ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ನಟನೆಯ 'ಬರ್ಮ' ಚಿತ್ರಕ್ಕೆ ಚೇತನ್ ಕುಮಾರ್ ಆ್ಯಕ್ಷನ್ ಕಟ್!

ಧ್ರುವ ಸರ್ಜಾ ನಟನೆಯ ಬಹದ್ದೂರ್, ಭರ್ಜರಿ, ಶ್ರೀಮುರಳಿ ಜೊತೆ ಭರಾಟೆ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ಜೇಮ್ಸ್‌ನಂತಹ ಹಿಟ್‌ ಚಿತ್ರಗಳ ನಿರ್ದೇಶಕರಾದ ಚೇತನ್ ಕುಮಾರ್ ಇದೀಗ ಹೊಸ ಸಿನಿಮಾಗಾಗಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ಜೊತೆ ಕೈಜೋಡಿಸುತ್ತಿದ್ದಾರೆ. 
ರಕ್ಷ್ ರಾಮ್ - ಚೇತನ್ ಕುಮಾರ್
ರಕ್ಷ್ ರಾಮ್ - ಚೇತನ್ ಕುಮಾರ್
Updated on

ಧ್ರುವ ಸರ್ಜಾ ನಟನೆಯ ಬಹದ್ದೂರ್, ಭರ್ಜರಿ, ಶ್ರೀಮುರಳಿ ಜೊತೆ ಭರಾಟೆ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ಜೇಮ್ಸ್‌ನಂತಹ ಹಿಟ್‌ ಚಿತ್ರಗಳ ನಿರ್ದೇಶಕರಾದ ಚೇತನ್ ಕುಮಾರ್ ಇದೀಗ ಹೊಸ ಸಿನಿಮಾಗಾಗಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ಜೊತೆ ಕೈಜೋಡಿಸುತ್ತಿದ್ದಾರೆ. ಬರ್ಮ ಎಂಬ ಶೀರ್ಷಿಕೆಯು ಬ್ರಹ್ಮ ದೇವರ ವಾಸಸ್ಥಾನವನ್ನು ಸಂಕೇತಿಸುತ್ತದೆ.

ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಿದ್ದು, 'ಆಯುಧ ಬಳಸುವುದು ಬರೀ ಆಡಂಬರ ಅಲ್ಲ, ಅದೊಂದು ಆಚರಣೆ' ಎಂಬ ಆಕರ್ಷಕ ಅಡಿಬರಹವನ್ನು ಹೊಂದಿದೆ. ರಕ್ಷ್ ದೂರದರ್ಶನದಲ್ಲಿ ಜನಪ್ರಿಯ ಮುಖ ಮತ್ತು ಅವರು ಒಂದೆರಡು ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಇದೀಗ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವುದು ಮಾತ್ರವಲ್ಲದೆ ನಿರ್ಮಾಪಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಬರ್ಮ ಚಿತ್ರ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಇದೆ. ಕುತೂಹಲಕಾರಿಯಾಗಿ, ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಈಗಾಗಲೇ ಹೆಸರಾಂತ ಡಿ-ಬೀಟ್ಸ್ ಆಡಿಯೋ ಲೇಬಲ್ ಗಣನೀಯ ಮೊತ್ತಕ್ಕೆ ಪಡೆದುಕೊಂಡಿದೆ.

ಬರ್ಮ ಚಿತ್ರದ ಚಿತ್ರೀಕರಣವು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, ಇನ್ನುಳಿದ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com