ಚಂದ್ರ ಮೋಹನ್
ಚಂದ್ರ ಮೋಹನ್

ಟಾಲಿವುಡ್ ಹಿರಿಯ ನಟ ಚಂದ್ರ ಮೋಹನ್ ವಿಧಿವಶ

ತೆಲುಗು ಚಿತ್ರರಂಗದ ಹಿರಿಯ ನಟ ಚಂದ್ರ ಮೋಹನ್ (82) ಅವರು ಹೃದಯಾಘಾತದಿಂದ ಶನಿವಾರ ವಿಧಿವಶರಾಗಿದ್ದಾರೆ.
Published on

ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಯ ನಟ ಚಂದ್ರ ಮೋಹನ್ (82) ಅವರು ಹೃದಯಾಘಾತದಿಂದ ಶನಿವಾರ ವಿಧಿವಶರಾಗಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ಚಂದ್ರಮೋಹನ್ ಅವರು ಇಂದು ಬೆಳಗ್ಗೆ 9:45 ಕ್ಕೆ ಕೊನೆಯುಸಿರೆಳೆದಿದ್ದಾರೆ. ಚಂದ್ರ ಮೋಹನ್ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಚಂದ್ರಮೋಹನ್ ತಮ್ಮ ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಚಂದ್ರ ಮೋಹನ್ 1966 ರಲ್ಲಿ ತೆರೆಕಂಡ ‘ರಂಗುಲಾ ರತ್ನಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿನ ಅವರ ಪ್ರಭಾವಶಾಲಿ ಅಭಿನಯವು ಅವರಿಗೆ ಅತ್ಯುತ್ತಮ ನಟನಿಗಾಗಿ ಪ್ರತಿಷ್ಠಿತ ರಾಜ್ಯ ನಂದಿ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.

“ಪದಹರೆಲ್ಲಾ ವಯಸು” (1978) ಮತ್ತು “ಸಿರಿ ಸಿರಿ ಮುವ್ವ” (1978) ನಂತಹ ಚಲನಚಿತ್ರಗಳಿಗೆ ಗಮನಾರ್ಹ ಕೊಡುಗೆಗಳು ಅವರಿಗೆ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು (ತೆಲುಗು) ಗಳಿಸಿಕೊಟ್ಟವು. ಇದಲ್ಲದೆ, “ಚಂದಮಾಮ ರಾವೆ” (1987) ಚಿತ್ರದಲ್ಲಿನ ಅತ್ಯುತ್ತಮ ಪಾತ್ರ ನಟನಿಗಾಗಿ ನಂದಿ ಪ್ರಶಸ್ತಿ ಮತ್ತು “ಅಥನೊಕ್ಕಡೆ” (2005) ನಲ್ಲಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನು ಪಡೆದರು.

ಟಾಲಿವುಡ್ ಸಂತಾಪ
ಹಿರಿಯ ನಟ ಚಂದ್ರಮೋಹನ್ ನಿಧನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜಕೀಯ ಕ್ಷೇತ್ರದ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ.

ಚಂದ್ರ ಮೋಹನ್ ಅವರ ನಿಧನಕ್ಕೆ ಜ್ಯೂನಿಯರ್‌ ಎನ್‌ಟಿಆರ್ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಹಲವು ದಶಕಗಳಿಂದ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ವಿಶೇಷ ಮನ್ನಣೆ ಗಳಿಸಿರುವ ಚಂದ್ರಮೋಹನ್ ಅವರ ಅಕಾಲಿಕ ಮರಣ ತುಂಬಾ ದುಃಖಕರವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com