ಧನುಷ್-ಶ್ರಾವ್ಯಾ ರಾವ್ ನಟನೆಯ ರಾಯಲ್ ಮೆಕ್ ಸಿನಿಮಾ ಬಿಡುಗಡೆಗೆ ಸಿದ್ಧ

ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಧನುಷ್, ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಇದೀಗ ರಾಯಲ್ ಮೆಕ್ ಎನ್ನುವ ಸಿನಿಮಾದ ಮೂಲಕ ತಮ್ಮ ನಟನೆಗೆ ಇಳಿದಿದ್ದಾರೆ. ಸ್ಕ್ರಿಪ್ಟ್ ಬರೆಯುವುದಷ್ಟೇ ಅಲ್ಲದೆ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. 
ರಾಯಲ್ ಮೆಕ್ ಸಿನಿಮಾದಲ್ಲಿ ನಟ ಧನುಷ್
ರಾಯಲ್ ಮೆಕ್ ಸಿನಿಮಾದಲ್ಲಿ ನಟ ಧನುಷ್
Updated on

ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಧನುಷ್, ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಇದೀಗ ರಾಯಲ್ ಮೆಕ್ ಎನ್ನುವ ಸಿನಿಮಾದ ಮೂಲಕ ನಟನೆಗೆ ಇಳಿದಿದ್ದಾರೆ. ಸ್ಕ್ರಿಪ್ಟ್ ಬರೆಯುವುದಷ್ಟೇ ಅಲ್ಲದೆ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರು ಎದುರಿಸಿದ ನೈಜ ಘಟನೆಯನ್ನು ಆಧರಿಸಿ ಚಿತ್ರವನ್ನು ತಯಾರಿಸಲಾಗಿದೆ. 

ಚಿತ್ರವು ಎಂಜಿನಿಯರ್ ಒಬ್ಬನ ಕಥೆಯನ್ನು ಹೇಳುತ್ತದೆ. ಅವರು ಕೆಲವು ಸಂದರ್ಭಗಳಲ್ಲಿ ಫುಡ್ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡುತ್ತಾರೆ. ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆಯಾ?. ಈ ಪ್ರಯಾಣದಲ್ಲಿ ಅವರು ಎದುರಿಸುವ ಸವಾಲುಗಳ ಕುರಿತು ಚಿತ್ರ ಹೇಳುತ್ತದೆ.

ಈ ಕುರಿತು ಮಾತನಾಡುವ ಧನುಷ್, 'ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಆಗ ನನ್ನ ಲ್ಯಾಪ್‌ಟಾಪ್ ಅನ್ನು ಸರಿಪಡಿಸಬೇಕಾಗಿತ್ತು. ಸಹಾಯಕ್ಕಾಗಿ ಹಾರ್ಡ್‌ವೇರ್ ತಂತ್ರಜ್ಞರನ್ನು ಸಂಪರ್ಕಿಸಿದಾಗ, ಅವರು ಬೆಳಿಗ್ಗೆ ಫುಡ್ ಡೆಲಿವರಿ ಕೆಲಸದಲ್ಲಿ ನಿರತರಾಗಿದ್ದರಿಂದ ರಾತ್ರಿ 10 ಗಂಟೆಯ ನಂತರ ರಿಪೇರಿ ಕೆಲಸದಲ್ಲಿ ತೊಡಗಬಹುದು ಎಂದು ಹೇಳಿದರು. ಇದು, ತಮ್ಮ ಶೈಕ್ಷಣಿಕ ಅರ್ಹತೆಯ ಹೊರತಾಗಿಯೂ ಯುವಕರು ಎದುರಿಸುತ್ತಿರುವ ಸವಾಲುಗಳ ಕುರಿತು ಯೋಚಿಸುವಂತೆ ಮಾಡಿತು. ಈ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಯುವಕನೊಬ್ಬ ತನ್ನ IAS ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಗುವ ಸ್ಕ್ರಿಪ್ಟ್ ಬರೆಯಲು ನನಗೆ ಸ್ಫೂರ್ತಿ ನೀಡಿತು' ಎನ್ನುತ್ತಾರೆ.

ಧನುಷ್ ಅಭಿನಯದ ರಾಯಲ್ ಮೆಕ್ ಚಿತ್ರ ನವೆಂಬರ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಶಬರಿ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಜೆಎಚ್ಎಂ ನಾಗಭೂಷಣ್ ಮತ್ತು ಡಾ. ಜಯದೇವ ಹಾಸನ್ ಅವರ ಸಹ-ನಿರ್ದೇಶನ ಚಿತ್ರಕ್ಕಿದೆ. 

ಸಾತ್ವಿಕಾ ರಾವ್ ಅಲಿಯಾಸ್ ಶ್ರಾವ್ಯಾ ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ, ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ, ಕುರಿ ಪ್ರತಾಪ್, ರಮೇಶ್ ಭಟ್, ವಿನಯ್ ಪ್ರಸಾದ್, ರೇಖಾ ದಾಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪವನ್ ಮತ್ತು ಗೌತಮಿ ಜಯರಾಂ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com