ಘೋಸ್ಟ್‌ ಚಿತ್ರತಂಡಕ್ಕೆ ಶಿವಣ್ಣ ಅಭಿಮಾನಿಗಳಿಂದ ಬಿಗ್‌ ಸರ್ಪ್ರೈಸ್‌!

ತಮಗಾಗಿ ವಿಶೇಷ ಶೋವನ್ನೂ ಆಯೋಜಿಸಿರುವ ಘೋಸ್ಟ್ ಚಿತ್ರತಂಡಕ್ಕೆ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಬಿಗ್ ಸರ್ಪೈಸ್ ನೀಡಲು ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ನಟ ಶಿವರಾಜ್ ಕುಮಾರ್.
ನಟ ಶಿವರಾಜ್ ಕುಮಾರ್.

ತಮಗಾಗಿ ವಿಶೇಷ ಶೋವನ್ನೂ ಆಯೋಜಿಸಿರುವ ಘೋಸ್ಟ್ ಚಿತ್ರತಂಡಕ್ಕೆ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಬಿಗ್ ಸರ್ಪೈಸ್ ನೀಡಲು ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಈ ವರ್ಷದ ಮೊದಲ ಸಿನಿಮಾ ‘ಘೋಸ್ಟ್‌’ ಚಿತ್ರ ಅ.19ಕ್ಕೆ ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮೊದಲು ಅ.18ರ ಮಧ್ಯರಾತ್ರಿ ಅಭಿಮಾನಿಗಳಿಗಾಗಿ ಘೋಸ್ಟ್ ಚಿತ್ರತಂಡ ವಿಶೇಷ ಶೋವನ್ನು ಆಯೋಜಿಸಿದೆ.

ಇದಕ್ಕೆ ಸಾಕಷ್ಟು ಥ್ರಿಲ್ ಆಗಿರುವ ಅಭಿಮಾನಿಗಳು ಚಿತ್ರತಂಡಕ್ಕೆ ಬಿಗ್ ಸರ್ಪೈಸ್ ಕೊಡಲು ಮುಂದಾಗಿದ್ದಾರೆ. ಚಿತ್ರತಂಡಕ್ಕೆ ವಿಶೇಷ ಹಾಡಿನ ಮೂಲಕ ಸರ್ಪೈಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಹಾಡಿಕೆ ಪ್ರಸನ್ನ ಅವರು ಸಾಹಿತ್ಯ ಬರೆದಿದ್ದರೆ, ಅಗಸ್ತ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡನ್ನು ರಾಜ್ಯದಾದ್ಯಂತ ಇರುವ ಶಿವಣ್ಣ ಅವರ ಅಭಿಮಾನಿಗಳು ಪ್ರಾಯೋಜಿಸಿದ್ದಾರೆ. ಹೊಸಪೇಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಹಾಡವನ್ನು ಅಭಿಮಾನಿಗಳು ಚಿತ್ರ ತಂಡಕ್ಕೆ ಪ್ರಸ್ತುತಪಡಿಸಲಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸಿರುವ, ಸಂದೇಶ್ ಎನ್. ನಿರ್ಮಾಣದ ಘೋಸ್ಟ್ ಚಿತ್ರವನ್ನು ಶ್ರೀನಿ ನಿರ್ದೇಶಿಸಿದ್ದಾರೆ. ಶಿವರಾಜ್‌ಕುಮಾರ್‌ ಅಭಿನಯದ ‘ಭಜರಂಗಿ’ ಚಿತ್ರದ ಪ್ರದರ್ಶನ ಬೆಳಗ್ಗೆ 6ರಿಂದ ಆರಂಭವಾಗಿತ್ತು. ಆದರೆ. ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ ‘ಘೋಸ್ಟ್’ ಚಿತ್ರವಾಗಿದೆ.

ಚಿತ್ರವು ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಘೋಸ್ಟ್‌ ಸಿನಿಮಾ ರಿಲೀಸ್‌ ಆಗಲಿದೆ. ಚಿತ್ರವು ದೇಶದಾದ್ಯಂತ 600 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅನುಪಮ್ ಖೇರ್, ಜಯರಾಮ್ ಮತ್ತು ಅರ್ಚನಾ ಜೋಯಿಸ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com