ಬಿಡುಗಡೆಗೂ ಮುನ್ನವೇ ದಳಪತಿ ವಿಜಯ್-ತ್ರಿಷಾ ಅಭಿನಯದ 'ಲಿಯೋ' ದಾಖಲೆಯ 246 ಕೋಟಿ ರೂ. ಗಳಿಕೆ

ವರದಿಗಳ ಪ್ರಕಾರ, ತಮಿಳು ಸೂಪರ್‌ಸ್ಟಾರ್, ದಳಪತಿ ವಿಜಯ್ ಅವರ ಮುಂದಿನ ಚಿತ್ರ 'ಲಿಯೋ' ಸಿನಿಮಾ ಡಿಜಿಟಲ್ ಹಕ್ಕುಗಳು, ಸ್ಯಾಟಲೈಟ್ ಮತ್ತು ಮ್ಯೂಸಿಕ್ ರೈಟ್ಸ್‌ಗಳಿಂದ ಬಿಡುಗಡೆಗೂ ಮುನ್ನವೇ 246 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ಪ್ರೋಮೊ ದೃಶ್ಯ
ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ಪ್ರೋಮೊ ದೃಶ್ಯ

ಚೆನ್ನೈ: ವರದಿಗಳ ಪ್ರಕಾರ, ತಮಿಳು ಸೂಪರ್‌ಸ್ಟಾರ್, ದಳಪತಿ ವಿಜಯ್ ಅವರ ಮುಂದಿನ ಚಿತ್ರ 'ಲಿಯೋ' ಸಿನಿಮಾ ಡಿಜಿಟಲ್ ಹಕ್ಕುಗಳು, ಸ್ಯಾಟಲೈಟ್ ಮತ್ತು ಮ್ಯೂಸಿಕ್ ರೈಟ್ಸ್‌ಗಳಿಂದ ಬಿಡುಗಡೆಗೂ ಮುನ್ನವೇ 246 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ತಮಿಳಿನ ಸೂಪರ್ ಡೈರೆಕ್ಟರ್ ಲೋಕೇಶ್ ಕನಕರಾಜ್ (ಈ ಹಿಂದೆ 'ವಿಕ್ರಮ್' ಚಿತ್ರಕ್ಕಾಗಿ ಸುದ್ದಿಯಾಗಿದ್ದರು)  ನಿರ್ದೇಶನದ ಸಿನಿಮಾ ಚಿತ್ರವನ್ನು ಘೋಷಿಸಿದ ಕೆಲವೇ ದಿನಗಳಲ್ಲಿಯೇ ದೊಡ್ಡ ಮೊತ್ತವನ್ನು ಸಂಗ್ರಹಿಸಿದೆ.

ಕಮಲ್ ಹಾಸನ್ ಅಭಿನಯದ ಕನಕರಾಜ್ ಅವರ ಈ ಹಿಂದಿನ ಚಿತ್ರ 'ವಿಕ್ರಮ್' ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದಾಖಲೆಗಳನ್ನು ಛಿದ್ರಗೊಳಿಸಿತ್ತು. ಇದೀಗ ಅವರು ದಳಪತಿ ವಿಜಯ್ ಜೊತೆ ಒಂದಾಗುತ್ತಿರುವ 'ಲಿಯೋ' ಚಿತ್ರವು ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿದೆ.
Tracktollywood.com ಪ್ರಕಾರ, ಈ ಚಿತ್ರವನ್ನು ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಇದು ಈಗಾಗಲೇ 246 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಚಿತ್ರದ ಡಿಜಿಟಲ್ ಹಕ್ಕುಗಳು 150 ಕೋಟಿ ರೂಪಾಯಿಗಳನ್ನು ಗಳಿಸಿದರೆ, ಅದರ ಸ್ಯಾಟಲೈಟ್ ಹಕ್ಕುಗಳು 80 ಕೋಟಿ ರೂಪಾಯಿ ಆಗಿದೆ ಮತ್ತು 16 ಕೋಟಿ ರೂಪಾಯಿಗೆ ಮ್ಯೂಸಿಕ್ ರೈಟ್ಸ್ ಮಾರಾಟವಾಗಿದೆ.

ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ನಟಿಸುತ್ತಿದ್ದು, ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ಹಿಂದಿ ಡಬ್ಬಿಂಗ್ ರೈಟ್ಸ್‌ನಿಂದಲೂ ಭಾರಿ ಹಣ ಬಂದಿದೆ.

ಕನಕರಾಜ್ ಮತ್ತು ವಿಜಯ್ ಜೋಡಿಯ ಕೊನೆಯ ಚಿತ್ರ 'ಮಾಸ್ಟರ್' ಕೂಡ ಬ್ಲಾಕ್‌ಬಸ್ಟರ್‌ ಯಶಸ್ಸನ್ನು ಕಂಡಿತು. ಇದೀಗ 'ಲಿಯೋ'ಗಾಗಿ ಮತ್ತೆ ಒಂದಾಗುತ್ತಿರುವುದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಿನಿಮಾ ಘೋಷಣೆಯ ಆರಂಭಿಕ ಹಂತದಲ್ಲೇ ಇಷ್ಟೊಂದು ದೊಡ್ಡ ಕಲೆಕ್ಷನ್ ನಿರೀಕ್ಷಿಸಿರಲಿಲ್ಲ ಎಂದು ತಮಿಳು ಚಿತ್ರರಂಗದ ಮೂಲಗಳು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿವೆ.

14 ವರ್ಷಗಳ ನಂತರ ವಿಜಯ್ ಮತ್ತು ತ್ರಿಷಾ ಮತ್ತೆ ಒಂದಾಗುತ್ತಿರುವುದು ಕೂಡ ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ. ಪ್ರಮುಖ ಪಾತ್ರಗಳಲ್ಲಿ ಅರ್ಜುನ್ ಸರ್ಜಾ, ಮನ್ಸೂರ್ ಅಲಿ ಖಾನ್, ಗೌತಮ್ ವಾಸುದೇವ್ ಮೆನನ್ ಮತ್ತು ಪ್ರಿಯಾ ಆನಂದ್ ಇದ್ದಾರೆ.

ಈ ಮಧ್ಯೆ ಚಿತ್ರದ ಯೂಟ್ಯೂಬ್ ಪ್ರೋಮೊ ಕೂಡ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಶಾರುಖ್ ಖಾನ್ ಅಭಿನಯದ 'ಜವಾನ್' ಮತ್ತು 'ಟೈಗರ್ 3' ವೀಕ್ಷಣೆಗಳನ್ನು ಮೀರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com