'ದಿ ಜಡ್ಜ್ ಮೆಂಟ್' ನಲ್ಲಿ ರವಿಚಂದ್ರನ್ ಗೆ ಮೇಘನಾ ಗಾಂವ್ಕರ್ ನಾಯಕಿ!
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು 'ದಿ ಜಡ್ಜ್‌ಮೆಂಟ್' ಸಿನಿಮಾ ಚಿತ್ರೀಕರಣವನ್ನು ಸೋಮವಾರ ಆರಂಭಿಸಿದ್ದಾರೆ. ರವಿಚಂದ್ರನ್ ನಾಯಕನಾಗಿ ನಟಿಸಿರುವ ಕಾನೂನು ಥ್ರಿಲ್ಲರ್ ನಲ್ಲಿ ಹಲವು ಕಲಾವಿದರು ನಟಿಸುತ್ತಿದ್ದಾರೆ.
Published: 26th April 2023 12:35 PM | Last Updated: 26th April 2023 06:25 PM | A+A A-

ರವಿಚಂದ್ರನ್ ಮತ್ತು ಮೇಘನಾ ಗಾಂವ್ಕರ್
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು 'ದಿ ಜಡ್ಜ್‌ಮೆಂಟ್' ಸಿನಿಮಾ ಚಿತ್ರೀಕರಣವನ್ನು ಸೋಮವಾರ ಆರಂಭಿಸಿದ್ದಾರೆ. ರವಿಚಂದ್ರನ್ ನಾಯಕನಾಗಿ ನಟಿಸಿರುವ ಕಾನೂನು ಥ್ರಿಲ್ಲರ್ ನಲ್ಲಿ ಹಲವು ಕಲಾವಿದರು ನಟಿಸುತ್ತಿದ್ದಾರೆ.
ದಿಗಂತ್, ಧನ್ಯ ರಾಮ್‌ಕುಮಾರ್ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಚಿತ್ರದ ಭಾಗವಾಗಿದ್ದಾರೆ. ಮೇಘನಾ ಗಾಂವ್ಕರ್ ರವಿಚಂದ್ರನ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕ್ರೇಜಿ ಸ್ಟಾರ್ ಜೊತೆ ಪರದೆ ಹಂಚಿಕೊಳ್ಳಲಿದ್ದಾರೆ.
ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ನಟಿಸಿದ್ದ ಮೇಘನಾ ಸಿನಿಮಾ ಯಶಸ್ಸಿನಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವ ನಟಿಯ ಹುಡುಕಾಟದಲ್ಲಿದ್ದೆ, ಮೇಘನಾ ಆ ಪಾತ್ರಕ್ಕೆ ಪರಿಪೂರ್ಣ ಎನಿಸಿದರು. ನಾನು ಅವರನ್ನು ಫೈನಲ್ ಮಾಡುವ ಮೊದಲು ಒಂದೆರಡು ಬಾರಿ ಭೇಟಿಯಾದೆ ಎಂದು ನಿರ್ದೇಶಕ ಗುರುರಾಜ್ ಹೇಳಿದ್ದಾರೆ.
ಇದನ್ನೂ ಓದಿ: ರವಿಚಂದ್ರನ್ ನಟನೆಯ 'ದಿ ಜಡ್ಜ್‌ಮೆಂಟ್' ಚಿತ್ರತಂಡಕ್ಕೆ ನಟ ದಿಗಂತ್, ನಟಿ ಧನ್ಯಾ ರಾಮ್‌ಕುಮಾರ್ ಸೇರ್ಪಡೆ
ಜಿ9 ಕಮ್ಯುನಿಕೇಷನ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರಕ್ಕೆ ಎಂಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್, ಗೀತರಚನೆಕಾರರಾಗಿ ಪ್ರಮೋದ್ ಮರವಂತೆ ಮತ್ತು ಛಾಯಾಗ್ರಾಹಕರಾಗಿ ಶಿವ ಬಿ ಕೆ ಕುಮಾರ್ ಅವರನ್ನು ತಂಡವು ಆಯ್ಕೆ ಮಾಡಿದೆ.
ನನ್ನ ಚಿತ್ರದಲ್ಲಿ ಖುಷ್ಭು ಅವರು ಪ್ರಮುಖ ಪಾತ್ರ ನಿರ್ವಹಿಸಬೇಕೆಂದು ನಾನು ಬಯಸುತ್ತೇನೆ, ಈ ಸಂಬಂಧ ನಾವು ಮಾತುಕತೆ ನಡೆಸುತ್ತಿದ್ದೇವೆ. ಸದ್ಯ ಅವರು ಟ್ರಾವೆಲ್ಲಿಂಗ್ ನಲ್ಲಿದ್ದಾರೆ, ಶೂಟಿಂಗ್ ದಿನಾಂಕಗಳನ್ನು ಹೊಂದಿಸಿದ ನಂತರ ಅಂತಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ.