ರಜಿನಿಕಾಂತ್-ಶಿವರಾಜ್‌ಕುಮಾರ್-ಮೋಹನ್‌ಲಾಲ್ ಅಭಿನಯದ ಜೈಲರ್ ಸಿನಿಮಾ ಮೊದಲ ವಾರ ಗಳಿಸಿದ್ದೆಷ್ಟು?
ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅಭಿನಯದ ತಮಿಳು ಚಿತ್ರ ಜೈಲರ್, ಮೊದಲ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 375.40 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಚಿತ್ರತಂಡ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.
Published: 17th August 2023 03:57 PM | Last Updated: 18th August 2023 01:48 PM | A+A A-

ಜೈಲರ್ ಸಿನಿಮಾ ಪೋಸ್ಟರ್
ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅಭಿನಯದ ತಮಿಳು ಚಿತ್ರ ಜೈಲರ್, ಮೊದಲ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 375.40 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಚಿತ್ರತಂಡ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.
ನೆಲ್ಸನ್ ದಿಲೀಪ್‌ಕುಮಾರ್ ಬರೆದು, ನಿರ್ದೇಶಿಸಿದ ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬೆಂಬಲ ನೀಡಿದೆ. ಚಿತ್ರದಲ್ಲಿ ಮಲಯಾಳಂ ನಟ ಮೋಹನ್‌ಲಾಲ್, ಕನ್ನಡದ ನಟ ಶಿವರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ಭಾರತೀಯ ಚಿತ್ರೋದ್ಯಮದ ದಿಗ್ಗಜರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟೈಗರ್ ಮುತ್ತುವೇಲ್ ಪಾಂಡಿಯನ್ ಎಂಬ ನಿವೃತ್ತ ಜೈಲರ್ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಚಿತ್ರವು ವಿಗ್ರಹ ಕಳ್ಳಸಾಗಣೆದಾರ ಮತ್ತು ಆತನ ಹಿಡಿತದಿಂದ ತನ್ನ ಮಗನನ್ನು ರಕ್ಷಿಸಿಕೊಳ್ಳುವ ಸುತ್ತ ಸುತ್ತುತ್ತದೆ.
Alapparai kelappitom #JailerRecordMakingBO@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi @mirnaaofficial @kvijaykartik @Nirmalcuts @KiranDrk @StunShiva8… pic.twitter.com/d0gvpwUwyy
— Sun Pictures (@sunpictures) August 17, 2023
ಚಿತ್ರದ ಇತರ ತಾರಾಗಣದಲ್ಲಿ ರಮ್ಯಾ ಕೃಷ್ಣ, ವಸಂತ್ ರವಿ, ವಿನಾಯಕ್, ಯೋಗಿ ಬಾಬು, ಮಿರ್ನಾ, ಸುನೀಲ್, ತಮನ್ನಾ ಸೇರಿದಂತೆ ಇತರರು ಇದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ: ಜೈಲರ್: ಶಿವಣ್ಣನ ಅಭಿನಯಕ್ಕೆ ಮನಸೋತ ಪರಭಾಷಿಕರು! ಹೊಸ ಅಭಿಮಾನಿ ಬಳಗ ಉದಯ
ಡಾರ್ಕ್ ಕಾಮಿಡಿ ಆಕ್ಷನ್ ಡ್ರಾಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಕರಾಗಿದ್ದಾರೆ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಬೀಸ್ಟ್, ಡಾಕ್ಟರ್ ಮತ್ತು ಕೊಲಮಾವು ಕೋಕಿಲಾ ನಂತರ ನೆಲ್ಸನ್ ನಿರ್ದೇಶನದ ನಾಲ್ಕನೇ ಚಿತ್ರ ಜೈಲರ್ ಆಗಿದೆ.