ಕ್ಲಾಂತ ಸಿನಿಮಾದ ಟೀಸರ್ ಬಿಡುಗಡೆ; ಚಿತ್ರರಂಗದ ಹೊಸ ಸವಾಲುಗಳ ಬಗ್ಗೆ ನಟಿ ಸಂಗೀತಾ ಭಟ್ ಮಾತು

ಪ್ರೀತಿ ಗೀತಿ ಇತ್ಯಾದಿ, ಎರಡನೆ ಸಲ, ಮತ್ತು ದಯವಿಟ್ಟು ಗಮನಿಸಿ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ಸಂಗೀತಾ ಭಟ್, 2018ರಲ್ಲಿ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ಇದೀಗ ವೈಭವ್ ಪ್ರಶಾಂತ್ ನಿರ್ದೇಶನದ ಮುಂಬರುವ ಚಿತ್ರ 'ಕ್ಲಾಂತ' ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ. 
ಸಂಗೀತಾ ಭಟ್
ಸಂಗೀತಾ ಭಟ್
Updated on

ಪ್ರೀತಿ ಗೀತಿ ಇತ್ಯಾದಿ, ಎರಡನೇಸಲ, ಮತ್ತು ದಯವಿಟ್ಟು ಗಮನಿಸಿ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ಸಂಗೀತಾ ಭಟ್, 2018ರಲ್ಲಿ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ಈ ವಿರಾಮದ ಸಮಯದಲ್ಲಿಯೂ ಅವರು ಕಿಸ್ಮತ್, ಅನುಕ್ತ, ಕಪಟ ನಾಟಕ ಪಾತ್ರದಾರಿ, ಅಳಿದು ಉಳಿದವರು ಮತ್ತು ಆದ್ಯ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಧಾರಾವಾಹಿ ಮತ್ತು ಚಲನಚಿತ್ರ ಎರಡರಲ್ಲೂ ಅಭಿನಯಿಸುತ್ತಿದ್ದ ಈ ಬಹುಮುಖ ನಟಿ ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಲು ಉತ್ಸುಕರಾಗಿದ್ದಾರೆ.

ವೈಭವ್ ಪ್ರಶಾಂತ್ ನಿರ್ದೇಶನದ ಅವರ ಮುಂಬರುವ ಚಿತ್ರ 'ಕ್ಲಾಂತ' ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲರ್ ಎಂದು ಹೇಳಲಾಗಿದ್ದು, ದಟ್ಟವಾದ ಕಾಡಿನ ಮೂಲಕ ತೆರಳುವ ವೇಳೆ ಗ್ಯಾಂಗ್ ದಾಳಿಯನ್ನು ಎದುರಿಸುವ ಇಬ್ಬರು ಯುವ ಪ್ರೇಮಿಗಳ ಸುತ್ತ ಸುತ್ತುತ್ತದೆ. ಟೀಸರ್ ಗ್ಯಾಂಗ್‌ನೊಂದಿಗಿನ ಅವರ ಮುಖಾಮುಖಿ ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಒಂದು ನೋಟವನ್ನು ನೀಡುತ್ತದೆ. 

ಚಿತ್ರದಲ್ಲಿ ವಿಘ್ನೇಶ್ ನಾಯಕನಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿನ ಪಾತ್ರವು ತನ್ನ 'ಪಕ್ಕದ ಮನೆಯ ಹುಡುಗಿ' ಚಿತ್ರದ ಪಾತ್ರಕ್ಕಿಂತ ಭಿನ್ನವಾಗಿದೆ ಎಂದು ಸಂಗೀತಾ ಒಪ್ಪಿಕೊಂಡಿದ್ದಾರೆ. 'ನಾನು ಕ್ಲಾಂತ ಸಿನಿಮಾದಲ್ಲಿ ಆ್ಯಕ್ಷನ್ ಸ್ಟಂಟ್ಸ್‌ಗಳನ್ನು ಹೊಂದಿದ್ದೇನೆ' ಎಂದು ಅವರು ಉಲ್ಲೇಖಿಸುತ್ತಾರೆ.

ಚಿತ್ರರಂಗದಿಂದ ವಿರಾಮ ತೆಗೆದುಕೊಂಡಿದ್ದಕ್ಕೆ ವಿಷಾದಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಗೀತಾ, 'ನಾನು ವಿಷಾದಿಸುತ್ತೇನೆ. ನಾನು ಚಲನಚಿತ್ರಗಳನ್ನು ತೊರೆದಾಗ, ಅನೇಕ ಅವಕಾಶಗಳು ತಪ್ಪಿಹೋದವು. ಈಗ, ಮತ್ತೆ ಹಿಂದಿರುಗುವ ವೇಳೆಯಲ್ಲಿ ವಿಶೇಷವಾಗಿ ಕೋವಿಡ್ ನಂತರ ಚಿತ್ರರಂಗದ ಡೈನಮಿಕ್ಸ್ ಬದಲಾಗಿದೆ. ಈಗ ಚಿತ್ರೋದ್ಯಮದಲ್ಲಿ ತಯಾರಾಗುತ್ತಿರುವ ವಿವಿಧ ರೀತಿಯ ಚಲನಚಿತ್ರಗಳು ಮತ್ತು ಲಭ್ಯವಿರುವ ಅವಕಾಶಗಳು ರೂಪಾಂತರಗೊಂಡ ಮಾರುಕಟ್ಟೆಯನ್ನು ಸೂಚಿಸುತ್ತವೆ. ಈ ರೂಪಾಂತರವು ಧನಾತ್ಮಕ ಅಥವಾ ಋಣಾತ್ಮಕ ಫಲಿತಾಂಶಗಳನ್ನು ಹೊಂದಿರುತ್ತದೆ' ಎನ್ನುತ್ತಾರೆ. 

<b>ಕ್ಲಾಂತ ಚಿತ್ರದ ದೃಶ್ಯ.</b>
ಕ್ಲಾಂತ ಚಿತ್ರದ ದೃಶ್ಯ.

ಚಿತ್ರರಂಗಕ್ಕೆ ಪುನರಾಗಮನದ ಬಗ್ಗೆ ಮಾತನಾಡುವ ಅವರು, ಅನೇಕ ವರ್ಷಗಳಿಂದಲೂ ನಟನೆಯೊಂದೇ ನನ್ನ ಏಕೈಕ ಪ್ಯಾಶನ್ ಆಗಿದೆ ಮತ್ತು ನಾನು ಅದನ್ನು ಬಿಡಲು ಸಾಧ್ಯವಾಗಲಿಲ್ಲ. ನಾನು ಜರ್ಮನಿಯಲ್ಲಿದ್ದಾಗ ಕಲಾವಿದರೂ ಆಗಿರುವ ನನ್ನ ಪತಿ ಸುದರ್ಶನ್ ಅವರು ನನ್ನಲ್ಲಿ ಆಗಿದ್ದ ಬದಲಾವಣೆಯನ್ನು ಗಮನಿಸಿದರುವ ಮತ್ತು ಚರ್ಚಿಸಿದರು. ಕಲೆಯ ಮೇಲಿನ ನನ್ನ ಪ್ರೀತಿಯನ್ನು ನಾನು ಅರಿತುಕೊಂಡೆ ಮತ್ತು ನನ್ನ ವೃತ್ತಿಜೀವನಕ್ಕೆ ಮರಳುವ ಮತ್ತು ಪುನರಾರಂಭಿಸುವ ಅಗತ್ಯವನ್ನು ನಾನು ಅರಿತುಕೊಂಡೆ ಎನ್ನುತ್ತಾರೆ ಸಂಗೀತಾ.

ಈಗ ಮತ್ತೆ ಉದ್ಯಮಕ್ಕೆ ಮರಳಿರುವ ಸಂಗೀತಾ, ಹಲವು ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಫಿಟ್‌ನೆಸ್‌ ವಿಚಾರದಲ್ಲಿ ಹೆಚ್ಚಿನ ಗಮನ ಅಗತ್ಯ ಎಂದು ಒತ್ತಿಹೇಳುತ್ತಾರೆ. ಜರ್ಮನಿಯಲ್ಲಿರುವಾಗ ದೊರಕಿದ ಸಮಯವು ಅವರ ದೃಷ್ಟಿಕೋನವನ್ನು ವಿಸ್ತರಿಸಿತು. ಅವರನ್ನು ಹೆಚ್ಚು ಮುಕ್ತ ಮತ್ತು ವಿಮೋಚನೆಗೊಳಿಸಿತು ಎಂದು ಅವರು ಹಂಚಿಕೊಳ್ಳುತ್ತಾರೆ. 

'ಬೇರೆ ದೇಶದಲ್ಲಿ ವಾಸಿಸುವುದು ನನ್ನ ಕಂಫರ್ಟ್ ಝೋನ್‌ನಿಂದ ಹೊರಬರಲು, ವಿವಿಧ ಸಂಪ್ರದಾಯಗಳನ್ನು ಅನುಭವಿಸಲು ಮತ್ತು ಹೆಚ್ಚು ಮುಕ್ತ ಮನಸ್ಸಿನವಳಾಗಲು ನನಗೆ ಸಹಾಯ ಮಾಡಿತು. ಟೀಕೆಗಳನ್ನು ಎದುರಿಸುತ್ತಿದ್ದರೂ, ನಾನು ಅಡೆತಡೆಗಳನ್ನು ಮುರಿಯಲು ಮತ್ತು ಸಾಮಾಜಿಕ ನಿಯಮಗಳಿಗೆ ಸವಾಲು ಹಾಕುವ ಗುರಿಯನ್ನು ಹೊಂದಿದ್ದೇನೆ. ನಾನು ಯಾವುದೇ ಅರ್ಥಪೂರ್ಣ ಪಾತ್ರಕ್ಕೆ ತೆರೆದುಕೊಳ್ಳುತ್ತೇನೆ' ಎಂದು ಹೇಳುತ್ತಾರೆ ಸಂಗೀತಾ.

<strong>ಸಂಗೀತಾ ಭಟ್</strong>
ಸಂಗೀತಾ ಭಟ್

ಸಂಗೀತಾ ಅವರು ಹೊಸಬರ ಕಡೆಗೆ ಉದ್ಯಮದ ಒಲವನ್ನು ಗಮನಿಸುತ್ತಾರೆ. ಅದನ್ನು ಅವರು ಸಕಾರಾತ್ಮಕವಾಗಿ ನೋಡುತ್ತಾರೆ. ಆದಾಗ್ಯೂ, ಅನುಭವಿ ನಟರು ಹೊಸ ಪ್ರತಿಭೆಗಳ ಜೊತೆಗೆ ಮೌಲ್ಯಯುತವಾಗಿ ಮುಂದುವರಿಯಬೇಕು. 'ಅನುಭವಿ ನಟರು, ಹೊಸಬರ ಜೊತೆಗೆ ಹೊಂದಿಕೊಂಡರೆ, ಮೌಲ್ಯಯುತವಾದ ಉದ್ಯಮದ ಅನುಭವವನ್ನು ನೀಡಬಹುದು' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com