ನಟ ಅಭಿಶೇಕ್ ಅಂಬರೀಶ್
ಸಿನಿಮಾ ಸುದ್ದಿ
ಗಲ್ಲಾಪೆಟ್ಟಿಗೆಯಲ್ಲಿ ಸೂರಿ-ಅಭಿಷೇಕ್ ಅಂಬರೀಶ್ ಜೋಡಿಯ 'ಬ್ಯಾಡ್ ಮ್ಯಾನರ್ಸ್' ಕಮಾಲ್!
ಅಭಿಷೇಕ್ ಅಂಬರೀಶ್ ಅಭಿನಯದ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರ ನವೆಂಬರ್ 24 ರಂದು ತೆರೆಗೆ ಬಂದಿದ್ದು, 6.5 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದುಕೊಂಡಿದೆ. ವಿಶೇಷವಾಗಿ ನಟ ಅಭಿಷೇಕ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಭಿಷೇಕ್ ಅವರ ರಗಡ್ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದು, ನಿರ್ದೇಶಕ ಸೂರಿ ಅವರ ವಿಶಿಷ್ಟ ಮತ್ತು ಆಕರ್ಷಕ ಕಥೆ ಹೇಳುವಿಕೆ, ಚರಣ್ ರಾಜ್ ಅವರ ಸಂಗೀತ ಮತ್ತು ಶೇಖರ್ ಅವರ ಛಾಯಾಗ್ರಹಣವು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಎಲ್ಲೆಡೆಯಿಂದ ಸಿನಿ ಪ್ರಿಯರು ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕೆಎಂ ಸುಧೀರ್ ನಿರ್ಮಿಸಿ ಜಯಣ್ಣ ವಿತರಿಸಿರುವ ಈ ಚಿತ್ರದಲ್ಲಿ ರಚಿತಾ ರಾಮ್, ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ. ಸದ್ಯ ನಟ ಅಭಿಷೇಕ್, ನಿರ್ಮಾಪಕರು ಮತ್ತು ಚಿತ್ರತಂಡ ಕರ್ನಾಟಕದಾದ್ಯಂತ ಪ್ರವಾಸದಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ