ವಿನೋದ್ ರಾಜ್ ಕುಟುಂಬ
ವಿನೋದ್ ರಾಜ್ ಕುಟುಂಬ

ಅಂತರಂಗ ಕೆದಕಬೇಡಿ: ಮಗ ವಿನೋದ್ ರಾಜ್ ಗೌಪ್ಯ ಮದುವೆ ಬಗ್ಗೆ ಹಿರಿಯ ನಟಿ ಲೀಲಾವತಿ ಹೇಳಿದ್ದೇನು?

ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಕುಮಾರ್ ಮದುವೆ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ನಿರ್ದೇಶಕ ಹಾಗೂ ಡಾ.ರಾಜ್ ಕುಟುಂಬಕ್ಕೆ ಹತ್ತಿರವಾಗಿದ್ದ ಪ್ರಕಾಶ್ ರಾಜ್ ಮೆಹು ಫೋಟೋವೊಂದನ್ನು ಹಂಚಿಕೊಂಡಿದ್ದರು.

ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಕುಮಾರ್ ಮದುವೆ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ನಿರ್ದೇಶಕ ಹಾಗೂ ಡಾ.ರಾಜ್ ಕುಟುಂಬಕ್ಕೆ ಹತ್ತಿರವಾಗಿದ್ದ ಪ್ರಕಾಶ್ ರಾಜ್ ಮೆಹು ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ವಿನೋದ್ ರಾಜ್ ಕುಮಾರ್ ಪತ್ನಿ ಹಾಗೂ ಪುತ್ರ ಕೂಡ ಇದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಲೀಲಾವತಿ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ  ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂಥೆಂದವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದು ಹೇಳಿದ್ದಾರೆ.

ನನ್ನ ಮಗ ಪವಿತ್ರವಾಗಿದ್ದಾನೆ. ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲೂ, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಏಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಯಾಕೆ ನಿಮಗೆ ಇಷ್ಟೇ ಜನ ಸಿಕ್ಕರೆ? ಎಂಬ ಮಾತು ಕೇಳಿ ಬಂದರೂ, ನಾನು ಮಾತನಾಡಿರಲಿಲ್ಲ, ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’ ಎಂದಿದ್ದಾರೆ.

ಮಾತನಾಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು. ಆ ವಿಚಾರದಲ್ಲಿ ನನಗೆ ತುಂಬ ಭಯ. ಸೊಸೆ ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ. ನಮ್ಮ ಅಂತರಂಗ ಸುದ್ದಿಯನ್ನೆಲ್ಲ ಯಾಕೆ ಕೇಳ್ತಿದ್ದಾರೆ. ಆದರೆ, ಯಾರು ಏನೇ ಹೇಳಿದರೂ ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿಯೇ ಇದ್ದೇನೆ. ಕಡು ಬಡವಳು ನಾನು. ಜಮೀನು ತೆಗೆದುಕೊಂಡಿದ್ದು 30 ಸಾವಿರಕ್ಕೆ.. ಸೊಸೆಗೆ ಒಳ್ಳೆಯ ಬಂಗಲೆ ಇದೆ. ನನಗೆ ನೋವುಂಟು ಮಾಡುವವರು ನರಕದಲ್ಲಿ ಬೀಳ್ತಾರೆ. ಎಲ್ಲವನ್ನೂ ಹೇಳುವುದಕ್ಕೆ ಆಗಲ್ಲ. ಸಂಕೋಚ ನನಗೂ ಆಗುತ್ತದೆ. 600 ಸಿನಿಮಾಗಳಲ್ಲಿ ನಟಿಸಿದ್ದರೂ ಸಂಕೋಚ ಇದೆ".

ಇರೋ ಒಬ್ಬ ಮಗನ ಮದುವೆ ವಿಜ್ರಂಭಣೆಯಿಂದ ಮಾಡೋಕೆ ಆಗಲಿಲ್ವೇ ಎಂದು ಅನಿಸಿದೆ. ಪರಮಾತ್ಮನ್ನ ಕೇಳೋದೆ ಆಯ್ತು. ಯಾವ ತಾಯಿಯೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿ ಆಗದಿರಲಿ ಎಂದು ಬಯಸುವುದಿಲ್ಲ. ಚೆನ್ನಾಗಿ ಆಗಲಿ ಎಂದೇ ಬಯಸ್ತಾಳೆ" ಎಂದಿದ್ದಾರೆ ಲೀಲಾವತಿ.

ಅಮ್ಮಾವ್ರು ಇಳಿವಯಸ್ಸಿನಲ್ಲಿದ್ದಾರೆ. ನೆಮ್ಮದಿಯಾಗಿದ್ದಾರೆ. ನೆಮ್ಮದಿಯಾಗಿ ಇರೋಕೆ ಬಿಡಿ. ಅವರು ಕರ್ನಾಟಕದ ಆಸ್ತಿ. ಎಷ್ಟೋ ಜನ ಆಸ್ತಿಗಳಾಗ್ತಾರೆ. ಎಲ್ಲ ಆಸ್ತಿಗಳು ಸೇರಿದರೆ ಇವರು ದೊಡ್ಡ ಆಸ್ತಿ ಆಗ್ತಾರೆ. ಒಬ್ಬೇ ಒಬ್ಬ ಕಲಾವಿದ ಏನೂ ಆಗೋಕೆ ಸಾಧ್ಯ ಇಲ್ಲ. ನಿರ್ಮಾಪಕರು, ನಿರ್ದೇಶಕರು, ಸಾಹಿತಿಗಳು ಅಭಿಮಾನಿಗಳು ಎಲ್ಲ ಸೇರಿದರೆ ನಾವು ನಾವಾಗ್ತೇವಿ. ಅದನ್ನ ಮೈಂಡ್‌ನಲ್ಲಿ ಇಟ್ಟುಕೊಂಡು ನಾವೇ ನಾವೇ ಅಂದುಕೊಂಡರೆ ಇದು ತಪ್ಪು. ಎಲ್ಲರೂ ಸೇರಬೇಕು. ಅದರಲ್ಲಿ ನನ್ನ ತಾಯಿಯೂ ಒಬ್ಬರು. ಆಸ್ತಿನಾ ಅಸ್ಥಿ ಮಾಡಲು ಹೋಗಬೇಡಿ ಅಷ್ಟೇ" ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com