ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಪ್ರಭಾಸ್ ನಟನೆಯ 'ಸಲಾರ್': ಮೊದಲ ದಿನ 175 ಕೋಟಿ ರೂಪಾಯಿ ಗಳಿಕೆ?

ಭಾರತೀಯ ಚಿತ್ರರಂಗದ ಬಹು ನಿರೀಕ್ಷೆಯ 'ಸಲಾರ್: ಭಾಗ ಒಂದು ಇಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಇನ್ನು ಸಲಾರ್ ಚಿತ್ರ ಮೊದಲ ದಿನ ಜಾಗತಿಕವಾಗಿ 175 ಕೋಟಿ ರೂಪಾಯಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಭಾರತೀಯ ಚಿತ್ರರಂಗದ ಬಹು ನಿರೀಕ್ಷೆಯ 'ಸಲಾರ್: ಭಾಗ ಒಂದು ಇಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಇನ್ನು ಸಲಾರ್ ಚಿತ್ರ ಮೊದಲ ದಿನ ಜಾಗತಿಕವಾಗಿ 175 ಕೋಟಿ ರೂಪಾಯಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಇಂಡಸ್ಟ್ರಿ ಟ್ರ್ಯಾಕಿಂಗ್ ಸೈಟ್ Sacnilk ಪ್ರಕಾರ, ಭಾರತದಲ್ಲಿ ಚಿತ್ರ ಮುಂಗಡ ಮಾರಾಟದಲ್ಲಿ 49 ಕೋಟಿ ರೂಪಾಯಿ ಗಳಿಸಿದೆ. ಬಿಡುಗಡೆ ದಿನದಂದು ಅದು 60 ಕೋಟಿ ರೂಪಾಯಿಗಳನ್ನು ಗಳಿಸಲಿದೆ ಎಂದು ಈಗ ವರದಿಯಾಗಿದೆ. ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

'ಸಲಾರ್' ಆಕ್ಷನ್ ಡ್ರಾಮಾ ಆಗಿದ್ದು, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಜಗತ್ತಿನಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಲಾರ್ ಬಿಡುಗಡೆಯ ದಿನದಂದು ಜಾಗತಿಕವಾಗಿ ಸುಮಾರು 180 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಆನ್‌ಲೈನ್ ಬುಕಿಂಗ್‌ನಲ್ಲಿ ಚಿತ್ರವು 42 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಎರಡನ್ನೂ ಪರಿಗಣಿಸಿದಾಗ, ಎಲ್ಲಾ ಭಾಷೆಗಳಲ್ಲಿ ಒಟ್ಟಾರೆ ಆರಂಭಿಕ ದಿನದ ಗಳಿಕೆಯು ಸುಮಾರು 180 ಕೋಟಿ ರೂಪಾಯಿ ಆಗಲಿದೆ.

ವಿಶ್ವಾದ್ಯಂತ ಸಂಗ್ರಹಣೆಯಲ್ಲಿ, 'ಸಲಾರ್' 45 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಗಳಿಸುವ ನಿರೀಕ್ಷೆಯಿದೆ. ಇದನ್ನು ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಸೇರಿಸಿದಾಗ ಸರಿಸುಮಾರು ರೂ. 180 ಕೋಟಿ ಆಗಲಿದೆ. ಇದು 2023ರಲ್ಲಿ ಭಾರತೀಯ ಚಲನಚಿತ್ರದ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com