ಕನ್ನಡದ ಭೀಮನಿಗೆ ಚರಣ್ ರಾಜ್ ಸಂಗೀತದ ಬಲ!

ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಸಪ್ತ ಸಾಗರದಾಚೆ ಯೆಲ್ಲೋ ಚಿತ್ರಕ್ಕೆ ಹಿತವಾದ ರೊಮ್ಯಾಂಟಿಕ್ ಹಾಡುಗಳನ್ನು ನೀಡಿದ ಅವರು, ಇದೀಗ ದುನಿಯಾ ವಿಜಯ್ ಅಭಿನಯದ ಭೀಮ ಚಿತ್ರಕ್ಕೆ ಸಂಗೀತ ನೀಡಲು ಸಜ್ಜಾಗಿದ್ದಾರೆ.
ಎಂಸಿ ಬಿಜ್ಜು, ರಾಹುಲ್ ಡಿಟೋ ಜೊತೆಗೆ ನಟ ವಿಜಯ್ ಕುಮಾರ್ ಮತ್ತು ಸಂಗೀತ ಸಂಯೋಜಕ ಚರಣ್ ರಾಜ್.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಚಿತ್ರದ ಮೊದಲ ಬ್ಯಾಡ್ ಬಾಯ್ಸ್ ಎಂಬ ಹಾಡು ಇಂದು ಬಿಡುಗಡೆಯಾಗುತ್ತಿದೆ. ಈ ಗೀತೆಯ ಸಾಹಿತ್ಯವನ್ನು ರಾಪ್ ಸಾಂಗ್ ನಾಗಾರ್ಜುನ ಬರೆದಿದ್ದು, ಹಾಡನ್ನು ಪ್ರಸಿದ್ಧ ರಾಪರ್‌ಗಳಾದ ರಾಹುಲ್ ಡಿಟೋ ಮತ್ತು ಎಂಸಿ ಬಿಜ್ಜು ಅವರು ಹಾಡಿದ್ದಾರೆ.

"ಬ್ಯಾಡ್ ಬಾಯ್ ಟ್ರೆಂಡಿ ರಾಪ್ ಶೈಲಿಯ ಹಾಡಾಗಿದ್ದು, ಇದರಲ್ಲಿ ಇಬ್ಬರು ಜನಪ್ರಿಯ ರಾಪರ್‌ಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಗಣೇಶ ಹಬ್ಬದಂದು ಈ ಹಾಡು ಬಿಡುಗಡೆಯಾಗಲಿದೆ. ಇದು ಚಿತ್ರದ ಕುರಿತಾಗಿ ಇರುವ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಚರಣ್ ರಾಜ್ ಹೇಳಿದ್ದಾರೆ.

ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ,ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ.

ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಮಾಸ್ತಿ ಡೈಲಾಗ್ಸ್ ಇದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ 'ಭೀಮ'ನಿಗಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣ ಮಾಡಿರೋ ಭೀಮ ಎಲ್ಲ ಆ್ಯಂಗಲ್​ನಿಂದಲೂ‌ ಚಿತ್ರರಂಗದಲ್ಲಿ ದೊಡ್ಡ ನಿರಿಕ್ಷೆ ಹುಟ್ಟಿಸಿದೆ. ಅಲ್ಲದೇ ಇದೇ ವರ್ಷ ತೆರೆಕಾಣಲಿರುವ ಬಹು ನಿರೀಕ್ಷಿತ ಚಿತ್ರ ಆಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com