ಹುಟ್ಟುಹಬ್ಬದಂದು ಪ್ರಪೋಸ್, 10ನೇ ದಿನಕ್ಕೆ ಮದುವೆ: ಸದ್ದಿಲ್ಲದೆ ನೆರವೇರಿತು 'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ವಿವಾಹ!

ಮಲಯಾಳಂ ನಟಿ, ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಅಮಲಾ ಪೌಲ್ -ಜಗತ್ ದೇಸಾಯಿ ಜತೆ ನವೆಂಬರ್ 5ರ ಭಾನುವಾರದಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾಗಿದ್ದಾರೆ.
ಅಮಲಾ ಪೌಲ್
ಅಮಲಾ ಪೌಲ್
Updated on

ಮಲಯಾಳಂ ನಟಿ, ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಅಮಲಾ ಪೌಲ್ -ಜಗತ್ ದೇಸಾಯಿ ಜತೆ ನವೆಂಬರ್ 5ರ ಭಾನುವಾರದಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾಗಿದ್ದಾರೆ.

ಅಮಲಾ ಪೌಲ್ ಮತ್ತು ಜಗತ್ ದೇಸಾಯಿ ಅವರ ವಿವಾಹ ಕೇರಳದ ಕೊಚ್ಚಿಯ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಅಮಲಾ ಮತ್ತು ಜಗತ್ ಮದುವೆಯ ಸಂಭ್ರಮದ ಕ್ಷಣಗಳ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಹುಟ್ಟುಹಬ್ಬ ದಿನವೇ ಬಾಯ್ ಫ್ರೆಂಡ್ ಜಗತ್ ದೇಸಾಯಿ ಪ್ರಪೋಸ್ ಮಾಡಿದ್ದರು. ಕೂಡಲೇ ಅದಕ್ಕೆ ಆಕೆ ಯೆಸ್ ಹೇಳಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪ್ರಪೋಸ್ ಮಾಡಿ ವಾರ ಕಳೆಯುವ ಮುನ್ನ ಇಬ್ಬರೂ ಹಸೆಮಣೆ ಏರಿದ್ದಾರೆ.

ಇದಕ್ಕೂ ಮೊದಲು ಅಮಲಾ ಅವರು ನಿರ್ದೇಶಕ ಎಎಲ್ ವಿಜಯ್ ಅವರನ್ನು ಜೂನ್ 2014 ರಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದರು. 2017 ರಲ್ಲಿ ಅಮಲಾ ಮತ್ತು ವಿಜಯ್ ವಿಚ್ಛೇದನ ಪಡೆದರು. ಜಗತ್ ದೇಸಾಯಿ ಓರ್ವ ಉದ್ಯಮಿ ಆಗಿದ್ದಾರೆ. ಅಮಲಾ ಮುಖ್ಯವಾಗಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ತಿರುಟ್ಟು ಪಯಲೆ 2 (2017), ರಾತ್ಸಾಸನ್ (2018), ಆದೈ (2019) ಮತ್ತು ದಿ ಟೀಚರ್ (2022) ನ ಭಾಗವಾಗಿದ್ದರು. ಅಮಲಾ ಕೊನೆಯದಾಗಿ ಭೋಲಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಮಲಾ ಪೌಲ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. 2017ರಲ್ಲಿ ಸುದೀಪ್ ನಟನೆಯ 'ಹೆಬ್ಬುಲಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಚಿತ್ರದಲ್ಲಿ ಡಾ. ನಂದಿನಿ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಕೃಷ್ಣ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com