'ಎಲ್ರ ಕಾಲೆಳೆಯತ್ತೆ ಕಾಲ' ಸಿನಿಮಾಗಾಗಿ ಚಂದನ್ ಶೆಟ್ಟಿ ಜೊತೆ ನಟಿ ರಾಗಿಣಿ ದ್ವಿವೇದಿ ಡ್ಯಾನ್ಸ್!

ಈ ಹಾಡಿನಲ್ಲಿ ಚಂದನ್ ಮತ್ತು ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಚಂದನ್ ಅವರ ಸಂಗೀತ ಸಂಯೋಜನೆಯಲ್ಲಿ, ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಹಾಡಿದ್ದಾರೆ. ಹಾಡಿಗೆ ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ ಇದೆ. 
ಚಂದನ್ ಶೆಟ್ಟಿ ಮತ್ತು ರಾಗಿಣಿ ದ್ವಿವೇದಿ
ಚಂದನ್ ಶೆಟ್ಟಿ ಮತ್ತು ರಾಗಿಣಿ ದ್ವಿವೇದಿ
Updated on

ಸುಜಯ್ ಶಾಸ್ತ್ರಿ ಅವರ ಮುಂಬರುವ ನಿರ್ದೇಶನದ 'ಎಲ್ರ ಕಾಲೆಳೆಯತ್ತೆ ಕಾಲ' ಚಿತ್ರದಲ್ಲಿ ನಟನಾಗಿ ಬದಲಾಗಲು ಜನಪ್ರಿಯ ರ‍್ಯಾಪರ್ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಸಿದ್ಧರಾಗಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಿರುವಾಗಲೇ, ಚಿತ್ರತಂಡ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ.

ಈ ಹಾಡಿನಲ್ಲಿ ಚಂದನ್ ಮತ್ತು ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಚಂದನ್ ಅವರ ಸಂಗೀತ ಸಂಯೋಜನೆಯಲ್ಲಿ, ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಹಾಡಿದ್ದಾರೆ. ಹಾಡಿಗೆ ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ ಇದೆ. 

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಚಂದನ್, 'ನಟಿ ರಾಗಿಣಿ ದ್ವಿವೇದಿ ಅವರ ಮೊದಲ ಸಿನಿಮಾ ಕೆಂಪೇಗೌಡರಿಂದಲೂ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಖುಷಿ ತಂದಿದೆ. ಎಲ್ರ ಕಾಲೆಳೆಯತ್ತೆ ಕಾಲ ನನ್ನ ಮೊದಲ ಚಿತ್ರ ಮತ್ತು ನನಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳುತ್ತಾರೆ.

ಚಂದನ್ ಅವರಿಗೆ ಶುಭ ಹಾರೈಸಿದ ರಾಗಿಣಿ, ಚಂದನ್ ಸಂಗೀತವನ್ನು ಆನಂದಿಸುತ್ತಿದ್ದಾರೆ ಮತ್ತು ಅವರೊಂದಿಗೆ ಹೆಜ್ಜೆ ಹಾಕಿರುವುದು ಸಂತೋಷವಾಗಿದೆ ಎಂದು ಹೇಳಿದರು. 

80 ಮತ್ತು 90ರ ದಶಕದಲ್ಲಿ ನಡೆಯುವ ಕಾಮಿಡಿ ಎಂಟರ್‌ಟೈನರ್ ಸಿನಿಮಾದಲ್ಲಿ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಚಿತ್ರದಲ್ಲಿ ಮಂಡ್ಯ ರಮೇಶ್, ಮಂಜು ಪಾವಗಡ, ರಾಕೇಶ್ ಪುರ್ಜರಿ ಮುಂತಾದವರು ನಟಿಸಿದ್ದಾರೆ.

ಗೋಕುಲ್ ಎಂಟರ್‌ಟೈನರ್ಸ್ ಅಡಿಯಲ್ಲಿ ಉಷಾ ಗೋವಿಂದರಾಜು ಅವರ ಬೆಂಬಲದ ಈ ಚಿತ್ರಕ್ಕೆ ಪ್ರವೀಣ್ ಮತ್ತು ಪ್ರದೀಪ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರತಂಡ ಜೂನ್‌ನಲ್ಲಿ ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com