ಮನೆಯೊಳಗೆ ಬಿದ್ದು ಮೂಳೆ ಮುರಿದುಕೊಂಡ ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟಿ ಸೋಫಿಯಾ ಲೊರೆನ್!

ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಟಿ ಸೋಫಿಯಾ ಲೊರೆನ್  ತಮ್ಮ ಮನೆಯೊಳಗೆ ಬಿದ್ದು ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಫಿಯಾ ಲೊರೆನ್
ಸೋಫಿಯಾ ಲೊರೆನ್

ಸ್ವಿಟ್ಜರ್ಲೆಂಡ್‌: ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಟಿ ಸೋಫಿಯಾ ಲೊರೆನ್  ತಮ್ಮ ಮನೆಯೊಳಗೆ ಬಿದ್ದು ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

89 ವರ್ಷದ ಲೆೊರೆನ್ ಭಾನುವಾರ ಸ್ವಿಟ್ಜರ್ಲೆಂಡ್‌ನ ಜಿನೀವಾ ಸರೋವರದ ಬಳಿಯ ತನ್ನ ಮನೆಯಲ್ಲಿ ಬಿದ್ದು, ಸೊಂಟ ಮತ್ತು ತೊಡೆ ಮೂಳೆ ಮುರಿದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಸೋಫಿಯಾ ಕೊನೆಯದಾಗಿ 2020 ರ ನೆಟ್‌ಫ್ಲಿಕ್ಸ್ ಚಿತ್ರ 'ದಿ ಲೈಫ್ ಅಹೆಡ್‌'ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಅವರ ಮಗ ಎಡೋರ್ಡೊ ನಿರ್ದೇಶಿಸಿದ್ದಾರೆ.

ಇಟಾಲಿಯನ್ ಚಲನಚಿತ್ರ ನಿರ್ಮಾಪಕ ವಿಟ್ಟೋರಿಯೊ ಡಿ ಸಿಕಾ ನಿರ್ದೇಶಿಸಿದ 'ಲಾ ಸಿಯೊಸಿಯಾರಾದಲ್ಲಿನ (ಇಬ್ಬರು ಮಹಿಳೆಯರು) ತನ್ನ ಅತ್ಯುತ್ತಮ ಅಭಿನಯಕ್ಕಾಗಿ ಸೋಫಿಯಾ ಲೊರೆನ್ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದು ವಿದೇಶಿ ಭಾಷೆಯ ಚಲನಚಿತ್ರಕ್ಕಾಗಿ ನಟಿಯೊಬ್ಬರು ಪಡೆದ ಮೊದಲ ಅಕಾಡೆಮಿ ಪ್ರಶಸ್ತಿಯಾಗಿತ್ತು. 

ಇಟಲಿ ಮೂಲದ ಹಾಲಿವುಡ್ ನಟಿ. ಸೊಫಿಯ ಲಾರೆನ್, ತನ್ನ ನೈಜ ಸೌಂದರ್ಯದ ಜೊತೆಗೆ, ಅತ್ಯಾಕರ್ಷಕ ಉಡುಗೆ-ತೊಡುಗೆಗಳಿಂದ, 'ಸೆಕ್ಸ್ ರಾಣಿ' ಯೆಂದು ಹೆಸರುಮಾಡಿದ್ದರು. 'ಬ್ಯಾಟಲ್ ಕ್ರೈ' ಚಿತ್ರದಲ್ಲಿ ತಮ್ಮ ಅನುಪಮ ನಟನಾಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com