'ಚಿಕ್ಕಿಯ ಮೂಗುತಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್; ಚಿತ್ರತಂಡಕ್ಕೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

ವಸ್ತ್ರ ವಿನ್ಯಾಸಕಿ ಮತ್ತು ಕಾದಂಬರಿಗಾರ್ತಿ ದೇವಿಕಾ ಜನಿತ್ರಿ ಅವರು 'ಚಿಕ್ಕಿಯ ಮೂಗುತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ದೇಶಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್, ತಾರಾ, ಭವಾನಿ ಪ್ರಕಾಶ್ ಮತ್ತು ಆಕಾಂಕ್ಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
ಚಿಕ್ಕಿಯ ಮೂಗುತಿ ಚಿತ್ರದ ನಟಿಯರು
ಚಿಕ್ಕಿಯ ಮೂಗುತಿ ಚಿತ್ರದ ನಟಿಯರು

ವಸ್ತ್ರ ವಿನ್ಯಾಸಕಿ ಮತ್ತು ಕಾದಂಬರಿಗಾರ್ತಿ ದೇವಿಕಾ ಜನಿತ್ರಿ ಅವರು 'ಚಿಕ್ಕಿಯ ಮೂಗುತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ದೇಶಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್, ತಾರಾ, ಭವಾನಿ ಪ್ರಕಾಶ್ ಮತ್ತು ಆಕಾಂಕ್ಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಅವಿನಾಶ್, ತಬಲಾ ನಾಣಿ, ರಂಗಾಯಣ ರಘು ಮತ್ತು ಭರತ್ ಬೋಪಣ್ಣ ಕೂಡ ನಟಿಸಿದ್ದಾರೆ.

ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ ಮುಗಿಸಿದ್ದು, ಫಸ್ಟ್ ಲುಕ್ ಪೋಸ್ಟರ್ ಅನ್ನು ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

40 ಸಣ್ಣ ಕಥೆಗಳನ್ನು ಬರೆದಿರುವ ದೇವಿಕಾ ಜನಿತ್ರಿ ಅವುಗಳಲ್ಲಿ ಒಂದನ್ನು ಬೆಳ್ಳಿತೆರೆಗೆ ತರಲು ನಿರ್ಧರಿಸಿದ್ದಾರೆ. 'ನಿಜ ಹೇಳಬೇಕೆಂದರೆ, ನಾನು ಎಂದಿಗೂ ನಿರ್ದೇಶನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾನು ಬರೆಯುವುದನ್ನೇ ಆನಂದಿಸುತ್ತಿದ್ದೆ. ನನ್ನ ಕಥೆಯ ಹಕ್ಕುಸ್ವಾಮ್ಯದ ಬಗ್ಗೆ ಕೆಲವರು ವಿಚಾರಿಸಲು ಮುಂದಾದಾಗ, ನನ್ನ ಕಥೆಯ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವ ಉದ್ಯಮದ ಹಲವರನ್ನು ಭೇಟಿಯಾದಾಗ ನನ್ನ ಕಥೆಯನ್ನು ನಾನೇ ನಿರ್ದೇಶಿಸುವ ನಿರ್ಧಾರಕ್ಕೆ ಬಂದೆ. ಸುಮಾರು ಐದು ವರ್ಷಗಳ ಹಿಂದೆ ನಾನು ಹೊಂದಿದ್ದ ಕಲ್ಪನೆ ಇದೀಗ ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿದೆ' ಎಂದು ಅವರು ಚಿತ್ರದ ಮೊದಲ ಕೆಲವು ಸ್ಟಿಲ್‌ಗಳನ್ನು ಹಂಚಿಕೊಂಡಿದ್ದಾರೆ.

ಚಿಕ್ಕಿಯ ಮೂಗುತಿ ನಾಲ್ಕು ಕಥೆಗಳನ್ನು ಒಳಗೊಂಡಿದೆ. ಎಲ್ಲವೂ ತಾಯಿಯ ಪ್ರೀತಿಯ ವಿಷಯದ ಸುತ್ತ ಕೇಂದ್ರೀಕೃತವಾಗಿದೆ. ದೇವಿಕಾ ಅವರ ಪ್ರಕಾರ, ಅವರು ಪ್ರಾಣಿಗಳಿಂದ ಮತ್ತು ಅವುಗಳನ್ನು ರಕ್ಷಿಸುವ ತಾಯಿಯ ಪ್ರವೃತ್ತಿಯಿಂದ ಸ್ಫೂರ್ತಿ ಪಡೆದಿದ್ದೇನೆ. ಚಿಕ್ಕಿಯ ಮೂಗುತಿ ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್ 20 ರಂದು ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಜನಿತ್ರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಕ್ಕೆ 'ಲೂಸಿಯಾ' ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲವನ್ನು ವೆಂಕಟೇಶ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com