ರಂಜಿತ್ ಸಿಂಗ್ ರಜಪೂತ್ ಅವರ ಚೊಚ್ಚಲ ನಿರ್ದೇಶನದ, ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾ ಖ್ಯಾತಿಯ ನಟ ನಿಶ್ಚಿತ್ ಕೊರೋಡಿ ಅಭಿನಯದ ‘Supplier ಶಂಕರ’ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಚಿತ್ರವು ಆತಿಥ್ಯ ಉದ್ಯಮದಲ್ಲಿರುವವರಿಗೆ ಸಂದುವ ಗೌರವವಾಗಿದೆ ಎಂದಿದೆ.
ನಿರ್ಮಾಪಕರಾದ ಎಂ ಚಂದ್ರಶೇಖರ್ ಮತ್ತು ಎಂ ನಾಗೇಂದ್ರ ಸಿಂಗ್ ಅವರಿಗೆ ನಿರ್ದೇಶಕರು ಕೃತಜ್ಞತೆ ಸಲ್ಲಿಸಿದರು. 'Supplier ಶಂಕರ ಸಿನಿಮಾ ಆತಿಥ್ಯದ ಜಗತ್ತಿಗೆ ಸಲ್ಲುವ ಗೌರವವಾಗಿದೆ ಮತ್ತು ಚಿತ್ರವು ಆಕರ್ಷಕವಾದ ಸಿನಿಮೀಯ ಅನುಭವ ನೀಡುವ ಭರವಸೆಯನ್ನು ನಾವು ನೀಡುತ್ತೇವೆ' ಎಂದು ನಿರ್ದೇಶಕರು ಹೇಳುತ್ತಾರೆ.
Supplier ಶಂಕರ ಸಿನಿಮಾ ಹಾಸ್ಯ, ಸೆಂಟಿಮೆಂಟ್, ಪ್ರೀತಿ ಮತ್ತು ಥ್ರಿಲ್ಲರ್ ಸೇರಿ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಎಂದು ಹೇಳುತ್ತಾರೆ ರಂಜಿತ್. ಎಂಟರ್‌ಟೈನ್‌ಮೆಂಟ್, ಸೆಂಟಿಮೆಂಟ್ ಮತ್ತು ಸಂಗೀತದ ಸಮೃದ್ಧ ಮಿಶ್ರಣವನ್ನು ನೀಡುವ ಆಕರ್ಷಕ ನಿರೂಪಣೆಯನ್ನು ಚಿತ್ರವು ಒಳಗೊಂಡಿದೆ.
ಲಗೋರಿ ಖ್ಯಾತಿಯ ದೀಪಿಕಾ ಆರಾಧ್ಯ ನಾಯಕಿಯಾಗಿ ನಟಿಸಿದ್ದು, ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಗೋಪಾಲ್ ಕೃಷ್ಣ ದೇಶಪಾಂಡೆ, ಜ್ಯೋತಿ ರೈ ಮತ್ತು ನವೀನ್ ಡಿ ಪಡೀಲ್ ಅವರಂತಹ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಭರತ್ ಸಂಗೀತ ಸಂಯೋಜಿಸಿದ್ದು, ಸತೀಶ್ ಕುಮಾರ್ ಅವರ ಛಾಯಾಗ್ರಹಣವಿದೆ.
Advertisement