ಅರುಣ್ ಮಾಥೇಶ್ವರನ್ ನಿರ್ದೇಶನದ ನಟ ಧನುಷ್ ಅವರ ಬಹು ನಿರೀಕ್ಷಿತ ಚಿತ್ರ 'ಕ್ಯಾಪ್ಟನ್ ಮಿಲ್ಲರ್' ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಹಿಂದೆ ಡಿಸೆಂಬರ್ 15 ರಂದು ಚಿತ್ರ ಬಿಡುಗಡೆಗೆ ಯೋಜಿಸಲಾಗಿತ್ತು. ಇದೀಗ 2024ರ ಸಂಕ್ರಾಂತಿ ವೇಳೆಗೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಶಿವಕಾರ್ತಿಕೇಯನ್ ಅವರ ಅಯಾಲನ್ ಮತ್ತು ಸುಂದರ್ ಸಿ ಅವರ ಅರಣ್ಮನೈ 4 ಜೊತೆಗೆ ಬಾಕ್ಸ್ ಆಫೀಸಿನಲ್ಲಿ ಪೈಪೋಟಿಗೆ ಕ್ಯಾಪ್ಟನ್ ಮಿಲ್ಲರ್ ಸಿದ್ಧವಾಗಿದೆ.
ಚಿತ್ರದಲ್ಲಿ ಧನುಷ್ ಅವರ ಅಣ್ಣನಾಗಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನುಳಿದಂತೆ, ಪ್ರಿಯಾಂಕಾ ಮೋಹನ್, ಸಂದೀಪ್ ಕಿಶನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಡೇನಿಯಲ್ ಬಾಲಾಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ಸ್ ಬೆಂಬಲಿತ ಈ ಚಿತ್ರವು ಆ್ಯಕ್ಷನ್ ಡ್ರಾಮಾ ಆಗಿದ್ದು, ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಒಳಗೊಂಡಿದೆ.
ಚಿತ್ರಕ್ಕೆ ಜಿವಿ ಪ್ರಕಾಶ್ ಅವರು ಸಂಗೀತ ಸಂಯೋಜಿಸಿದ್ದು, ಸಿದ್ಧಾರ್ಥ್ ನುನಿ ಅವರ ಛಾಯಾಗ್ರಹಣವಿದೆ. ಲೈಕಾ ಪ್ರೊಡಕ್ಷನ್ಸ್ ಈ ಚಿತ್ರ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ ಮತ್ತು ಚಿತ್ರವನ್ನು ವಿದೇಶದಲ್ಲಿಯೂ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.
ಕ್ಯಾಪ್ಟನ್ ಮಿಲ್ಲರ್ ನಂತರ, ಧನುಷ್ ಮತ್ತು ಅರುಣ್ ಮತ್ತೊಂದು ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರಕ್ಕೆ ವಂಡರ್‌ಬಾರ್ ಫಿಲ್ಮ್ಸ್ ಬೆಂಬಲ ನೀಡಲಿದೆ.
Advertisement