಂಡಿದ್ದಾಗಿ ಪಾಟೀಲ್ ಹೇಳುತ್ತಾರೆ. ಆರಂಭದಲ್ಲಿ, ಗರಡಿಯಲ್ಲಿ ನಟಿಸಲು ಯೋಚಿಸಿರಲಿಲ್ಲ. ಪ್ರಸಿದ್ಧ ಕಲಾವಿದನನ್ನು ಹಾಕಲು ಯೋಜಿಸುತ್ತಿದ್ದೆ. ಆದರೆ, ನಿರ್ದೇಶಕರು ಆ ಪಾತ್ರವನ್ನು ವಹಿಸುವಂತೆ ನನಗೆ ಸೂಚಿಸಿದರು. ಇನ್ನು ಕೆಲವು ದಿನಗಳ ಶೂಟಿಂಗ್‌ ಇದೆ ಎಂದು ಹೇಳಿದರೂ ಸಿನಿಮಾದುದ್ದಕ್ಕೂ ನನ್ನನ್ನು ಉಳಿಸಿಕೊಂಡರು. ಇಡೀ ಗರಡಿಯಲ್ಲಿ ನಾನೇ ಯಜಮಾನನಾಗಿದ್ದು, ಈ ಪಾತ್ರದಲ್ಲಿ ನಟಿಸಿರುವುದು ನನಗೆ ಅಪಾರ ಸಂತಸ ತಂದಿದೆ ಎಂದು ತಿಳಿಸಿದರು. 

ಚಿತ್ರದಲ್ಲಿ ಕುಸ್ತಿಯಲ್ಲಿ ಪರಿಣತನಾದ ಕೊರಪೇಟ್ ರಂಗಪ್ಪ ಎಂಬ ಮಾಸ್ತರ್ ಪಾತ್ರವನ್ನು ನಿರ್ವಹಿಸಿದ್ದೇನೆ.  ಆರಂಭದಲ್ಲಿ, ಪ್ರೇಕ್ಷಕರು ಪಾತ್ರದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರಬಹುದು, ಆದರೆ ನಂತರ ಅದನ್ನು ಸಮರ್ಥಿಸಿಕೊಳ್ಳುತ್ತಾರೆ ”ಎಂದು ಪಾಟೀಲ್ ತಮ್ಮ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರು. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ದರ್ಶನ್ ಅವರನ್ನು ಹೈಲೈಟ್ ಮಾಡುವ ಮೂಲಕ ನಟ ಉಳಿದ ಪಾತ್ರವರ್ಗವನ್ನು ಉಲ್ಲೇಖಿಸಿದರು. ನಿಷ್ಕರ್ಷ ಮತ್ತು ಕೌರವ ಚಿತ್ರಗಳಂತೆ ಗರಡಿ ಕೂಡ ತಮ್ಮ ಬ್ಯಾನರ್‌ನ ಕೌರವ ಪ್ರೊಡಕ್ಷನ್ ಹೌಸ್ ಮತ್ತು ವನಜಾ ಪಾಟೀಲ್ ಅವರ ಸೌಮ್ಯಾ ಫಿಲಂಸ್‌ನಡಿಯಲ್ಲಿ ನಿರ್ಮಿಸಲಾದ ವಿಶಿಷ್ಟ ಚಿತ್ರವಾಗಲಿದೆ. ಯೋಗರಾಜ್ ಭಟ್ ಅವರ ನಿರ್ದೇಶನ ಮತ್ತು ಹರಿಕೃಷ್ಣ ಅವರ ಸಂಗೀತದೊಂದಿಗೆ ಚಿತ್ರವು ಮನರಂಜನೆ ನೀಡಲಿದೆ ಎಂದು ಬಿ.ಸಿ. ಪಾಟೀಲ್ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com