ಟೀಸರ್ ಬಿಡುಗಡೆ: 'ಉತ್ತರಕಾಂಡ' ಸಿನಿಮಾದಲ್ಲಿ 'ಗಬ್ರು ಸತ್ಯ' ಪಾತ್ರಕ್ಕೆ ಜೀವ ತುಂಬಿದ ಧನಂಜಯ್!

ಮುಂಬರುವ ರೋಹಿತ್ ಪದಕಿ ನಿರ್ದೇಶನದ ಚಿತ್ರ 'ಉತ್ತರಕಾಂಡ' ಸಿನಿಮಾದಲ್ಲಿ ಧನಂಜಯ್ ಪಾತ್ರವನ್ನು ಟೀಸರ್ ಮೂಲಕ ಭರ್ಜರಿಯಾಗಿ ಪರಿಚಯಿಸಲಾಗಿದೆ. ಟೀಸರ್‌ನಲ್ಲಿ, ನಾವು ಧನಂಜಯ್ ಅವರನ್ನು ಗಬ್ರು ಸತ್ಯನಾಗಿ ನೋಡುತ್ತೇವೆ. ಆತನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯ ಛಾಯೆಗಳನ್ನು ತೋರಿಸುತ್ತದೆ.
ಉತ್ತರಕಾಂಡ ಸಿನಿಮಾದಲ್ಲಿ ನಟ ಧನಂಜಯ್ ಲುಕ್
ಉತ್ತರಕಾಂಡ ಸಿನಿಮಾದಲ್ಲಿ ನಟ ಧನಂಜಯ್ ಲುಕ್

ಮುಂಬರುವ ರೋಹಿತ್ ಪದಕಿ ನಿರ್ದೇಶನದ ಚಿತ್ರ 'ಉತ್ತರಕಾಂಡ' ಸಿನಿಮಾದಲ್ಲಿ ಧನಂಜಯ್ ಪಾತ್ರವನ್ನು ಟೀಸರ್ ಮೂಲಕ ಭರ್ಜರಿಯಾಗಿ ಪರಿಚಯಿಸಲಾಗಿದೆ. ಟೀಸರ್‌ನಲ್ಲಿ, ನಾವು ಧನಂಜಯ್ ಅವರನ್ನು ಗಬ್ರು ಸತ್ಯನಾಗಿ ನೋಡುತ್ತೇವೆ. ಆತನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯ ಛಾಯೆಗಳನ್ನು ಟೀಸರ್ ತೋರಿಸುತ್ತದೆ.

ಟೀಸರ್‌ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಎದುರಾಗುವ ಒಂದು ಜಟಿಲ ಸವಾಲನ್ನು ಸೂಚಿಸುತ್ತದೆ. ಸತ್ಯನನ್ನು ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗುತ್ತದೆ ಮತ್ತು ಇದು ಪಾತ್ರದ ಸಾರವನ್ನು ಒದಗಿಸುತ್ತದೆ. ಉತ್ತರ ಕರ್ನಾಟಕದ ಆಡುಭಾಷೆಯಲ್ಲಿಯೇ ಹೇಳಲಾಗಿರುವ ಬಲಿಷ್ಠ ಸಂಭಾಷಣೆಗಳಿಂದ ಟೀಸರ್ ಸಮೃದ್ಧವಾಗಿದೆ.

ವಿಜಯಪುರ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೀಸರ್ ಅನ್ನು ಸೆಟ್ ಮಾಡಲಾಗಿದ್ದು, ಗಬ್ರು ಸತ್ಯನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವುದನ್ನು ತೋರಿಸಿದೆ. ಗಬ್ರು ಸತ್ಯ ಠಾಣೆಯಿಂದ ಹೊರಡುವಾಗ ಪೋಲೀಸ್ ಇನ್ಸ್‌ಪೆಕ್ಟರ್, 'ಇನ್ನೊಮ್ಮೆ ಎಲ್ಲಾರ ಆಜುಬಾಜು ನಿನ್ನೆಸರು ನನ್ನ ಕಿವಿಗ್ ಬಿತ್ತು ಅಂದ್ರ ಸೀದಾ ಊಪರ್, ಅರ್ಥ ಆಯ್ತಲ್ಲ' ಎಂದು ಎಚ್ಚರಿಕೆ ನೀಡುತ್ತಾರೆ. ಬಳಿಕ ಹೊರಗಡೆ ಹೋಗಿ ವಾಪಸ್ ಬರುವ ಸತ್ಯ, 'ಸರ, ಇವತ್ ನಂದು ಹ್ಯಾಪಿ ಬರ್ತಡೆ ಟು ಮಿ ಸರ, ಅದಕ್ಕೆ ನಿಮಗ ಬಿಸಿ ಬಾಲುಷಾ ತಂದೀನ್ರಿ, ಬಿಸಿ ಇದ್ದಾಗ್ಲೆ ತಿನ್ರಿ ಸರ ದೇವ್ರು ಕಂಡಂಗ್ ಆಗ್ತನು' ಎಂದು ಹೇಳಿ ಹೊರಡುತ್ತಿದ್ದಂತೆ ಇತ್ತ ಪೊಲೀಸ್ ಠಾಣೆ ಸ್ಫೋಟಗೊಳ್ಳುತ್ತದೆ.

ರತ್ನನ್ ಪ್ರಪಂಚ ನಂತರ ಕೆಆರ್‌ಜಿ ಸ್ಟುಡಿಯೋಸ್, ನಿರ್ದೇಶಕ ರೋಹಿತ್ ಪದಕಿ ಮತ್ತು ಧನಂಜಯ್ ನಡುವಿನ ಎರಡನೇ ಸಿನಿಮಾ ಉತ್ತರಕಾಂಡ ಆಗಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣದ ಈ ಚಿತ್ರದಲ್ಲಿ ನಟಿ ರಮ್ಯಾ ನಾಯಕಿಯಾಗಿ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಟ ದಿಗಂತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com