
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದಂತೆಯೇ ಸ್ಪರ್ಧೆ ಕೂಡ ಜೋರಾಗಿದೆ. ಬಿಗ್ ಮನೆಯಲ್ಲಿ ಕಾರ್ತಿಕ್-ಸಂಗೀತಾ ಕಿರಿಕ್ ಮಾಡಿಕೊಂಡಿದ್ದು, ಈ ಹಗ್ಗಜಗ್ಗಾಟದ ಬಳಿಕ ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಸಂಗೀತಾ ಆವರು ಮನೆಯಲ್ಲೇ ಉಳಿದುಕೊಂಡಿರುವುದು ಕಂಡು ಬಂದಿದೆ.
ಕಾರ್ತಿಕ್ ಮಹೇಶ್, ತನಿಷಾ ಕುಪ್ಪಂಡ ಸ್ನೇಹಿತರಿಂದ ದೂರವಾಗಿ ವಿನಯ್ ಗೌಡ ತಂಡ ಸೇರಿಕೊಂಡಿದ್ದ ಸಂಗೀತಾ ಶೃಂಗೇರಿ ಅವರು, ಟಾಸ್ಕ್ ವೊಂದರಲ್ಲಿ ಕಾರ್ತಿಕ್ ತಲೆಬೋಳಿಸಿಕೊಳ್ಳುವ ಸವಾಲ್ ಹಾಕಿದ್ದರು. ಹಾಗೆಯೇ ತನಿಷಾ ಕುಪ್ಪಂಡ ಅವರು ಮೆಣಸಿನಕಾಯಿ ತಿನ್ನಲೂ ಕಾರಣರಾಗಿದ್ದರು. ಇದಾದ ಬಳಿಕ ಎಲ್ಲರೂ ಸಂಗೀತಾರನ್ನು ದೂಷಿಸಿದ್ದರು.
ಈ ನಡುವಲ್ಲೇ ಕಾರ್ತಿಕ್, ಸಂತೋಷ್ ತಲೆ ಬೋಳಿಸಿಕೊಂಡಿದ್ದು, ತನಿಷಾ ಮೆಣಸಿನ ಕಾಯಿ ತಿಂದು ನೋವು ಅನುಭವಿಸಿದ್ದು ಸಂಗೀತಾ ಮನಸ್ಸಿನಲ್ಲಿ ಪಶ್ಚಾತ್ತಾಪ ಹುಟ್ಟಿಸಿದೆಯಾ ಎಂಬ ಅನುಮಾನ ಮೂಡಿಸಿತ್ತು.
ಇದಾದ ಬಳಿಕ ಕಾರ್ತಿಕ್ ಜೊತೆ ಸಂಗೀತಾ ಅವರು ಜಗಳ ಮಾಡಿಕೊಂಡಿದ್ದು, ಈ ಜಗಳ ಸಂಗೀತಾ ಅವರಿಗೆ ಸಾಕಷ್ಟು ಬೇಸರ ತರಿಸಿದೆ ಎನ್ನಲಾಗಿತ್ತು. ಈ ನಡುವಲ್ಲೇ JioCinema ಬಿಡುಗಡೆ ಮಾಡಿದ್ದ ಪ್ರೋಮೋ ವಿಡಿಯೋವೊಂದು ಸಂಗೀತಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಕುರಿತು ಗೊಂದಲಗಳನ್ನು ಸೃಷ್ಟಿಸಿತ್ತು.
ಪ್ರೋಮೋದಲ್ಲಿ ಸಂಗೀತಾ ಅವರು ಅಳುತ್ತಿರುವುದು, ನನಗೆ ಈ ಗೇಮ್ ಆಡಲು ಇಷ್ಟವಿಲ್ಲ. ಪ್ಲೀಸ್ ಬಿಗ್ ಬಾಸ್’ ಎಂದು ಬೇಡಿಕೊಳ್ಳುತ್ತಿರುವುದು, ಅದರ ಬೆನ್ನಿಗೇ ಮನೆಯ ಮುಖ್ಯದ್ವಾರ ತೆರೆದುಕೊಂಡಿರುವುದು ಕಂಡು ಬಂದಿತ್ತು.
ವಿಡಿಯೋ ಬೆನ್ನಲ್ಲೇ ಸಂಗೀತಾ ಮನೆಯಿಂದ ಹೊರಗೆ ಹೋದರಾ? ಅಥವಾ ಒಳಗೇ ಉಳಿದುಕೊಂಡಿದ್ದಾರಾ? ಎಂಬುದರ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಆದರೆ, ಇಂದು ಸಂಗೀತಾ ಅವರು ಮನೆಯಲ್ಲಿಯೇ ಉಳಿದುಕೊಂಡಿರುವುದ ಕಂಡು ಬಂದಿದೆ.
JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡದ ನೇರಪ್ರಸಾರದಲ್ಲಿ ಸಂಗೀತಾ ಅವರು ಬಿಗ್ ಬಾಸ್ ಮನೆಯಲ್ಲಿಯೇ ಇರುವುದು ಕಂಡು ಬಂದಿದೆ.
Advertisement