ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್‌ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ

ಪ್ರಜ್ವಲ್ ದೇವರಾಜ್ ಇತರ ಭಾಷೆಯ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ತಮ್ಮ 16ನೇ ವರ್ಷದ ಚಲನಚಿತ್ರ ಪಯಣದಲ್ಲಿರುವ ಮತ್ತು ಪ್ರಧಾನವಾಗಿ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ನಟ ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ.  
ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್

ವೀರಂ ಹೊರತಾಗಿ, ಪ್ರಜ್ವಲ್ ದೇವರಾಜ್ ಗಣ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರ ಮತ್ತೊಂದು ಪ್ರಾಜೆಕ್ಟ್ 'ಮಾಫಿಯಾ'ದಲ್ಲೂ ಬ್ಯುಸಿಯಾಗಿದ್ದು, ಅದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಾಫಿಯಾ ನಿರ್ದೇಶಕ ಲೋಹಿತ್ ಹೆಚ್ ಅವರೊಂದಿಗೆ ಮತ್ತೊಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಚಿತ್ರವಿನ್ನು ಸೆಟ್ಟೇರಲಿದ್ದು, ತತ್ಸಮ ತದ್ಭವ ಚಿತ್ರದಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಈಮಧ್ಯೆ, ಪ್ರಜ್ವಲ್ ದೇವರಾಜ್ ಇತರ ಭಾಷೆಯ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ತಮ್ಮ 16ನೇ ವರ್ಷದ ಚಲನಚಿತ್ರ ಪಯಣದಲ್ಲಿರುವ ಮತ್ತು ಪ್ರಧಾನವಾಗಿ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ನಟ ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟಿರುವ ವೇಣು ಅವರ ನಿರ್ದೇಶನದ ಎನ್ಆರ್‌ಐ (NRI) ಎಂಬ ಶೀರ್ಷಿಕೆಯ ತೆಲುಗು ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳಲಿದ್ದಾರೆ ಮತ್ತು ಚಿತ್ರವು ಸೆಪ್ಟೆಂಬರ್‌ನಲ್ಲಿ ಸೆಟ್ಟೇರುವ ಸಾಧ್ಯತೆಯಿದೆ. 

'ನಟನಿಗೆ ಈಗಾಗಲೇ ಒಂದು ಇಮೇಜ್ ಇದ್ದಾಗ ಮತ್ತು ಜನರು ಆತನನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರೀತಿಸುತ್ತಿರುವಾಗ, ಆತ ಇನ್ನೊಂದು ಉದ್ಯಮದಲ್ಲಿ ತನ್ನನ್ನು ತಾನು ಹೇಗೆ ತೊಡಗಿಸಿಕೊಳ್ಳುತ್ತಾನೆ ಎಂಬ ಬಗ್ಗೆ ತುಂಬಾ ಜಾಗರೂಕರಾಗಿರಬೇಕು ಎಂದು ನಾನು ಭಾವಿಸುತ್ತೇನೆ. ನನಗೆ ಒಂದೆರಡು ಆಫರ್‌ಗಳು ಬಂದವು. ಆದರೆ, ಅವು ಕಾರ್ಯರೂಪಕ್ಕೆ ಬರಲಿಲ್ಲ. ವೇಣು ಅವರು ಬರೆದ ಎನ್‌ಆರ್‌ಐ ಕಥೆ ನನ್ನ ಗಮನ ಸೆಳೆಯಿತು. ಈ ನಿರ್ದೇಶಕರು ಆರ್‌ಬಿ ಚೌಧರಿ ಬ್ಯಾನರ್‌ನಲ್ಲಿ ಸಹಾಯಕ ಮತ್ತು ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಇದು ತೆಲುಗಿನಲ್ಲಿ ನನಗೆ ಮತ್ತು ನಿರ್ದೇಶಕರಿಗೆ ಆಸಕ್ತಿದಾಯಕ ಚೊಚ್ಚಲ ಚಿತ್ರವಾಗಿದೆ' ಎನ್ನುತ್ತಾರೆ ನಟ ಪ್ರಜ್ವಲ್ ದೇವರಾಜ್.

ಪ್ರೊಡಕ್ಷನ್ ಹೌಸ್ ಅವರನ್ನು ಪ್ರಾಜೆಕ್ಟ್‌ಗೆ ಹೇಗೆ ಆಯ್ಕೆ ಮಾಡಿದೆ ಎಂಬುದರ ಕುರಿತು ಮಾತನಾಡಿರುವ ಅವರು, 'ನನ್ನನ್ನು ಈ ಪಾತ್ರಕ್ಕೆ ಏಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಯಲು ನನಗೆ ಕುತೂಹಲವಿತ್ತು. ನಿರ್ಮಾಪಕರು ನನಗೆ ಹೇಳಿದಾಗ, ಅವರು ನನ್ನ ಚಿತ್ರವಾದ ಇನ್ಸ್‌ಪೆಕ್ಟರ್ ವಿಕ್ರಂ ಅನ್ನು ನೋಡಿದರು ಮತ್ತು ನನ್ನನ್ನು ಎನ್‌ಆರ್‌ಐನಲ್ಲಿ ನಟಿಸುವಂತೆ ಕೇಳಲು ಉತ್ಸುಕರಾಗಿದ್ದರು' ಎನ್ನುತ್ತಾರೆ. 

ಈ ಚಿತ್ರವನ್ನು ತೆಲುಗಿನಲ್ಲಿ ಮಾತ್ರ ನಿರ್ಮಿಸಲಾಗುವುದು ಮತ್ತು ನಂತರ ಇತರ ಭಾಷೆಗಳಿಗೆ ಡಬ್ ಮಾಡಲಾಗುವುದು ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com