ಪ್ರಜ್ವಲ್ ದೇವರಾಜ್- ರಚಿತಾ ರಾಮ್ ಅಭಿನಯದ ವೀರಂ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!
ನಟ ಪ್ರಜ್ವಲ್ ದೇವರಾಜ್ ಅವರ ಮುಂದಿನ ವೀರಂ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಖಾದರ್ ಕುಮಾರ್ ಅವರ ಚಿತ್ರವು ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ.
Published: 11th March 2023 12:36 PM | Last Updated: 11th March 2023 03:37 PM | A+A A-

ವೀರಂ ಸಿನಿಮಾದ ಪೋಸ್ಟರ್
ನಟ ಪ್ರಜ್ವಲ್ ದೇವರಾಜ್ ಅವರ ಮುಂದಿನ ವೀರಂ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಖಾದರ್ ಕುಮಾರ್ ಅವರ ಚಿತ್ರವು ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. ಶಶಿಧರ್ ಕೆಎಂ ನಿರ್ಮಾಣದ ಕಮರ್ಷಿಯಲ್ ಆಕ್ಷನ್ ಎಂಟರ್‌ಟೈನರ್‌ನಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ.
ವೀರಂ ಚಿತ್ರದಲ್ಲಿ ಲೆಜೆಂಡರಿ ನಟ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ನಟಿಸಿರುವ ಪ್ರಜ್ವಲ್, ಒರಟಾದ ನೋಟ, ಉದ್ದ ಕೂದಲು ಮತ್ತು ಗಡ್ಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿಷ್ಯ ಸಿನಿಮಾ ಖ್ಯಾತಿಯ ದೀಪಕ್ ಪ್ರತಿನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವೀರಂ ಬಗ್ಗೆ ನಿರ್ದೇಶಕರು ತಮ್ಮ ಹಿಂದಿನ ಸಂದರ್ಶನದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ಆಸಕ್ತಿದಾಯಕ ಪಾತ್ರವಿದೆ ಮತ್ತು ಈ ಚಿತ್ರವು ಅವರ ಹಿಂದಿನ ಚಿತ್ರಗಳಾದ ಗೆಳೆಯ ಮತ್ತು ಗುಲಾಮ ಮಾದರಿಯಲ್ಲಿದೆ ಎಂದು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಿನಿಮಾ ಇಂಡಸ್ಟ್ರಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ: ನಟಿ ರಚಿತಾ ರಾಮ್
ಈ ಚಿತ್ರದ ಹೊರತಾಗಿ, ಪ್ರಜ್ವಲ್ ಅವರು ಲೋಹಿತ್ ಎಚ್ ನಿರ್ದೇಶನದ ಮಾಫಿಯಾ ಮತ್ತು ತೆಲುಗು ನಿರ್ದೇಶಕ ಹರಿಪ್ರಸಾದ್ ಜಕ್ಕಾ ಅವರೊಂದಿಗೆ ಗಣ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮೇಘನಾ ರಾಜ್ ಸರ್ಜಾ ಅಭಿನಯದ ತತ್ಸಮ ತತ್ಭವ ಚಿತ್ರದಲ್ಲಿಯೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.