ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್-2'ಗೆ ಉತ್ತಮ ಪ್ರತಿಕ್ರಿಯೆ; ಎರಡನೇ ವಾರಕ್ಕೆ ಮಲ್ಟಿಪ್ಲೆಕ್ಸ್ ಶೋ ಹೆಚ್ಚಳ
ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ 2: ಮಾಯಾವಿಯ ನಿಗೂಢ ಪ್ರಕರಣ ಏಪ್ರಿಲ್ 14 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ.
Published: 22nd April 2023 11:28 AM | Last Updated: 22nd April 2023 11:28 AM | A+A A-

ಶಿವಾಜಿ ಸುರತ್ಕಲ್ 2 ಚಿತ್ರದ ಪೋಸ್ಟರ್
ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ 2: ಮಾಯಾವಿಯ ನಿಗೂಢ ಪ್ರಕರಣ ಏಪ್ರಿಲ್ 14 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ.
ಆಕಾಶ್ ಶ್ರೀವತ್ಸ ನಿರ್ದೇಶನದ ಮಿಸ್ಟರಿ ಥ್ರಿಲ್ಲರ್ 2020ರ ಶಿವಾಜಿ ಸುರತ್ಕಲ್ ಚಿತ್ರದ ಮುಂದುವರಿದ ಭಾಗವಾಗಿದೆ. ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಅಗಾಧ ಪ್ರತಿಕ್ರಿಯೆಯ ನಂತರ, ಎರಡನೇ ವಾರದಲ್ಲಿ ಚಿತ್ರವು ಹೆಚ್ಚು ಮಲ್ಟಿಪ್ಲೆಕ್ಸ್ ಶೋಗಳನ್ನು ಪಡೆಯುತ್ತಿದೆ ಎಂದು ನಿರ್ದೇಶಕರು ಬಹಿರಂಗಪಡಿಸಿದರು.
ಶಿವಾಜಿ ಸುರತ್ಕಲ್ 2 ಸಿನಿಮಾವು ಮೊದಲ ಭಾಗದ ಕಲೆಕ್ಷನ್ ಅನ್ನು ಕೂಡ ಹಿಂದಿಕ್ಕಿದೆ. 'ಇದು ಕರ್ನಾಟಕದ ವಿಧಾನಸಭೆ ಚುನಾವಣೆ ಮತ್ತು ಐಪಿಎಲ್ ಸಮಯವಾಗಿದ್ದರೂ, ಕುಟುಂಬಗಳು ಥಿಯೇಟರ್‌ಗಳಿಗೆ ಬರುತ್ತಿರುವುದನ್ನು ಗಮನಿಸಲು ನಾವು ಸಂತೋಷಪಡುತ್ತೇವೆ. ಇದುವೇ ನಮ್ಮ ಪ್ರಕಾರ ಯಶಸ್ಸು. ಜನರು ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಭಾವನಾತ್ಮಕ ದೃಶ್ಯವಾಗಿದೆ ಮತ್ತು ಪ್ರೇಕ್ಷಕರು ಅದನ್ನು ಆನಂದಿಸುತ್ತಿದ್ದಾರೆ. ನನಗೆ ಖುಷಿಯಾಗಿದೆ' ಎಂದು ಆಕಾಶ್ ಹೇಳುತ್ತಾರೆ.
ಇದನ್ನೂ ಓದಿ: 'ಶಿವಾಜಿ ಸುರತ್ಕಲ್ 2' ಸಿನಿಮಾದ ಕಥೆ ಬಲಿಷ್ಠವಾದ ಮಹಿಳಾ ಪಾತ್ರಗಳನ್ನು ಒಳಗೊಂಡಿದೆ: ಆಕಾಶ್ ಶ್ರೀವತ್ಸ
ರೇಖಾ ಕೆಎನ್ ಮತ್ತು ಅನುಪ್ ಗೌಡ ನಿರ್ಮಾಣದ ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಘು ರಾಮನಕೊಪ್ಪ, ವಿದ್ಯಾ ಮೂರ್ತಿ ಮತ್ತು ಆರಾಧ್ಯ ಕೂಡ ನಟಿಸಿದ್ದಾರೆ. ಈಮಧ್ಯೆ, ರಿಮೇಕ್ ರೈಟ್ಸ್‌ಗೆ ಬೇಡಿಕೆ ಬಂದಿದೆ ಎಂದು ನಿರ್ದೇಶಕರು ಹೇಳುತ್ತಾರೆ. ತಮ್ಮ ಪ್ರಸ್ತುತ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ ನಂತರ ಚಿತ್ರದ ಮೂರನೇ ಕಂತಿನ ಕೆಲಸ ಮಾಡಲು ಯೋಜಿಸುತ್ತಿದ್ದಾರೆ.