ಅದಿತಿ ಪ್ರಭುದೇವ ನಟನೆಯ ಅಲೆಕ್ಸಾ ಚಿತ್ರ ನವೆಂಬರ್ 3ಕ್ಕೆ ಬಿಡುಗಡೆ

ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಅಲೆಕ್ಸಾ’ ಚಿತ್ರ ನವೆಂಬರ್ 3 ರಂದು ಬಿಡುಗಡೆಯಾಗಲಿದೆ.
ಅಲೆಕ್ಸಾ ಚಿತ್ರದ ಸ್ಟಿಲ್.
ಅಲೆಕ್ಸಾ ಚಿತ್ರದ ಸ್ಟಿಲ್.

ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಅಲೆಕ್ಸಾ’ ಚಿತ್ರ ನವೆಂಬರ್ 3 ರಂದು ಬಿಡುಗಡೆಯಾಗಲಿದೆ.

ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಟೀಸರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ತನಿಖಾಧಿಕಾರಿ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಪವನ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಾರ್ಮಾಸುಟಿಕಲ್‌ ಮಾಫಿಯಾ ಬಗ್ಗೆ ಕಥಾಹಂದರವಿದೆ. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ ಎಂದು ಜೀವ ಅವರು ಹೇಳಿದ್ದಾರೆ.

ಪೊಲೀಸ್ ಅಧಿಕಾರಿಯಾಗುವ ನನ್ನ ನಿಜ ಜೀವನದ ಕನಸು ನನಸಾಗಲಿಲ್ಲ, ಆದರೆ. ನಿರ್ದೇಶಕರು ತನಿಖಾ ಅಧಿಕಾರಿಯ ಪಾತ್ರವನ್ನು ನೀಡಿದಾಗ ಬಹಳ ಸಂತೋಷವಾಯಿತು. ಬಹಳ ಉತ್ಸಾಹದಿಂದ ಒಪ್ಪಿಕೊಂಡೆ. ನನಗೂ ಆ್ಯಕ್ಷನ್‌ ಹೀರೋಯಿನ್‌ ಆಗಬೇಕೆಂಬ ಕನಸಿತ್ತು, ಅದು ಕೂಡ ಈ ಚಿತ್ರದ ಮೂಲಕ ನನಸಾಗಿದೆ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಟಿ ಅದಿತಿ ಪ್ರಭುದೇವಾ ಅವರು ಹೇಳಿದ್ದಾರೆ.

ಅದಿತಿ. ವಿ.ಚಂದ್ರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ನಟಿಸಿದ್ದಾರೆ. ರವಿವರ್ಮ ಹಾಗೂ ಮಾಸ್ ಮಾದ ಅವರು ಸಾಹಸ ಸಂಯೋಜನೆಯಲ್ಲಿ ಮಾಡಿದ್ದು, ಸತೀಶ್ ಬಿ  ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ  ಸಂಕಲನ ಅಲೆಕ್ಸಾ ಚಿತ್ರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com