ಸೂಟಿನ ಕಥೆ ಹೇಳಲು ಬರುತ್ತಿದೆ 'ದ ಸೂಟ್'; ಇದು ಕೇವಲ ಉಡುಪಲ್ಲ, ಅದಕ್ಕಿಂತ ಹೆಚ್ಚಿನದು; ನಿರ್ದೇಶಕ ಭಗತ್ ರಾಜ್

ವಿಶೇಷ ಸಂದರ್ಭಗಳಲ್ಲಿ ಸೂಟ ಧರಿಸುವುದು ಸಾಮಾನ್ಯವಾಗಿ ವಾಡಿಕೆಯಲ್ಲಿದೆ. ಇದೀಗ ಈ ಉಡುಪಿನ ಹಿಂದಿನ ಭಾವನೆಯನ್ನು ಅನ್ವೇಷಿಸಲು ಬರುತ್ತಿದೆ 'ದ ಸೂಟ್' ಸಿನಿಮಾ. ಇತ್ತೀಚೆಗಷ್ಟೇ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಹಾಡುಗಳನ್ನು ಬಿಡುಗಡೆ ಮಾಡಿದೆ.
ದ ಸೂಟ್ ಚಿತ್ರದ ಪೋಸ್ಟರ್

ದ ಸೂಟ್‌ ಚಿತ್ರದ ನಿರ್ದೇಶಕ ಭಗತ್ ರಾಜ್ ಈ ಉಡುಪಿನ ವಿಶಿಷ್ಟ ಮಹತ್ವವನ್ನು ಹೇಳಿದರು. 'ಅತಿಥಿ ದೇವೋಭವ' ಎಂಬ ಅಡಿಬರಹ ಹೊಂದಿರುವ ಈ ಸಿನಿಮಾ, ಕೇವಲ ಉಡುಪಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತದೆ. ಅದು ಬದ್ಧತೆ ಮತ್ತು ಮದುವೆಯಲ್ಲಿ ರಕ್ಷಣೆಯನ್ನು ಸಂಕೇತಿಸುತ್ತದೆ. ನಮ್ಮ ಚಿತ್ರದಲ್ಲಿ ಸೂಟ್ ಎಂಬುದು ಬಾಹ್ಯ ಲುಕ್‌ಗಳು ಕೆಲವೊಮ್ಮೆ ಆಂತರಿಕ ಆಲೋಚನೆಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದನ್ನು ಸಂಕೇತಿಸುತ್ತದೆ' ಎಂದು ಭಗತ್ ರಾಜ್ ಹೇಳಿದರು.

ಹೆಸರಾಂತ ವ್ಯಕ್ತಿಗಳು ಈ ಸೂಟ್ ಬಗ್ಗೆ ಕವನಗಳನ್ನು ಬರೆದಿದ್ದಾರೆ. ಅವುಗಳನ್ನು ಸಿನಿಮಾಗಾಗಿ ಹಾಡುಗಳಾಗಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು. 

ದ ಸೂಟ್ ಅನ್ನು ರಾಮಸ್ವಾಮಿ ನಿರ್ಮಿಸಿದ್ದು, ಕಿರಣ್ ಶಂಕರ್ ಅವರ ಸಂಗೀತ ಸಂಯೋಜನೆ ಮತ್ತು ಕಿರಣ್ ಹಂಪಾಪುರ ಅವರ ಛಾಯಾಗ್ರಹಣವಿದೆ. ಈ ಚಿತ್ರಕ್ಕೆ ಐವತ್ತಕ್ಕೂ ಹೆಚ್ಚು ಕಲಾವಿದರು ತಮ್ಮ ಕೊಡುಗೆ ನೀಡಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು ನಿರ್ದೇಶಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com