ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಸ್ಪರ್ಧಿ ಯಾರು ಗೊತ್ತೆ?

ಅಕ್ಟೋಬರ್ 8ರಿಂದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ​ಬಾಸ್ ಸೀಸನ್ 10 ಪ್ರಾರಂಭವಾಗುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ.
ಬಿಗ್ ಬಾಸ್ ಸೀಸನ್ 10  ಸ್ಟಿಲ್
ಬಿಗ್ ಬಾಸ್ ಸೀಸನ್ 10 ಸ್ಟಿಲ್

ಬೆಂಗಳೂರು: ಅಕ್ಟೋಬರ್ 8ರಿಂದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ​ಬಾಸ್ ಸೀಸನ್ 10 ಪ್ರಾರಂಭವಾಗುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ.

ಈ ಬಾರಿಯ ಬಿಗ್ ​ಬಾಸ್​ ಸೀಸನ್ 10 ಹಲವು ವಿಶೇಷತೆಗಳಿಂದ ಕೂಡಿರಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ತನ್ನ ಕಲ್ಮಶ ರಹಿತ ಅಭಿನಯ ಮತ್ತು ಮನಸ್ಸಿನಿಂದ ಎಲ್ಲರ ಮನಗೆದ್ದ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿ ಬಿಗ್’ಬಾಸ್ ಮನೆಗೆ ಎಂಟ್ರಿ ಕೊಡ್ತಿದೆ.

ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯೇ ಸ್ಪಷ್ಟ ಮಾಹತಿ ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. “ಬೆಸ್ಟ್ ರೇಟೆಡ್ ಚಲನಚಿತ್ರ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿಯ ಬಿಗ್ ಬಾಸ್ ಸೀಸನ್ 10ರ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಭಿನಂದನೆಗಳು ಚಾರ್ಲಿ” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com