ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ ನಟ ಶಿವರಾಜ್‌ಕುಮಾರ್!
ರಜಿನಿಕಾಂತ್ ಅಭಿನಯದ ಜೈಲರ್ ಚಿತ್ರದ ಮೂಲಕ ಶಿವರಾಜಕುಮಾರ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಈಮಧ್ಯೆ, ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಭಾಗವಾಗಿದ್ದ ಶಿವರಾಜ್‌ಕುಮಾರ್, ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
Published: 21st June 2023 11:16 AM | Last Updated: 21st June 2023 11:19 AM | A+A A-

ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್
ರಜಿನಿಕಾಂತ್ ಅಭಿನಯದ ಜೈಲರ್ ಚಿತ್ರದ ಮೂಲಕ ಶಿವರಾಜಕುಮಾರ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಈಮಧ್ಯೆ, ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಭಾಗವಾಗಿದ್ದ ಶಿವರಾಜ್‌ಕುಮಾರ್, ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಟ ಆರು ತಿಂಗಳು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಈ ಚಿತ್ರವನ್ನು ರಾಕಿ ಖ್ಯಾತಿಯ ಅರುಣ್ ಮಾಥೇಶ್ವರನ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಧನುಷ್ ಅವರ ಅಣ್ಣನಾಗಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನುಳಿದಂತೆ, ಪ್ರಿಯಾಂಕಾ ಮೋಹನ್, ಸಂದೀಪ್ ಕಿಶನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಡೇನಿಯಲ್ ಬಾಲಾಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್ ಭಾಗಿ
ಚಿತ್ರತಂಡ ಜುಲೈ 28 ರಂದು ಧನುಷ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್-ಲುಕ್ ಟೀಸರ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಚಿತ್ರವು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದರೂ, ಬಿಡುಗಡೆ ದಿನಾಂಕದ ದೃಢೀಕರಣ ಇನ್ನೂ ಬರಬೇಕಿದೆ.