ದಳಪತಿ ವಿಜಯ್-ತ್ರಿಷಾ ನಟನೆಯ 'ಲಿಯೋ' ಸಿನಿಮಾದ ಕನ್ನಡ ಪೋಸ್ಟರ್ ರಿಲೀಸ್!

ಖ್ಯಾತ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ದಳಪತಿ ವಿಜಯ್ ಅಭಿನಯದ 'ಲಿಯೋ' ಚಿತ್ರದ ಪ್ರಚಾರವನ್ನು ಚಿತ್ರತಂಡ ಕಿಕ್‌ಸ್ಟಾರ್ಟ್ ಮಾಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಭಾಗವಾಗಿ, ಚಿತ್ರತಂಡ ಎಲ್ಲಾ ಭಾಷೆಗಳಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದೆ.
ಲಿಯೋ ಚಿತ್ರದ ಕನ್ನಡ ಪೋಸ್ಟರ್
ಲಿಯೋ ಚಿತ್ರದ ಕನ್ನಡ ಪೋಸ್ಟರ್
Updated on

ಖ್ಯಾತ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ದಳಪತಿ ವಿಜಯ್ ಅಭಿನಯದ 'ಲಿಯೋ' ಚಿತ್ರದ ಪ್ರಚಾರವನ್ನು ಚಿತ್ರತಂಡ ಕಿಕ್‌ಸ್ಟಾರ್ಟ್ ಮಾಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಭಾಗವಾಗಿ, ಚಿತ್ರತಂಡ ಎಲ್ಲಾ ಭಾಷೆಗಳಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದೆ.

ಸೆಪ್ಟಂಬರ್ 17ರಂದು ಚಿತ್ರತಂಡ ಚಿತ್ರದ ತೆಲುಗು ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. 'ಶಾಂತವಾಗಿರಿ ಮತ್ತು ಯುದ್ಧವನ್ನು ತಪ್ಪಿಸಿ' ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿತ್ತು. 

ಇದೀಗ ನೆನ್ನೆ (ಸೆಪ್ಟಂಬರ್ 18) ಚಿತ್ರದ ಕನ್ನಡ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, 'ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರುಮಾಡಿಕೊಳ್ಳಲು ಸಂಚು ರೂಪಿಸಿ' ಎಂಬ ಹೊಸ ಅಡಿಬರಹ ನೀಡಿದೆ. ಈ ಮೂಲಕ ಚಿತ್ರತಂಡ ಕುತೂಹಲ ಹೆಚ್ಚಿಸಿದೆ. ಕ್ರೈಂ ಸೀನ್‌ನಂತೆ ಕಾಣುವ ಹಿನ್ನೆಲೆಯಲ್ಲಿ ವಿಜಯ್ ಕುಳಿತಿದ್ದಾರೆ. ಗನ್‌ವೊಂದರ ಒಳಗೆ ಈ ಚಿತ್ರ ಕಾಣುತ್ತದೆ. 

ವಿಜಯ್ ಜೊತೆಗೆ, ಲಿಯೋದಲ್ಲಿ ತ್ರಿಶಾ, ಮಿಸ್ಕಿನ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ದತ್ ಮುಂತಾದವರು ನಟಿಸಿದ್ದಾರೆ.

ಈಗಾಗಲೇ ಕೈದಿ (2019) ಮತ್ತು ವಿಕ್ರಮ್ (2022) ಚಿತ್ರಗಳನ್ನು ನಿರ್ದೇಶಿಸಿದ್ದ ಲೋಕೇಶ್ ಅವರ ಈ ಚಿತ್ರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿದೆಯೇ ಎಂಬ ಬಗ್ಗೆ ಚಿತ್ರತಂಡ ಇನ್ನೂ ಘೋಷಿಸಿಲ್ಲ. ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಅನಿರುದ್ಧ ರವಿಚಂದರ್ ಅವರ ಸಂಗೀತವಿದೆ.

ಲಲಿತ್ ಕುಮಾರ್ ಅವರ 7 ಸ್ಕ್ರೀನ್ ಸ್ಟುಡಿಯೋ ಬೆಂಬಲದೊಂದಿಗೆ, ನಟ ವಿಜಯ್ ಮತ್ತು ಲೋಕೇಶ್ ಕನಕರಾಜ್ ಅವರು ಎರಡನೇ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಚಿತ್ರವು ಅಕ್ಟೋಬರ್ 19ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ.

ಈಮಧ್ಯೆ, ವಿಜಯ್ ಈಗ ತಮ್ಮ ಮುಂದಿನ, 'ದಳಪತಿ 68' ಎಂಬ ತಾತ್ಕಾಲಿಕ ಶೀರ್ಷಿಕೆಯ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಲೋಕೇಶ್ ಅವರು ಇದೇ ಮೊದಲ ಬಾರಿಗೆ ರಜನಿಕಾಂತ್ ಅವರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದು, ಚಿತ್ರವನ್ನು ಸನ್ ಪಿಕ್ಚರ್ಸ್ ಬೆಂಬಲಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com