ನಾನು ಹೊಸ ಹಾಗೂ ವಿಭಿನ್ನ ಪಾತ್ರಗಳಿಗಾಗಿ ಹುಡುಕುತ್ತಿರುತ್ತೇನೆ: ಜಯರಾಮ್

ಹಲವು ವರ್ಷಗಳ ನಿರೀಕ್ಷೆಯ ನಂತರ, ನಾನು ಅಂತಿಮವಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದೆ. ಕಳೆದ ವರ್ಷ ದಸರಾ ಸಂದರ್ಭದಲ್ಲಿ ನಡೆದ ಆಭರಣ ಉತ್ಸವ ಸಮಾರಂಭದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗಿನ ಮಾತುಕತೆ ನಂತರ ಅವಕಾಶ ಒದಗಿ ಬಂತು.
ಜಯರಾಮ್
ಜಯರಾಮ್

ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ "ಘೋಸ್ಟ್‌" ಚಿತ್ರದ ಮೂಲಕ ಕನ್ನಡಕ್ಕೆ ನಟ ಜಯರಾಮ್ ಪಾದಾರ್ಪಣೆ ಮಾಡಿದ್ದಾರೆ.

ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿರುವ ಜಯರಾಮ್ ತಮ್ಮ 36 ವರ್ಷಗಳ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಹಲವು  ವರ್ಷಗಳ ನಿರೀಕ್ಷೆಯ ನಂತರ, ನಾನು ಅಂತಿಮವಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದೆ. ಕಳೆದ ವರ್ಷ ದಸರಾ ಸಂದರ್ಭದಲ್ಲಿ ನಡೆದ ಆಭರಣ ಉತ್ಸವ ಸಮಾರಂಭದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗಿನ ಮಾತುಕತೆ ನಂತರ ಅವಕಾಶ ಒದಗಿ ಬಂತು.

ನಾವು ಸಿನಿಮಾ ಬಗ್ಗೆ ಚರ್ಚಿಸಿದೆವು, ಅವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುವ ಬಯಕೆಯನ್ನು ವ್ಯಕ್ತಪಡಿಸಿದೆ.  ಇದರಿಂದಾಗಿ ಈಗ, ನಾನು ಇಲ್ಲಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾ , ಹೀಗಾಗಿ  ಘೋಸ್ಟ್  ನನ್ನ ಪಾಲಿಗೆ ವಿಶೇಷ ಎಂದಿದ್ದಾರೆ.

ಬಹುಭಾಷಾ  ನಟ ಜಯರಾಮ್ ಸದ್ಯ  ತ್ರಿವಿಕ್ರಮ್-ಮಹೇಶ್ ಬಾಬು ಅವರ ಚಿತ್ರ ಮತ್ತು ಶಂಕರ್-ರಾಮ್ ಚರಣ್ ಅವರ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 7 ರಂದು ಬಿಡುಗಡೆಯಾಗಲಿರುವ ನಾನಿ ಅವರೊಂದಿಗಿನ ಮುಂಬರುವ ಚಿತ್ರದ ಬಗ್ಗೆ ಅವರು ಉತ್ಸುಕರಾಗಿದ್ದಾರೆ. ಈ ಕ್ಷಣದಲ್ಲಿ, ಅವರು ಬೆಂಗಳೂರಿನಲ್ಲಿ ಅಕ್ಟೋಬರ್ 19 ರಂದು ಮಧ್ಯರಾತ್ರಿಯ ಪ್ರದರ್ಶನದಲ್ಲಿ ಶಿವಣ್ಣ ಮತ್ತು ಅಭಿಮಾನಿಗಳೊಂದಿಗೆ ಘೋಸ್ಟ್  ವೀಕ್ಷಿಸಲು ಸಿದ್ಧರಾಗಿದ್ದಾರೆ.

<strong>ಘೋಸ್ಟ್ ಸೆಟ್‌ನಲ್ಲಿ ಶಿವರಾಜಕುಮಾರ್, ನಿರ್ದೇಶಕ ಶ್ರೀನಿ ಮತ್ತು ಜಯರಾಮ್</strong>
ಘೋಸ್ಟ್ ಸೆಟ್‌ನಲ್ಲಿ ಶಿವರಾಜಕುಮಾರ್, ನಿರ್ದೇಶಕ ಶ್ರೀನಿ ಮತ್ತು ಜಯರಾಮ್

ವಿವಿಧ ಭಾಷೆಗಳಲ್ಲಿ ಅವರ ವ್ಯಾಪಕವಾದ ಕೆಲಸದ ಹೊರತಾಗಿಯೂ, ಜಯರಾಮ್ ಅವರ ಉತ್ಸಾಹವು ಅಚಲವಾಗಿ ಉಳಿದಿದೆ. ಪ್ರತಿ ಹೊಸ ಪೀಳಿಗೆ ಮತ್ತು ಹೊಸ ತಂತ್ರಜ್ಞರೊಂದಿಗೆ, ನಮ್ಮಂತಹ ಅನುಭವಿ ನಟರು ಸ್ವಲ್ಪ ಆತಂಕ ಎದುರಿಸುತ್ತಾರೆ. ವಿಶೇಷವಾಗಿ ಮಲಯಾಳಂ ಮತ್ತು ತಮಿಳು ಹೊರತುಪಡಿಸಿ ಇತರ ಭಾಷೆಗಳಲ್ಲಿ ಕೆಲಸ ಮಾಡುವಾಗ ಮೊದಲ ಶಾಟ್ ತೆಗೆಯುವವರೆಗೂ ಭಯ ಇರುತ್ತದೆ ಎಂದಿದ್ದಾರೆ.

<strong>ಜಯರಾಮ್</strong>
ಜಯರಾಮ್

ಘೋಸ್ಟ್ ಸಿನಿಮಾದಲ್ಲಿ ಎಸಿಪಿ ಚಂಗಪ್ಪನ ಪಾತ್ರದಲ್ಲಿ ಜಯರಾಮ್ ಅವರು ಕನ್ನಡ ಸಂಭಾಷಣೆಗಳಿಗೆ ಡಬ್ ಮಾಡುತ್ತಿದ್ದಾರೆ. ಈ ಬಾರಿ, ನಾನು ನನ್ನ ಕನ್ನಡ ಸಂಭಾಷಣೆಗಳನ್ನು ಕಲಿತಿದ್ದೇನೆ ಮತ್ತು ನನ್ನದೇ ಆದ ಧ್ವನಿಯನ್ನು ನೀಡಿದ್ದೇನೆ, ಡಬ್ಬಿಂಗ್ ಸಮಯದಲ್ಲಿ ನನ್ನ ಧ್ವನಿಯನ್ನು ಕೇಳಿದ ನಂತರ ಶಿವಣ್ಣ ಕರೆ ಮಾಡಿ ಮೆಚ್ಚುಗೆ  ವ್ಯಕ್ತ ಪಡಿಸಿ ಒಪ್ಪಿಗೆ ಸೂಚಿಸಿದರು ಎಂದು ಶಿವಣ್ಣನ ಅಭಿಮಾನ ಮತ್ತು ಸರಳತೆಯ ಬಗ್ಗೆ ಹಾಡಿ ಹೊಗಳಿದ್ದಾರೆ.

ನಾನು 1987 ರಲ್ಲಿ ಸಿನಿಮಾ ಪ್ರಯಾಣ ಪ್ರಾರಂಭಿಸಿದೆ ಮತ್ತು ಪೌರಾಣಿಕ ನಿರ್ದೇಶಕರೊಂದಿಗೆ ಕೆಲಸ ಮಾಡಿದೆ, ಅವರಲ್ಲಿ ಕೆಲವರು ನನ್ನನ್ನು ಅವರ ಪ್ರಾಜೆಕ್ಟ್ ಗಳಿಗೆ ಪದೇ ಪದೇ ಕರೆಸಿಕೊಂಡರು. 1980 ರಿಂದ 2010 ರ ಅವಧಿಯಲ್ಲಿ ನಾನು ಪ್ರಾಜೆಕ್ಟ್ ಗಳ ಯಶಸ್ಸು ಅಥವಾ ವೈಫಲ್ಯ ಲೆಕ್ಕಿಸದೆ ಕೆಲಸದೊಂದಿಗೆ ಪ್ರಯಾಣಿಸಿದೆ. ಈ ನಡುವೆ ನಾನು ವಿವಿಧ ಭಾಷೆಗಳಲ್ಲಿ ತೊಡಗಿಸಿಕೊಂಡೆ ಎಂದು ಗುಣಮಟ್ಟದ ಚಲನಚಿತ್ರಗಳಿಗೆ ಹೆಸರಾದ ನಟ, ಜಯರಾಮ್ ನೆನಪಿಸಿಕೊಳ್ಳುತ್ತಾರೆ.

ಹೊಸ ಯುಗದ ನಿರ್ದೇಶಕರ ಜೊತೆ ಕೆಲಸ ಮಾಡುವ ಅನುಭವದ ಬಗ್ಗೆ ಮಾತನಾಡಿದ ಜಯರಾಮ್, ಅವರ ಸಮರ್ಪಣೆಯನ್ನು ಶ್ಲಾಘಿಸಿದರು. ಘೋಸ್ಟ್ ಚಿತ್ರದಲ್ಲಿ ನಿರ್ದೇಶಕ ಶ್ರೀನಿ ಅವರೊಂದಿಗೆ ಕೆಲಸ ಮಾಡಿದ ಉದಾಹರಣೆಯನ್ನು ಹಂಚಿಕೊಂಡ ಅವರು, “ಅವರು ಒಂದೇ ಪುಟದಲ್ಲಿ ಕನ್ನಡ ಸಂಭಾಷಣೆಗಳನ್ನು ಒದಗಿಸಿದ್ದಾರೆ. ನಾನು ಸ್ವತಃ ನಟನಾಗಿದ್ದರಿಂದ, ನಾನು ಶ್ರೀನಿಯನ್ನು ನಟಿಸಲು ಕೇಳಿದೆ, ಇದು ಪಾತ್ರವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಹಾಯ ಮಾಡಿತು. ಯುವ ನಿರ್ದೇಶಕರ ಸಮರ್ಪಣೆಯನ್ನು ಮೆಚ್ಚುತ್ತೇನೆ. ನಾನು ತಾಜಾ ಮತ್ತು ನವೀನ ಅನುಭವಗಳಿಗಾಗಿ ನಿರಂತರ ಅನ್ವೇಷಣೆಯಲ್ಲಿದ್ದೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com