ಕೌಟುಂಬಿಕ ಮನರಂಜನಾ ಸಿನಿಮಾದಲ್ಲಿ ಪ್ರಣಾಮ್ ದೇವರಾಜ್; ನಾಯಕಿಯಾಗಿ ಖುಷಿ ರವಿ
ನಟ ಪ್ರಣಾಮ್ ದೇವರಾಜ್ ಕನ್ನಡ-ತೆಲುಗು ದ್ವಿಭಾಷಾ ವೈರಾ ಬಿಡುಗಡೆಗೆ ಸಜ್ಜಾಗುತ್ತಿದ್ದು ನಿರ್ದೇಶಕ ಶ್ರೀಕಾಂತ್ ಹುಣಸೂರ್ ಮುಂದಿನ ಸಿನಿಮಾಗೆ ಕೈ ಜೋಡಿಸಿದ್ದಾರೆ.
Published: 08th February 2023 11:36 AM | Last Updated: 08th February 2023 01:24 PM | A+A A-

ಪ್ರಣಾಮ್ ದೇವರಾಜ್ ಮತ್ತು ಖುಷಿ ರವಿ
ನಟ ಪ್ರಣಾಮ್ ದೇವರಾಜ್ ಕನ್ನಡ-ತೆಲುಗು ದ್ವಿಭಾಷಾ ವೈರಾ ಬಿಡುಗಡೆಗೆ ಸಜ್ಜಾಗುತ್ತಿದ್ದು ನಿರ್ದೇಶಕ ಶ್ರೀಕಾಂತ್ ಹುಣಸೂರ್ ಮುಂದಿನ ಸಿನಿಮಾಗೆ ಕೈ ಜೋಡಿಸಿದ್ದಾರೆ.
ಚಿತ್ರದಲ್ಲಿ ಖುಷಿ ರವಿ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಶ್ರೀಕಾಂತ್ ಈ ಹಿಂದೆ ನಿರ್ದೇಶಕರಾದ ಪ್ರೇಮ್, ಆರ್ ಚಂದ್ರು, ಚೇತನ್ ಕುಮಾರ್ ಮತ್ತು ಹರಿ ಸಂತೋಷ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ದೂರದರ್ಶನ ಧಾರಾವಾಹಿಯನ್ನೂ ನಿರ್ದೇಶಿಸಿದ್ದಾರೆ. ಮುಂಬರುವ ಚಿತ್ರಕ್ಕೆ ನಿರ್ದೇಶನದ ಜೊತೆಗೆ, ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.
ಚಿತ್ರಕ್ಕೆ ಸನ್ ಆಫ್ ಮುತ್ತಣ್ಣ ಎಂದು ಹೆಸರಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೌಟುಂಬಿಕ ನಾಟಕವಾಗಿ ಬಿಂಬಿತವಾಗಿರುವ ಈ ಕಥೆಯು ತಂದೆ-ಮಗನ ಸಂಬಂಧದ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ರಂಗಾಯಣ ರಘು ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಪ್ರಣಾಮ್ ಮಗನ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಕನ್ನಡ-ತೆಲುಗಿನ 'ವೈರ' ಸಿನಿಮಾ ಮೂಲಕ ಪ್ರಣಾಮ್ ದೇವರಾಜ್ ಅದೃಷ್ಟ ಪರೀಕ್ಷೆ
ಇದೇ ಮೊದಲ ಬಾರಿಗೆ ಪ್ರಣಮ್ ಮತ್ತು ಖುಷಿ ಮೊದಲ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಗಿರೀಶ್ ಶಿವಣ್ಣ, ಸುಚೇಂದ್ರ ಪ್ರಸಾದ್, ದತ್ತಣ್ಣ ಮತ್ತು ಸುಧಾ ಬೆಳವಾಡಿ ಸಹ ನಟಿಸಲಿದ್ದಾರೆ. ಲೋಹಿತ್ ನಿರ್ಮಿಸಿರುವ ಈ ಚಿತ್ರದ ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ಸಚಿನ್ ಬಸ್ರೂರ್ ಮತ್ತು ಛಾಯಾಗ್ರಾಹಕ ಸ್ಕೇಟಿಂಗ್ ಕೃಷ್ಣ ಇದ್ದಾರೆ. ಚಿತ್ರ ಫೆಬ್ರವರಿ 20 ರಂದು ತೆರೆಗೆ ಬರಲಿದೆ ಎನ್ನಲಾಗಿದೆ.