ವರಾಹಚಕ್ರ ಚಿತ್ರತಂಡ
ವರಾಹಚಕ್ರ ಚಿತ್ರತಂಡ

ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ 'ವರಾಹಚಕ್ರ' ಚಿತ್ರದಲ್ಲಿ ನಟಿ ಪ್ರೇಮಾ; ಐವರು ನಾಯಕರು

'ಮನಸುಗಳ ಮಾತು ಮಧುರ' ಖ್ಯಾತಿಯ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರು 'ವರಾಹಚಕ್ರ' ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ಉತ್ತರ ಪ್ರದೇಶದ ವಾರಣಾಸಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.
Published on

'ಮನಸುಗಳ ಮಾತು ಮಧುರ' ಖ್ಯಾತಿಯ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರು 'ವರಾಹಚಕ್ರ' ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ಉತ್ತರ ಪ್ರದೇಶದ ವಾರಣಾಸಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

ಸಿನಿಮಾ ಈಗಿನ ಡಿಜಿಟಲ್ ಯುಗದಲ್ಲಿನ ಅನ್ಯಾಯ, ಮೋಸ ಮತ್ತು ಅಕ್ರಮಗಳ ಕುರಿತು ಚಿತ್ರವು ಹೇಳುತ್ತದೆ. ಚಿತ್ರದಲ್ಲಿ ಪಾಂಡವರಂತೆ ಐವರು ನಾಯಕರು ಇದ್ದಾರೆ. ವರಾಹ ವಿಷ್ಣುವಿನ ಒಂದು ಅವತಾರವಾಗಿದ್ದು, ಕಥೆಯಲ್ಲಿ ಇದರ ಪ್ರಸ್ತಾಪ ಬರುತ್ತದೆ ಎಂದು ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ವಿವರಿಸುತ್ತಾರೆ. 

ಚಿತ್ರದ ತಾರಾಗಣದಲ್ಲಿ ತೆಲುಗು ನಟ ಭಾನು ಚಂದರ್, ನಟಿ ಪ್ರೇಮಾ ಮತ್ತು ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೊತೆಗೆ ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್, ಆರ್ಯನ್ ಮತ್ತು ಪ್ರತೀಕ್ ಗೌಡ ಪಂಚ ಪಾಂಡವರ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುವ ಪ್ರೇಮಾ ಅವರು ನಕಾರಾತ್ಮಕ ಮತ್ತು ಸಕಾರಾತ್ಮಕ ಅಂಶಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಈ ಹಿಂದೆ ದೇವಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಅವರು ಮತ್ತೊಮ್ಮೆ ಭಾನು ಚಂದರ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳನ್ನು ರಚಿಸಿರುವ ಡಾ. ವಿ ನಾಗೇಂದ್ರ ಪ್ರಸಾದ್ ಕೂಡ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ ನಟರಾದ ಶೋಭಾರೈ, ಪ್ರಿಯಾ ತರುಣ್, ಅನನ್ಯ, ಜಾಹ್ನವಿ, ದೀಕ್ಷಾ ಮತ್ತು ಚೈತ್ರ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗುರುದತ್ ಅವರ ಛಾಯಾಗ್ರಹಣ, ಭಾರ್ಗವ್ ಸಂಕಲನ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com