ರವಿಚಂದ್ರನ್ ನಟನೆಯ 'ದಿ ಜಡ್ಜ್‌ಮೆಂಟ್' ಚಿತ್ರತಂಡಕ್ಕೆ ನಟ ದಿಗಂತ್, ನಟಿ ಧನ್ಯಾ ರಾಮ್‌ಕುಮಾರ್ ಸೇರ್ಪಡೆ
ಇದೊಂದು ಕಾನೂನು ಥ್ರಿಲ್ಲರ್ ಆಗಿದ್ದು, 'ದಿ ಜಡ್ಜ್‌ಮೆಂಟ್- ಸೀ ಯೂ ಇನ್ ಕೋರ್ಟ್' ಎಂಬ ಶೀರ್ಷಿಕೆಯಡಿ ಚಿತ್ರವು ಶುಕ್ರವಾರ ಸೆಟ್ಟೇರಿದೆ. ಸೋಮವಾರದಂದು ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ.
Published: 22nd April 2023 11:14 AM | Last Updated: 22nd April 2023 11:14 AM | A+A A-

ದಿಗಂತ್ - ಧನ್ಯಾ ರಾಮ್‌ಕುಮಾರ್
ಅಮೃತ ಅಪಾರ್ಟ್‌ಮೆಂಟ್ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಗುರುರಾಜ್ ಕುಲಕರ್ಮಿ ಇದೀಗ ಮತ್ತೊಂದು ಸಿನಿಮಾ ನಿರ್ದೇಶನಕ್ಕಿಳಿದಿದ್ದು, ಚಿತ್ರದಲ್ಲಿ ನಟ ರವಿಚಂದ್ರನ್ ನಟಿಸಲಿದ್ದಾರೆ ಎಂದು ಈ ಮೊದಲೇ ನಾವು ವರದಿ ಮಾಡಿದ್ದೆವು. ಇದೊಂದು ಕಾನೂನು ಥ್ರಿಲ್ಲರ್ ಆಗಿದ್ದು, 'ದಿ ಜಡ್ಜ್‌ಮೆಂಟ್- ಸೀ ಯೂ ಇನ್ ಕೋರ್ಟ್' ಎಂಬ ಶೀರ್ಷಿಕೆಯಡಿ ಚಿತ್ರವು ಶುಕ್ರವಾರ ಸೆಟ್ಟೇರಿದೆ. ಸೋಮವಾರದಂದು ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ.
ಚಿತ್ರದ ತಾರಾಗಣದಲ್ಲಿ ದಿಗಂತ್ ಮತ್ತು ಧನ್ಯಾ ರಾಮ್‌ಕುಮಾರ್ ಇದ್ದಾರೆ. ಮುಹೂರ್ತ ಸಮಾರಂಭದಲ್ಲಿ ಈ ಇಬ್ಬರೂ ಚಿತ್ರದಲ್ಲಿರುವುದಾಗಿ ಅಧಿಕೃತ ಘೋಷಣೆಯನ್ನು ಮಾಡಲಾಯಿತು. ದಿ ಜಡ್ಜ್‌ಮೆಂಟ್ ಸಿನಿಮಾ ಮೂಲಕ ವಿರಾಮದ ನಂತರ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಕೂಡ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ನಿರ್ದೇಶಕರ ಪ್ರಕಾರ, ದಿಗಂತ್ ಕೂಡ ಚಿತ್ರದ ನಾಯಕರಲ್ಲೊಬ್ಬರು. ನಿರ್ದೇಶಕರು ರವಿಚಂದ್ರನ್ ಅವರೊಂದಿಗೆ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ದಿಗಂತ್‌ಗೆ ಜೋಡಿಯಾಗಿ ಧನ್ಯಾ ನಟಿಸಿದ್ದರೆ, ರವಿಚಂದ್ರನ್‌ಗೆ ಜೋಡಿಯನ್ನು ನಾಯಕಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರತಂಡ ನಿರತವಾಗಿದೆ.
ನಿರ್ದೇಶಕರು ಖುಷ್ಭು ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಿದ್ದು, ಈ ಕುರಿತು ಶೀಘ್ರದಲ್ಲೇ ಅಂತಿಮ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರಕ್ಕೆ ಎಂಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ.
ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಪ್ರಮೋದ್ ಮರವಂತೆ ಅವರ ಸಾಹಿತ್ಯದೊಂದಿಗೆ, ದಿ ಜಡ್ಜ್‌ಮೆಂಟ್‌ಗೆ ಶಿವ ಬಿಕೆ ಕುಮಾರ್ ಅವರ ಛಾಯಾಗ್ರಹಣವಿದೆ.