ಶಾಕುಂತಲಂ ಚಿತ್ರಕ್ಕೆ ನಟಿ ಸಮಂತಾ ರುತ್ ಪ್ರಭು ಆಯ್ಕೆಯಾಗಿದ್ದೇಗೆ?; ನಿರ್ದೇಶಕರು ಹೇಳಿದ್ದಿಷ್ಟು...
ಪುಷ್ಪ ಚಿತ್ರದ 'ಊ ಅಂಟಾವಾ ಮಾವ' ಹಾಡಿನ ಮೂಲಕ ಅಪಾರ ಮೆಚ್ಚುಗೆಗೆ ಪಾತ್ರವಾದ ನಟಿ ಸಮಂತಾ ರುತ್ ಪ್ರಭು 'ಶಾಕುಂತಲಂ' ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಎಂಬ ಬಗ್ಗೆ ಚಿತ್ರದ ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
Published: 10th April 2023 05:02 PM | Last Updated: 10th April 2023 05:02 PM | A+A A-

ಶಾಕುಂತಲಂ ಸಿನಿಮಾದಲ್ಲಿ ಸಮಂತಾ
ಮುಂಬೈ: ಪುಷ್ಪ ಚಿತ್ರದ 'ಊ ಅಂಟಾವಾ ಮಾವ' ಹಾಡಿನ ಮೂಲಕ ಅಪಾರ ಮೆಚ್ಚುಗೆಗೆ ಪಾತ್ರವಾದ ನಟಿ ಸಮಂತಾ ರುತ್ ಪ್ರಭು 'ಶಾಕುಂತಲಂ' ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಎಂಬ ಬಗ್ಗೆ ಚಿತ್ರದ ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
ನಿರ್ದೇಶಕ ಗುಣಶೇಖರ್ ಅವರು ಈ ಸಿನಿಮಾದ ಸ್ಕ್ರಿಪ್ಟ್ ಬರೆಯುವಾಗ ಸಮಂತಾ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದರಂತೆ.
ಅದನ್ನೇ ವಿವರಿಸುವ ಗುಣಶೇಖರ್, 'ಶಾಕುಂತಲಾ ಮತ್ತು ದುಶ್ಯಂತ್ ಅವರ ಅಮರ ಪ್ರೇಮಕಥೆಯನ್ನು ನಾನು ಡಿಸ್ನಿ ರೀತಿಯ ಚಲನಚಿತ್ರದಲ್ಲಿ ಸುಂದರವಾದ ಕಾಡಿನಲ್ಲಿ ಆಸಕ್ತಿದಾಯಕ ಹಿನ್ನೆಲೆಯಲ್ಲಿ ಮಾಡಲು ಬಯಸಿದಾಗ, ಈ ಪಾತ್ರಕ್ಕೆ ಸೂಕ್ತವಾಗಿ ಹೊಂದುವ ಮತ್ತು ಸಹಸ್ರಾರು ಪ್ರೇಕ್ಷಕರು ಮೆಚ್ಚುವ ಯಾರಾದರೂ ಬೇಕಿತ್ತು. ಈ ವೇಳೆ, ಸಮಂತಾ ಅವರೇ ಸೂಕ್ತ ಎಂದು ನನಗನಿಸಿತು ಮತ್ತು ಅವರನ್ನು ಸಂಪರ್ಕಿಸಿದೆ' ಎನ್ನುತ್ತಾರೆ.
ಸಮಂತಾ ಅವರು ಈ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಮತ್ತು ಅವರಿಗಿಂತ ಉತ್ತಮವಾಗಿ ಯಾರೂ ಅದರಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ನಿರ್ದೇಶಕರು ಹೇಳುತ್ತಾರೆ.
ಇದನ್ನೂ ಓದಿ: ಸಮಂತಾ ಅಭಿನಯದ 'ಶಾಕುಂತಲಂ', ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್; ವಿಶ್ವದಾದ್ಯಂತ ರಿಲೀಸ್!
'ಪ್ರೀತಿಯಲ್ಲಿ ಬೀಳುವ ಮಹಿಳೆಯ ಭಾವನಾತ್ಮಕ ಪ್ರಯಾಣ ಮತ್ತು ಹಣೆಬರಹವು ಅವಳತ್ತ ಎಸೆಯುವ ಸವಾಲುಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಅವಳು ಆಂತರಿಕ ಶಕ್ತಿಯ ಪಾತ್ರವಾಗಿದ್ದು, ತಾನು ಮಾಡುವ ಎಲ್ಲಾ ಕೆಲಸಗಳಲ್ಲೂ ತನ್ನ ಘನತೆ ಮತ್ತು ಪ್ರೀತಿಯೊಂದಿಗೆ ಭಾವನೆಗಳನ್ನು ಚಿತ್ರಿಸುತ್ತಾಳೆ. ಅವಳ ಸತ್ಯವೇ ಅವಳ ಶಕ್ತಿ. ಈ ಎಲ್ಲಾ ಭಾವನೆಗಳನ್ನು ಸಮಂತಾ ಅವರಂತಹ ಅದ್ಭುತ ನಟಿಯಿಂದ ಮಾತ್ರ ಹೊರತೆಗೆಯಬಹುದು ಮತ್ತು ಈ ಮಹಾಕಾವ್ಯವನ್ನು ರಚಿಸಲು ಅವರೇ ನಮ್ಮ ಮುಂದಿದ್ದ ಏಕೈಕ ಆಯ್ಕೆಯಾಗಿದ್ದರು' ಎಂದು ಅವರು ಹೇಳಿದರು.
'ಶಾಕುಂತಲಂ' ಚಿತ್ರಮಂದಿರಗಳಲ್ಲಿ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ.