ಹನಿಟ್ರ್ಯಾಪ್‌ ಮೂಲಕ ಚಿಂಗಾರಿ ಸಿನಿಮಾ ನಿರ್ಮಾಪಕನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಿರ್ದೇಶಕನ ಬಂಧನ

ಹನಿಟ್ರ್ಯಾಪ್‌ ಮಾಡಿ ಯುವತಿಯರ ಮೂಲಕ ನಿರ್ಮಾಪಕನಿಂದ ಹಣ ಕಿತ್ತ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ರವೀಂದ್ರ ಎಂಬ ಚಲನಚಿತ್ರ ನಿರ್ದೇಶಕ ಈ ಕೃತ್ಯ ಎಸಗಿದ್ದಾನೆ.
ನಿರ್ದೇಶಕ ರವೀಂದ್ರ
ನಿರ್ದೇಶಕ ರವೀಂದ್ರ

ಬೆಂಗಳೂರು: ಹನಿಟ್ರ್ಯಾಪ್‌ ಮಾಡಿ ಯುವತಿಯರ ಮೂಲಕ ನಿರ್ಮಾಪಕನಿಂದ ಹಣ ಕಿತ್ತ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ರವೀಂದ್ರ ಎಂಬ ಚಲನಚಿತ್ರ ನಿರ್ದೇಶಕ ಈ ಕೃತ್ಯ ಎಸಗಿದ್ದಾನೆ.

ನಿರ್ಮಾಪಕ ಚಿಂಗಾರಿ ಮಹಾದೇವ್ ಅವರಿಗೆ ಹುಡುಗಿಯರ ಮುಖಾಂತರ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ರವೀಂದ್ರ.  ಆರೋಪಿ ರವೀಂದ್ರ ಕೇವಲ ನಿರ್ಮಾಪಕ ಚಿಂಗಾರಿ ಮಹಾದೇವ್ ಅವರಿಗೆ ಮಾತ್ರವಲ್ಲದೆ, ಯುವತಿಯರ ಮುಖಾಂತರ ಹಲವು ನಿರ್ಮಾಪಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿಯೂ ತಿಳಿದು ಬಂದಿದೆ.

ನಿರ್ಮಾಪಕ ಚಿ೦ಗಾರಿ ಮಹಾದೇವ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಿರ್ದೇಶಕ ರವೀ೦ದ್ರ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. “ಚಿ೦ಗಾರಿ’, “ಶ್ರೀಕ೦ಠ’, ‘ಶಿಶಿರ’ ಸಿನಿಮಾಗಳನ್ನು ಚಿ೦ಗಾರಿ ಮಹದೇವ ನಿರ್ಮಾಣ ಮಾಡಿದ್ದಾರೆ.

‘ಬಾರಬಾತ್‌’ ಸಿನಿಮಾ ನಿರ್ದೇಶಕ ರವೀಂದ್ರ ಯುವತಿಯರ ಮೂಲಕ ಹನಿಟ್ರ್ಯಾಪ್‌ ಮಾಡಿ ಬೆದರಿಸಿ ಹಣ ಪಡೆದ ಆರೋಪ ಕೇಳಿಬ೦ದಿದ್ದು, ಪೊಲೀಸರು ಕ್ರಮಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com