ಹಾಸ್ಯವು ಸಾಮಾನ್ಯವಾಗಿ ಕಷ್ಟಕರವಾದ ಕಲಾ ಪ್ರಕಾರವಾಗಿದೆ: 'ರಾಮನ ಅವತಾರ'ದ ಬಗ್ಗೆ ನಟ ರಿಷಿ
ರಾಮನ ಅವತಾರದಲ್ಲಿ ತಮಾಷೆಯ ಕಚಗುಳಿಯಿಡಲು ನಟ ರಿಷಿ ಸಜ್ಜಾಗುತ್ತಿದ್ದಾರೆ ಮತ್ತು ಚಿತ್ರತಂಡ ಇತ್ತೀಚೆಗಷ್ಟೇ ವಿಕಾಸ್ ಪಂಪಾಪತಿ ನಿರ್ದೇಶನದ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ರಾಮನ ಅವತಾರವು ಸ್ಥಳೀಯ ರಾಜಕೀಯ ನಾಯಕನಾಗಲು ಬಯಸುವ ರಾಮ ಕೃಷ್ಣ ಎಂಬ ವ್ಯಕ್ತಿಯ ಪ್ರಯಾಣವಾಗಿದೆ ಮತ್ತು ಅನಿಯಂತ್ರಿತ ಸನ್ನಿವೇಶಗಳ ಸರಣಿಯ ಮೂಲಕ ಸಾಗುತ್ತದೆ. ಅದು ಜೀವನದ ಪಾಠಗಳನ್ನು ಕಲಿಯುವಲ್ಲಿ ಮತ್ತು ನಿಜವಾದ ನಾಯಕನಾಗುವಲ್ಲಿ ಕೊನೆಗೊಳ್ಳುತ್ತದೆ.
ಚಿತ್ರದ ಬಗ್ಗೆ ಮಾತನಾಡಿದ ರಿಷಿ, 'ಕಾಮಿಡಿ ಸಾಮಾನ್ಯವಾಗಿ ಕಷ್ಟಕರವಾದ ಕಲಾ ಪ್ರಕಾರವಾಗಿದೆ. ಇದು ಎರಡು ಅರ್ಥವನ್ನು ಹೊಂದಬಹುದು. ಇದು ಅವಮಾನ ಮಾಡುವಂತಹ ಕಾಮಿಡಿ ಆಗಿರಬಹುದು. ಆದರೆ, ಯಾರನ್ನೂ ಅವಮಾನಿಸದೆ ಕಾಮಿಡಿ ಮಾಡಬಹುದು ಎಂಬುದಕ್ಕೆ ನಿರ್ದೇಶಕ ವಿಕಾಸ್ ಪಂಪಾಪತಿಯೇ ಉದಾಹರಣೆ. ನಾನು ಈ ಸಿನಿಮಾವನ್ನು ಮಾಡಲು ತುಂಬಾ ಖುಷಿಪಟ್ಟಿದ್ದೇನೆ ಮತ್ತು ಇದು ನನಗೆ ಸಂತೋಷವನ್ನು ನೀಡಿದ ಯೋಜನೆಯಾಗಿದೆ' ಎಂದು ಹೇಳುತ್ತಾರೆ.
ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ರಾಮಾಯಣ ನಡೆಯುತ್ತಿರುತ್ತದೆ ಎಂದು ಹೇಳುವ ವಿಕಾಸ್, 'ನಮಗೆ ಹನುಮಂತನಂತಹ ಸ್ನೇಹಿತ, ಲಕ್ಷ್ಮಣನಂತಹ ಸಹೋದರ, ಸೀತೆಯಂತಹ ಪ್ರೇಮಿ ಮತ್ತು ರಾವಣನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಚಿತ್ರವು ಸ್ವಚ್ಛವಾದ ಕಾಮಿಡಿಯೊಂದಿಗೆ ಸದ್ಯದ ಪೀಳಿಗೆಯ ಚಿತ್ರವಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿ ಮತ್ತು ಕರಾವಳಿ ಪ್ರದೇಶಗಳಲ್ಲಿ ನಡೆದಿದೆ' ಎಂದು ಹೇಳುತ್ತಾರೆ.
ಚಿತ್ರವು ಈಗ ಪೋಸ್ಟ್ ಪ್ರೊಡಕ್ಷನ್ ಹಂಚದಲ್ಲಿದ್ದು, ಚಿತ್ರತಂಡ ಜೂನ್‌ನಲ್ಲಿ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಅಮ್ರೇಜ್ ಸೂರ್ಯವಂಶಿ ನಿರ್ಮಿಸಿರುವ ರಾಮನ ಅವತಾರದಲ್ಲಿ ಪ್ರಣಿತಾ ಸುಭಾಷ್, ಶುಭ್ರಾ ಅಯ್ಯಪ್ಪ, ಅನಿರುಧಾ ಆಚಾರ್ಯ ಕೂಡ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಜೂಡಾ ಸ್ಯಾಂಡಿ ಸಂಯೋಜಿಸಿದ್ದಾರೆ ಮತ್ತು ವಿಷ್ಣು ಪ್ರಸಾದ್ ಮತ್ತು ಸಮೀರ್ ದೇಶಪಾಂಡೆ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ