ಕೈವ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ದರ್ಶನ್; ಧನ್ವೀರ್‌ಗೆ ಪುಂಗನೂರು ಕರು ಗಿಫ್ಟ್, ಅಭಿಮಾನಿಗಳಿಗೆ ಕಿವಿಮಾತು

ಕೈವ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಖ್ಯಾತ ನಟರಾದ ದರ್ಶನ್, ನಟಿ ಆಶಾ ಭಟ್, ನಟ ಅಭಿಷೇಕ್ ಅಂಬರೀಶ್ ಮತ್ತು ಚಿಕ್ಕಣ್ಣ ಭಾಗವಹಿಸಿದ್ದರು. ಅಬ್ಬರದ ನಡುವೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.
ಧನ್ವೀರ್‌ಗೆ ಕರುವನ್ನು ಗಿಫ್ಟ್ ಆಗಿ ನೀಡಿದ ನಟ ದರ್ಶನ್
ಧನ್ವೀರ್‌ಗೆ ಕರುವನ್ನು ಗಿಫ್ಟ್ ಆಗಿ ನೀಡಿದ ನಟ ದರ್ಶನ್
Updated on

ಕೈವ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಖ್ಯಾತ ನಟರಾದ ದರ್ಶನ್, ನಟಿ ಆಶಾ ಭಟ್, ನಟ ಅಭಿಷೇಕ್ ಅಂಬರೀಶ್ ಮತ್ತು ಚಿಕ್ಕಣ್ಣ ಭಾಗವಹಿಸಿದ್ದರು. ಅಬ್ಬರದ ನಡುವೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಕನ್ನಡ ಚಿತ್ರರಂಗವನ್ನು ಬೆಂಬಲಿಸುವಂತೆ ಒತ್ತಾಯಿಸಿದರು. ಕಟೌಟ್‌ಗಳ ಮೇಲೆ ಹಾಲನ್ನು ಸುರಿದು ವ್ಯರ್ಥ ಮಾಡದಂತೆ ಹೇಳಿದ ಅವರು, ಅದರ ಬದಲಿಗೆ ನಾಯಿಗಳಿಗೆ ನೀಡುವಂತೆ ಸಲಹೆ ನೀಡಿದರು.

ಧನ್ವೀರ್ ಮತ್ತು ಮೇಘಾ ಶೆಟ್ಟಿ ನಟಿಸಿರುವ ಈ ಚಿತ್ರವು ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆಯುವ ಕರಗ ಉತ್ಸವದ ಹಿನ್ನೆಲೆಯಲ್ಲಿ 1983ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ನಿರ್ದೇಶಕ ಜಯತೀರ್ಥ ಅವರು ಇದೇ ಮೊದಲ ಬಾರಿಗೆ ಆ್ಯಕ್ಷನ್ ಎಂಟರ್‌ಟೈನರ್ ಅನ್ನು ನಿರ್ದೇಶಿಸಿದ್ದಾರೆ. 

ಚಿತ್ರದಲ್ಲಿ ನಿರ್ದೇಶಕರಾದ ದಿನಕರ್ ತೂಗುದೀಪ, ಗಿರಿರಾಜ್ ಬಿಎಂ, ರಘು ಶಿವಮೊಗ್ಗ, ರಮೇಶ್ ಇಂದಿರಾ ಮತ್ತು ನಂದಕುಮಾರ್ ಅವರು ನಟರಾಗಿ ಚಿತ್ರಕ್ಕಾಗಿ ಕ್ಯಾಮೆರಾ ಎದುರಿಸಿದ್ದಾರೆ. ಈ ಕುರಿತು ಮಾತನಾಡಿದ ನಿರ್ದೇಶಕ ಜಯತೀರ್ಥ, ಇದು ಪ್ರೇಕ್ಷಕರಿಗೆ ಅನನ್ಯ ಅನುಭವವಾಗಲಿದೆ ಎಂದರು.

ಚಿತ್ರದ ಇನ್ನುಳಿದ ತಾರಾಗಣದಲ್ಲಿ, ಜಯರಾಮ್ ಕಾರ್ತಿಕ್, ಜಾಹ್ನವಿ ರಾಯಲ್, ಅಶ್ವಿನ್ ಹಾಸನ ಮುಂತಾದವರು ಇದ್ದಾರೆ.
ವಿಶೇಷವೆಂದರೆ, ದರ್ಶನ್ ಅಭಿಮಾನಿಯಾದ ಧನ್ವೀರ್ ಅವರಿಗೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಪ್ರೀತಿಯಿಂದ 'ಶೋಕ್ ಧಾರ್' ಎಂಬ ಹೆಸರಿನ ಪುಂಗನೂರು ಕರುವನ್ನು ಉಡುಗೊರೆಯಾಗಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com