ಪ್ರಜ್ವಲ್ ದೇವರಾಜ್‌ 40ನೇ ಸಿನಿಮಾಗೆ ‘ಅಂಬಿ ನಿಂಗ್​ ವಯಸ್ಸಾಯ್ತೋ’ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್​-ಕಟ್​

ಒಂದೆರಡು ಇಂಟರೆಸ್ಟಿಂಗ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಪ್ರಜ್ವಲ್ ದೇವರಾಜ್ ಇದೀಗ ತಮ್ಮ 40ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಅವರ ಜೊತೆ ಕೆಲಸ ಮಾಡಲಿದ್ದಾರೆ. 
ಪ್ರಜ್ವಲ್ ದೇವರಾಜ್ - ಗುರುದತ್ ಗಾಣಿಗ
ಪ್ರಜ್ವಲ್ ದೇವರಾಜ್ - ಗುರುದತ್ ಗಾಣಿಗ

ಒಂದೆರಡು ಇಂಟರೆಸ್ಟಿಂಗ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಪ್ರಜ್ವಲ್ ದೇವರಾಜ್ ಇದೀಗ ತಮ್ಮ 40ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಅವರ ಜೊತೆ ಕೆಲಸ ಮಾಡಲಿದ್ದಾರೆ. 
ಈ ಹೊಸ ಚಿತ್ರದ ಪೋಸ್ಟರ್ ನವರಾತ್ರಿಯ ಮೊದಲ ದಿನ ಅನಾವರಣ ಆಗಿದೆ. ಚಿತ್ರದ ಪೋಸ್ಟರ್ ಕಂಬಳ ಕುರಿತಾದ ಸಿನಿಮಾ ಎಂಬುದನ್ನು ತಿಳಿಸುತ್ತದೆ ಮತ್ತು ಕರಾವಳಿ ಭಾಗದ ಕಥೆಯನ್ನು ಹೊಂದಿರಲಿದೆ. 

ಪೋಸ್ಟರ್ ಪ್ರಮುಖವಾಗಿ ಬೃಹದಾಕಾರದ ಎಮ್ಮೆಯನ್ನು ಒಳಗೊಂಡಿದೆ. ಪ್ರಕೃತಿಯ ಮುಂದೆ ಮಾನವ ಸಣ್ಣವನು ಎನ್ನುವ ಸಂದೇಶವನ್ನು ಪರೋಕ್ಷವಾಗಿ ಹೇಳಿದಂತಿದೆ. ಶಕ್ತಿಯುತವಾದ ಎಮ್ಮೆಯು ನಟನ ಕಡೆಗೆ ತನ್ನ ದೃಷ್ಟಿ ಬೀರುತ್ತಿರುವುದು ಪೋಸ್ಟರ್‌ನ ಹೈಲೈಟ್ ಆಗಿದೆ.

ಕರಾವಳಿ ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಮತ್ತು ಕಥೆಯು ಮಾನವ-ಪ್ರಾಣಿ ಸಂಘರ್ಷವನ್ನು ಅನ್ವೇಷಿಸುತ್ತದೆ ಎಂದು ಗುರುದತ್ ಹಂಚಿಕೊಳ್ಳುತ್ತಾರೆ. ಅಂಬರೀಶ್ ಮತ್ತು ಸುದೀಪ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು 2018ರಲ್ಲಿ ನಿರ್ದೇಶಿಸಿದ್ದ ಗುರುದತ್ ಅವರು, ಆ ಚಿಕ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ ಯಾವುದೇ ಸಿನಿಮಾ ಘೋಷಿಸಿರಲಿಲ್ಲ. ಇದೀಗ ತಮ್ಮ ಎರಡನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. 

ಇತ್ತೀಚೆಗಷ್ಟೇ ಮಾಫಿಯಾ, ಗಣ ಚಿತ್ರಗಳ ಕೆಲಸಗಳನ್ನು ಮುಗಿಸಿರುವ ನಟ ಪ್ರಜ್ವಲ್ ದೇವರಾಜ್, ತಮ್ಮ ಮುಂದಿನ ಇನ್ನೂ ಹೆಸರಿಡದ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಈ ಚಿತ್ರವನ್ನು ಕಲೈ ಮಾಸ್ಟರ್ ನಿರ್ದೇಶಿಸಲಿದ್ದಾರೆ. ಬಳಿಕ ಅವರು ಗುರುದತ್ ಅವರ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಇದು ಮುಂದಿನ ವರ್ಷದ ಜನವರಿಯಲ್ಲಿ ಸೆಟ್ಟೇರುವ ಸಾಧ್ಯತೆಯಿದೆ. 

ನಿರ್ದೇಶನದ ಜವಾಬ್ದಾರಿಯ ಹೊರತಾಗಿ, ಗುರುದತ್ ಗಾಣಿಗ ಅವರು ವಿಕೆ ಫಿಲ್ಮ್ಸ್ ಜೊತೆಗೆ ಗುರುದತ್ ಗಾಣಿಗ ಪಿಲ್ಮ್ಸ್ ಸಂಸ್ಥೆಗಳ ಮೂಲಕ ನಿರ್ಮಾಪಕರ ಪಾತ್ರವನ್ನು ಸಹ ನಿಭಾಯಿಸುತ್ತಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ನೀಡಲಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com