ಸಂಜು ವೆಡ್ಸ್ ಗೀತಾ II ಚಿತ್ರದ ಮತ್ತೊಬ್ಬ ನಾಯಕನಾಗಿ ಮೈನಾ ಖ್ಯಾತಿಯ ನಟ ಚೇತನ್ ಆಯ್ಕೆ?

ನಿರ್ದೇಶಕ ನಾಗಶೇಖರ್ ತಮ್ಮ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ II ಸಿನಿಮಾದ ಕೆಲಸ ಪ್ರಾರಂಭಿಸಿದ್ದಾರೆ. ಈ ಯೋಜನೆಯ ಇತ್ತೀಚಿನ ಅಪ್‌ಡೇಟ್ಸ್ ಪ್ರಕಾರ, ಸಂಜು ವೆಡ್ಸ್ ಗೀತಾ II ನಲ್ಲಿ ಪ್ರಮುಖ ಪಾತ್ರಕ್ಕಾಗಿ ನಾಗಶೇಖರ್ ಅವರು ಮೈನಾ ಚಿತ್ರಕ್ಕೆ ಹೆಸರುವಾಸಿಯಾದ ನಟ ಚೇತನ್ ಅವರನ್ನು ಬೆಳ್ಳಿತೆರೆಗೆ ಮರಳಿ ಕರೆತರುತ್ತಿದ್ದಾರೆ ಎನ್ನಲಾಗಿದೆ. 
ಚೇತನ್ - ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್
ಚೇತನ್ - ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್
Updated on

ನಿರ್ದೇಶಕ ನಾಗಶೇಖರ್ ತಮ್ಮ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ II ಸಿನಿಮಾದ ಕೆಲಸ ಪ್ರಾರಂಭಿಸಿದ್ದಾರೆ. 2011 ರಲ್ಲಿ ಬಿಡುಗಡೆಯಾದ ಸಂಜು ವೆಡ್ಸ್ ಗೀತಾ ಚಿತ್ರದ ಮುಂದುವರಿದ ಭಾಗವನ್ನು ನಿರ್ದೇಶಕರು ತಯಾರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಯೋಜನೆಯ ಇತ್ತೀಚಿನ ಅಪ್‌ಡೇಟ್ಸ್ ಪ್ರಕಾರ, ಸಂಜು ವೆಡ್ಸ್ ಗೀತಾ II ನಲ್ಲಿ ಪ್ರಮುಖ ಪಾತ್ರಕ್ಕಾಗಿ ನಾಗಶೇಖರ್ ಅವರು ಮೈನಾ ಚಿತ್ರಕ್ಕೆ ಹೆಸರುವಾಸಿಯಾದ ನಟ ಚೇತನ್ ಅವರನ್ನು ಬೆಳ್ಳಿತೆರೆಗೆ ಮರಳಿ ಕರೆತರುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ಮತ್ತೊಬ್ಬ ನಾಯಕನನ್ನು ಹುಡುಕುತ್ತಿದ್ದ ನಿರ್ದೇಶಕರಿಗೆ ಚೇತನ್ ಅವರೇ ಸೂಕ್ತ ಎನಿಸಿದ್ದು, ಅವರೊಂದಿಗೆ ಮಾತುಕತೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಚೇತನ್ ಅವರು ಚಿತ್ರತಂಡಕ್ಕೆ ಸೇರುವ ಅಧಿಕೃತ ಘೋಷಣೆಯನ್ನು ಪ್ರೊಡಕ್ಷನ್ ಹೌಸ್ ಮಾಡಲಿದೆ.

ಅತಿರಥದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಚೇತನ್ ಅವರು ಈ ಹಿಂದೆ ಕನ್ನಡದಲ್ಲಿ ಮಾರ್ಗ ಸೇರಿದಂತೆ ಕೆಲವು ಯೋಜನೆಗಳನ್ನು ಘೋಷಿಸಿದ್ದರು. ಇದೀಗ ಚೇತನ್ ಅವರು ಸಂಜು ವೆಡ್ಸ್ ಗೀತಾ II ನೊಂದಿಗೆ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಎನ್ನಲಾಗಿದೆ. ನಾಗಶೇಖರ್ ಚೇತನ್ ಪಾತ್ರವನ್ನು ಹೇಗೆ ತೋರಿಸುತ್ತಾರೆ ಎಂಬುದು ಸದ್ಯ ತೀವ್ರ ಕುತೂಹಲ ಹುಟ್ಟುಹಾಕಿದೆ.

ಸಂಜು ವೆಡ್ಸ್ ಗೀತಾ II ಸಿನಿಮಾಗೆ 'ಲೈಫ್ ಈಸ್ ಬ್ಯೂಟಿಫುಲ್' ಎಂದು ಟ್ಯಾಗ್‌ಲೈನ್ ನೀಡಲಾಗಿದೆ. ಇದನ್ನು ನಾಗಶೇಖರ್ ಮೂವಿ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com