ವಿನೋದ್ ಪ್ರಭಾಕರ್ ಅಭಿನಯದ ಚಿತ್ರದ ಶೀರ್ಷಿಕೆ ಅನಾವರಣ; 'ನೆಲ್ಸನ್' ಟೀಸರ್ ರಿಲೀಸ್ ಮಾಡಿದ ಉಪೇಂದ್ರ
ಗೊಂಬೆಗಳ ಲವ್ ಖ್ಯಾತಿಯ ನಟ ಅರುಣ್ ಕುಮಾರ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ನಟ ವಿನೋದ್ ಪ್ರಭಾಕರ್ ಅಭಿನಯದ ಮುಂಬರುವ ಚಿತ್ರಕ್ಕೆ 'ನೆಲ್ಸನ್' ಎಂದು ಹೆಸರಿಡಲಾಗಿದೆ. 'ಇನ್ ಫಾರೆಸ್ಟ್ ಆಫ್ ಬ್ಲಡ್' ಎಂಬ ಅಡಿಬರಹ ಹೊಂದಿರುವ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ನಟ ಉಪೇಂದ್ರ ಬಿಡುಗಡೆ ಮಾಡಿದರು. ಜಾನಪದ ಅಂಶಗಳಿಂದ ಟೀಸರ್ ಸದ್ಯ ಗಮನ ಸೆಳೆದಿದೆ.
ನೆಲ್ಸನ್ ಒಂದು ಪ್ರಮುಖ ಸಂದೇಶವನ್ನು ಹೊಂದಿದೆ ಮತ್ತು ವಿನೋದ್ ಪ್ರಭಾಕರ್ ಕೋಪೋದ್ರಿಕ್ತ ಯುವಕನಾಗಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸುತ್ತಾರೆ ಅರುಣ್.
'60 ರಿಂದ 90ರ ದಶಕದಲ್ಲಿ ಕಂಡುಬರುವ ಚಾಮರಾಜನಗರ ಜಿಲ್ಲೆಯ ಗ್ಯಾಂಗ್‍ಸ್ಟರ್‌ಗಳ ನೈಜ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಇದು ಈ ಪ್ರದೇಶದ ಭಾಷೆ, ಸಂಸ್ಕೃತಿ, ನೆಲ, ಜಲ ಮತ್ತು ಬುಡಕಟ್ಟು ಸಮುದಾಯಗಳ ಹೋರಾಟದ ಸಾರವನ್ನು ಸೆರೆಹಿಡಿಯುತ್ತದೆ. ಇದು ಶಕ್ತಿಯುತವಾದ ಸಂದೇಶ ಮತ್ತು ಮಹತ್ವದ ಕಥಾಹಂದರವನ್ನು ಹೊಂದಿರುವ ಸಿನಿಮಾವಾಗಿದೆ' ಎಂದು ನವೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿರುವ ಅರುಣ್ ಕುಮಾರ್ ಹೇಳುತ್ತಾರೆ.
ಬಿಎಂ ಶ್ರೀರಾಮ್ ನಿರ್ಮಾಣದ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ಗೋಪಾಲ್ ಕೃಷ್ಣ ದೇಶಪಾಂಡೆ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಗೌಡ ಅವರ ಛಾಯಾಗ್ರಹಣ ಮತ್ತು ಭರತ್ ಬಿಜಿ ಅವರ ಸಂಗೀತ ಸಂಯೋಜನೆ ಇದೆ. ಹರಿ ಮಹದೇವ್ ಸಂಭಾಷಣೆ ಬರೆದಿದ್ದು, ನೆಲ್ಸನ್ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ರವಿ ವರ್ಮಾ ಸಾಹಸ ದೃಶ್ಯಗಳ ಸಂಯೋಜನೆ ಮಾಡಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ