Nude ಫಿಲ್ಮ್ ಮಾಡ್ತೀರಾ?: ನಟ ಹರ್ಷ ವಿರುದ್ದ ನಟಿ ತನಿಷಾ ಕುಪ್ಪಂಡ ಗರಂ
ಪೆಂಗಟನ್ ಚಿತ್ರದ ಕಾಮನಬಿಲ್ಲು ವಿಡಿಯೋ ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೇ ವಿಚಾರವಾಗಿ ಯೂಟ್ಯೂಬರ್ ಒಬ್ಬ ನೀವು Nude ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದು ಇದಕ್ಕೆ ನಟಿ ಆತನ ಮೇಲೆ ಗರಂ ಆಗಿದ್ದರು.
Published: 03rd April 2023 08:24 PM | Last Updated: 03rd April 2023 08:44 PM | A+A A-

ನಟ ಹರ್ಷ-ತನಿಷಾ ಕುಪ್ಪಂಡ
ಪೆಂಗಟನ್ ಚಿತ್ರದ ಕಾಮನಬಿಲ್ಲು ವಿಡಿಯೋ ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೇ ವಿಚಾರವಾಗಿ ಯೂಟ್ಯೂಬರ್ ಒಬ್ಬ ನೀವು Nude ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದು ಇದಕ್ಕೆ ನಟಿ ಆತನ ಮೇಲೆ ಗರಂ ಆಗಿದ್ದರು.
ನಂತರ ಇದೇ ವಿಚಾರವಾಗಿ ರಾಜಹುಲಿ ಖ್ಯಾತಿಯ ಸಹ ನಟ ಹರ್ಷ ತಮ್ಮ ಇನ್ ಸ್ಟಾಗ್ರಾಂನಲ್ಲಿ ನಟಿಗೆ ನೀವು ನ್ಯೂಡ್ ಫಿಲ್ಮ್ ಮಾಡ್ತೀರಾ ಎಂದು ಪ್ರಶ್ನಿಸಿದ್ದು ಈ ಸಂಬಂಧ ನಟಿ ಇಂದು ಸುದ್ಗಿಗೋಷ್ಠಿ ನಡೆಸಿ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓರ್ವ ಸಹ ನಟನಾಗಿ ಈ ರೀತಿ ಪ್ರಶ್ನೆ ಕೇಳಬಹುದೇ ಎಂದು ಪ್ರಶ್ನಿಸಿದ್ದಾರೆ. ನಾವು ಚಿತ್ರರಂಗದ ಒಂದೇ ಕುಟುಂಬದಲ್ಲಿ ಇರುವಂತವರು. ಹೀಗಿದ್ದರು ಹರ್ಷ ನನಗೆ ಈ ರೀತಿ ಪ್ರಶ್ನಿಸಿರುವುದು ಎಷ್ಟು ಸರಿ ಎಂದು ಕೇಳಿದ್ದಾರೆ.
ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ ಅವರು ಪೆಂಟಗನ್ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ತನಿಷಾ ಕುಪ್ಪಂಡ ಸುದ್ದಿಗೋಷ್ಠಿ ಆಡಿಯೋ |
|
ಐದು ಕಥೆಗಳನ್ನು ಒಳಗೊಂಡಿರುವ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಹ ನಟನ ಜೊತೆ ಲಿಪ್ ಲಾಕ್ ಮತ್ತು ಬ್ಯಾಕ್ ಲೆಸ್ ಕಾರಣದಿಂದಾಗಿಯೂ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: 'ಅಶ್ಲೀಲ ಚಿತ್ರ' ಮಾಡುತ್ತೀರಾ ಎಂದ ಯೂಟ್ಯೂಬರ್ ನ ತರಾಟೆಗೆ ತೆಗೆದುಕೊಂಡ 'ಪೆಂಟಗನ್' ನಟಿ 'ತನಿಷಾ ಕುಪ್ಪಂಡ'
ಚಿತ್ರದ ಕುರಿತಂತೆ ಯೂಟ್ಯೂಬರ್ ಜೊತೆ ಮಾತನಾಡುತ್ತಿದ್ದಾಗ ಯೂಟ್ಯೂಬರ್ ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಪ್ರಶ್ನಿಸುತ್ತಾನೆ. ಆಗ ಸಿಟ್ಟಾದ ತನಿಷಾ ಕುಪ್ಪಂಡ ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನದಿಂದ ಹೊರನಡೆದಿದ್ದರು.