ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾಗೆ ಯು/ಎ ಪ್ರಮಾಣ ಪತ್ರ; ನವೆಂಬರ್ 10 ರಂದು ತೆರೆಗೆ!

ಯೋಗರಾಜ್ ಭಟ್ ಅವರ ಬಹು ನಿರೀಕ್ಷಿತ ಗರಡಿ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಇದೀಗ ಚಿತ್ರ ನವೆಂಬರ್ 10 ರಂದು ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದಲ್ಲಿ ಯಶಸ್ ಸೂರ್ಯ ಮತ್ತು ಸೋನಲ್ ಮೊಂತೆರೋ ಪ್ರಮುಖ ಪಾತ್ರಗಳಲ್ಲಿದ್ದಾರೆ. 
ಗರಡಿ ಸಿನಿಮಾದ ಸ್ಟಿಲ್
ಗರಡಿ ಸಿನಿಮಾದ ಸ್ಟಿಲ್

ಯೋಗರಾಜ್ ಭಟ್ ಅವರ ಬಹು ನಿರೀಕ್ಷಿತ ಗರಡಿ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಇದೀಗ ಚಿತ್ರ ನವೆಂಬರ್ 10 ರಂದು ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದಲ್ಲಿ ಯಶಸ್ ಸೂರ್ಯ ಮತ್ತು ಸೋನಲ್ ಮೊಂತೆರೋ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಹಳ ದಿನಗಳ ನಂತರ ನಟ ಮತ್ತು ರಾಜಕಾರಣಿ ಬಿಸಿ ಪಾಟೀಲ್ ಅವರು ಗರಡಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಇದರೊಂದಿಗೆ ಗರಡಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದು ರಾಣಿಬೆನ್ನೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ಚಿತ್ರದ ಟ್ರೈಲರ್ ಅನ್ನು ಲಾಂಚ್ ಮಾಡಲಿದ್ದಾರೆ. ಇಡೀ ಚಿತ್ರತಂಡ ಮತ್ತು ಇತರ ಗಣ್ಯರು ಪಾಲ್ಗೊಳ್ಳುವ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ.

ಗರಡಿ ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ದೇಸಿ ಕ್ರೀಡೆಗೆ ಒತ್ತು ನೀಡಲಾಗಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ.

ಕೌರವ ಪ್ರೊಡಕ್ಷನ್ ಹೌಸ್‌ನ ಹೋಮ್ ಬ್ಯಾನರ್ ಅಡಿಯಲ್ಲಿ ಗರಡಿ ಸಿನಿಮಾವನ್ನು ಬಿಸಿ ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com