ಶಿವಣ್ಣನ ಗಮನದಲ್ಲಿಟ್ಟುಕೊಂಡೇ 'ಘೋಸ್ಟ್' ಕಥೆ ಬರೆದಿದ್ದು: ನಿರ್ದೇಶಕ ಶ್ರೀನಿ

ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ ವೃತ್ತಿ ಆರಂಭಿಸಿದ್ದ ಎಂಜಿ ಶ್ರೀನಿವಾಸ್ ಅಲಿಯಾಸ್ ಶ್ರೀನಿ ನಂತರ ನೃತ್ಯ ಸಂಯೋಜಕರಾದರು. ಇದಕ್ಕೂ ಮುನ್ನ ರೆಡಿಯೋ ಜಾಕಿ ಆಗಿದ್ದ ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಅಭಿರುಚಿ ಮೂಡಿತು.
ಘೋಸ್ಟ್ ಸೆಟ್‌ನಲ್ಲಿ ಶಿವರಾಜಕುಮಾರ್, ನಿರ್ದೇಶಕ ಶ್ರೀನಿ ಮತ್ತು ಜಯರಾಮ್
ಘೋಸ್ಟ್ ಸೆಟ್‌ನಲ್ಲಿ ಶಿವರಾಜಕುಮಾರ್, ನಿರ್ದೇಶಕ ಶ್ರೀನಿ ಮತ್ತು ಜಯರಾಮ್
Updated on

ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ ವೃತ್ತಿ ಆರಂಭಿಸಿದ್ದ ಎಂಜಿ ಶ್ರೀನಿವಾಸ್ ಅಲಿಯಾಸ್ ಶ್ರೀನಿ ನಂತರ ನೃತ್ಯ ಸಂಯೋಜಕರಾದರು. ಇದಕ್ಕೂ ಮುನ್ನ ರೆಡಿಯೋ ಜಾಕಿ ಆಗಿದ್ದ ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಅಭಿರುಚಿ ಮೂಡಿತು. ತರುವಾಯ ಶಾರ್ಟ್ ಫಿಲ್ಮಂಗಳನ್ನು ನಿರ್ದೇಶಿಸಿದರು. ಇದು ಅವರಿಗೆ ಉಪೇಂದ್ರಗೆ ಟೋಪಿವಾಲಾ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿತು. ಇದಾದ ನಂತರ ಅವರು ನಟನೆ ಜೊತೆಗೆ ಹಲವು ಚಿತ್ರಗಳನ್ನು ನಿರ್ದೇಶಿಸಿದರು. ಇದೀಗ ಡಾ. ಶಿವರಾಜಕುಮಾರ್ ಅವರ ಬಹುನಿರೀಕ್ಷಿತ ಘೋಸ್ಟ್ ಚಿತ್ರವನ್ನು ನಿರ್ದೇಶಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ.

ನಾನು ಈ ಪ್ರಯಾಣವನ್ನು ಅದೃಷ್ಟ ಮತ್ತು ಕೌಶಲ್ಯ ಎರಡರ ಮಿಶ್ರಣವೆಂದು ಪರಿಗಣಿಸುತ್ತೇನೆ. ಉಪೇಂದ್ರ ಅವರು ನೀಡಿದ ಬೆಂಬಲ ಮತ್ತು ಅವಕಾಶದಿಂದಾಗಿ ನಟ ಮತ್ತು ನಿರ್ದೇಶಕರಾಗಿ ಉದ್ಯಮಕ್ಕೆ ಪ್ರವೇಶಿಸುವ ಸಾಧ್ಯವಾಯಿತು. ಉಪ್ಪಿಗೆ ಸಿನಿಮಾ ನಿರ್ದೇಶನ ಮಾಡುವುದೆಂದರೆ ಶಾಲೆಯಲ್ಲಿ ಓದುತ್ತಿರುವಂತೆ ಭಾಸವಾಯಿತು. ನಟನೆ ಮತ್ತು ನಿರ್ದೇಶನಕ್ಕಾಗಿ ನನ್ನ ಹಸಿವನ್ನು ನೀಗಿಸಲು ನಾನು ಹಂಬಲಿಸುತ್ತಿದ್ದಂತೆ, ನಾನು ಶ್ರೀನಿವಾಸ ಕಲ್ಯಾಣವನ್ನು ನಿರ್ದೇಶಿಸಿದ್ದೇನೆ. ನಂತರ ಬೀರಬಲ್‌ ನಂತಹ ಸಾಹಸಮಯ ಮತ್ತು ಓಲ್ಡ್ ಮಾಂಕ್ ಎಂಬ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವನ್ನು ನಿರ್ದೇಶಿಸಿದೆ ಎಂದು ಶ್ರೀನಿ ಹೇಳಿದ್ದಾರೆ.

ಒಂದು ಹಂತದಲ್ಲಿ ಶಿವಣ್ಣನಿಗೆ ಸಿನಿಮಾ ಮಾಡುವ ಆಸೆ ನನ್ನಲಿತ್ತು. ಅದು ಘೋಸ್ಟ್ ಮೂಲಕ ನೆರವೇರಿದೆ. ಕುತೂಹಲಕಾರಿ ವಿಷಯವೆಂದರೆ, ಘೋಸ್ಟ್ ಕಥೆಯನ್ನು ಮೂಲತಃ ಶಿವಣ್ಣನನ್ನು ಗಮನದಲ್ಲಿಟ್ಟುಕೊಂಡು ಬರೆಯಲಾಗಿದೆ. ಶಿವಣ್ಣನಿಗಾಗಿ ನಾನು ಸ್ಕ್ರಿಪ್ಟ್ ಬರೆದಿರುವುದು ಸಂಬಂಧಿಯೊಬ್ಬರ ಮೂಲಕ ನಿರ್ಮಾಪಕ ಸಂದೇಶ್ ನಾಗರಾಜ್ ಅವರೊಂದಿಗೆ ತಿಳಿದು ಈ ಚಿತ್ರ ನಿರ್ಮಾಣಕ್ಕೆ ಕಾರಣವಾಯಿತು. ನಾನು ಅವರೊಂದಿಗೆ ವಿಷಯವನ್ನು ಹಂಚಿಕೊಂಡಾಗ ಮತ್ತು ಶಿವಣ್ಣ ಅವರನ್ನು ಭೇಟಿಯಾದಾಗ ಕಥೆ, ಟೈಟಲ್ ಕೇಳುತ್ತಲೆ ತಕ್ಷಣ ಒಪ್ಪಿಕೊಂಡರು. ಇದೆಲ್ಲವೂ ಕೇವಲ ಎರಡು ದಿನಗಳಲ್ಲಿ ಅಂತಿಮವಾಯಿತು. ಕಳೆದ ದಸರೆಯಲ್ಲಿ ಕೆಲಸ ಆರಂಭಿಸಿದ್ದು, ಈ ಬಾರಿಯ ದಸರಾ ಅನಾವರಣಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಶ್ರೀನಿ ಹೇಳಿದರು.

<strong>ಜಯರಾಮ್, ಶಿವಣ್ಣ ಮತ್ತು ಅನುಪಮ್ ಖೇರ್</strong>
ಜಯರಾಮ್, ಶಿವಣ್ಣ ಮತ್ತು ಅನುಪಮ್ ಖೇರ್

ಘೋಸ್ಟ್ ಒಂದು ಥ್ರಿಲ್ಲರ್ ಚಿತ್ರವಾಗಿದ್ದು ಬಹು ನಿರೀಕ್ಷಿತ ಬಹುತಾರಾಗಣವಿದೆ. ಪ್ರಶಾಂತ್ ನಾರಾಯಣನ್ ಜೊತೆಗೆ ಮಲಯಾಳಂ ನಟ ಜಯರಾಮ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದಲ್ಲಿ ಸಂತೋಷ್ ಹೆಗ್ಡೆ ಮತ್ತು ಅರ್ಚನಾ ಜೋಯಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರತಿಯೊಬ್ಬರೂ ಚಿತ್ರದಲ್ಲಿ ಅನಿವಾರ್ಯ ಪಾತ್ರವನ್ನು ನಿರ್ವಹಿಸುತ್ತಾರೆ. ಇದಲ್ಲದೆ, ನಾನು ಯಾವಾಗಲೂ ಹೊಸ ಮುಖಗಳನ್ನು ಪರಿಚಯಿಸಲು ಪ್ರಯತ್ನಿಸುತ್ತೇನೆ. ಏಕೆಂದರೆ ಅವರು ಯೋಜನೆಯಲ್ಲಿ ನವೀನತೆಯ ಭಾವವನ್ನು ತುಂಬುತ್ತಾರೆ ಎಂದು ಶ್ರೀನಿ ಹೇಳಿದರು.

ಚಿತ್ರದಲ್ಲಿ ವಿಎಫ್‌ಎಕ್ಸ್ ಬಳಸಲಾಗಿದೆ. ಅದು ಚಿತ್ರವನ್ನು ನೋಡಿದಾಗ ತಿಳಿಯುತ್ತದೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com