ಕನ್ನಡ-ತೆಲುಗಿನ 'ವೈರ' ಸಿನಿಮಾ ಮೂಲಕ ಪ್ರಣಾಮ್ ದೇವರಾಜ್ ಅದೃಷ್ಟ ಪರೀಕ್ಷೆ
ಕುಮಾರಿ 21 ಎಫ್ (2018) ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಪ್ರಣಾಮ್ ದೇವರಾಜ್ ಅವರು 4 ವರ್ಷಗಳ ನಂತರ ಕನ್ನಡ-ತೆಲುಗು ದ್ವಿಭಾಷೆಯ 'ವೈರ' ಸಿನಿಮಾ ಮೂಲಕ ಮತ್ತೆ ಸಿನಿಮಾರಂಗಕ್ಕೆ ಮರಳುತ್ತಿದ್ದಾರೆ.
Published: 12th January 2023 02:46 PM | Last Updated: 08th February 2023 05:04 PM | A+A A-

ವೈರಾ ಸಿನಿಮಾ ತಂಡ
ಕುಮಾರಿ 21 ಎಫ್ (2018) ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಪ್ರಣಾಮ್ ದೇವರಾಜ್ ಅವರು 4 ವರ್ಷಗಳ ನಂತರ ಕನ್ನಡ-ತೆಲುಗು ದ್ವಿಭಾಷೆಯ 'ವೈರ' ಸಿನಿಮಾ ಮೂಲಕ ಮತ್ತೆ ಸಿನಿಮಾರಂಗಕ್ಕೆ ಮರಳುತ್ತಿದ್ದಾರೆ. ಚಿತ್ರವನ್ನು ಸಾಯಿ ಶಿವನ್ ಜಂಪನಾ ನಿರ್ದೇಶಿಸಿದ್ದು, ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ಚಿತ್ರತಂಡದ ಕುಟುಂಬ ಸದಸ್ಯರ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ತಮ್ಮ ಮೊದಲ ಸಿನಿಮಾದಲ್ಲಿ ಚಾಕೊಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪ್ರಣಾಮ್, ಈ ಚಿತ್ರದಲ್ಲಿ ಆ್ಯಕ್ಷನ್ ಯುವ ನಾಯಕನಾಗಿ ನಟಿಸಲಿದ್ದಾರೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ದೇವರಾಜ್, 'ಇಂಡಸ್ಟ್ರಿ ಪ್ರವರ್ಧಮಾನಕ್ಕೆ ಬರುತ್ತಿರುವ ಈ ಸಮಯದಲ್ಲಿ ತಮ್ಮ ಎರಡನೇ ಮಗ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ಸಿನಿಮಾದ ಹಾಡುಗಳನ್ನು ಕೇಳಿದ್ದೇನೆ, ತುಂಬಾ ಚೆನ್ನಾಗಿವೆ. ಈ ಚಿತ್ರ ಶತದಿನೋತ್ಸವ ಆಚರಿಸಲಿ’ ಎಂದರು.
ಚಿಕ್ಕಂದಿನಿಂದಲೂ ತಂದೆ ಹಾಗೂ ಅಣ್ಣ ಪ್ರಜ್ವಲ್ ದೇವರಾಜ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. 'ಆ್ಯಕ್ಷನ್ ಹೀರೋ ಆಗಿ ಇದು ನನ್ನ ಮೊದಲ ಪ್ರಯತ್ನ. ಈ ಚಿತ್ರ ಮೂಡಿಬಂದಿರುವ ರೀತಿಗೆ ನಾನು ಮತ್ತು ಶಿವನ್‌ಗೆ ಸಂತೋಷವಾಗಿದೆ. ಕೆಜಿಎಫ್ ಖ್ಯಾತಿಯ ಗ್ರೌಡರಾಮ್, ಶಂಕರ್ ಅಶ್ವತ್ಥ್ ಮತ್ತು ವೀಣಾ ಸುಂದರ್ ಅವರಂತಹ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಕ್ಕೆ ನನಗೆ ಖುಷಿಯಾಗಿದೆ' ಎನ್ನುತ್ತಾರೆ ಪ್ರಣಾಮ್. ಚಿತ್ರದ ನಾಯಕಿ ಮೊನಾಲ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.
ಚಿತ್ರಕ್ಕೆ ಗೋಪಿನಾಥ್ ಅವರ ಛಾಯಾಗ್ರಹಣ ಮತ್ತು ಮಹತಿ ಸ್ವರ ಸಾಗರ್ ಅವರ ಸಂಗೀತ ಸಂಯೋಜನೆ ಇದೆ. ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ನಿರ್ಮಾಪಕರು ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದ್ದಾರೆ.