‘ಹೊಂದಿಸಿ ಬರೆಯಿರಿ' ಅಪರೂಪದ ಮಲ್ಟಿಸ್ಟಾರರ್ ಸಿನಿಮಾ, 8 ಪ್ರಮುಖ ಪಾತ್ರಗಳಿವೆ: ರಾಮೇನಹಳ್ಳಿ ಜಗನ್ನಾಥ

ರಾಮೇನಹಳ್ಳಿ ಜಗನ್ನಾಥ ಅವರು ತಮ್ಮ ಪ್ರೊಫೆಸರ್ ಕೆಲಸವನ್ನು ತೊರೆದು ಚಲನಚಿತ್ರಗಳ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿದರು. ಪ್ರಿಯಾ ನಿರ್ದೇಶನದ ರಾಕ್‌ಲೈನ್ ಪ್ರೊಡಕ್ಷನ್‌ನ ಆದಿ ಲಕ್ಷ್ಮಿ ಪುರಾಣದಲ್ಲಿ ಕೆಲಸ ಮಾಡಿದ್ದ ಅವರೀಗ 'ಹೊಂದಿಸಿ ಬರೆಯಿರಿ' ಮೂಲಕ ತಮ್ಮ ಮೊದಲ ನಿರ್ದೇಶನವನ್ನು ಪೂರೈಸಿದ್ದು, ಇದು ಈ ವಾರ ಬಿಡುಗಡೆಯಾಗಲಿದೆ.
ಹೊಂದಿಸಿ ಬರೆಯಿರಿ ಸಿನಿಮಾದ ಸ್ಟಿಲ್
ಹೊಂದಿಸಿ ಬರೆಯಿರಿ ಸಿನಿಮಾದ ಸ್ಟಿಲ್

ರಾಮೇನಹಳ್ಳಿ ಜಗನ್ನಾಥ ಅವರು ತಮ್ಮ ಪ್ರೊಫೆಸರ್ ಕೆಲಸವನ್ನು ತೊರೆದು ಚಲನಚಿತ್ರಗಳ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿದರು. ಪ್ರಿಯಾ ನಿರ್ದೇಶನದ ರಾಕ್‌ಲೈನ್ ಪ್ರೊಡಕ್ಷನ್‌ನ ಆದಿ ಲಕ್ಷ್ಮಿ ಪುರಾಣದಲ್ಲಿ ಕೆಲಸ ಮಾಡಿದ್ದ ಅವರೀಗ 'ಹೊಂದಿಸಿ ಬರೆಯಿರಿ' ಮೂಲಕ ತಮ್ಮ ಮೊದಲ ನಿರ್ದೇಶನವನ್ನು ಪೂರೈಸಿದ್ದು, ಇದು ಈ ವಾರ ಬಿಡುಗಡೆಯಾಗಲಿದೆ.

ನನ್ನ ಕಾಲೇಜು ದಿನಗಳಲ್ಲಿ ನಾನು ಸಾಕಷ್ಟು ಕವಿತೆಗಳನ್ನು ಬರೆದಿದ್ದೆ, ಅದು ಕೆಲವು ದೇಶೀಯ ದಿನಪತ್ರಿಕೆಗಳಲ್ಲಿ ಸಹ ಪ್ರಕಟವಾಯಿತು ಇದರಿಂದ ನಾನು ಸಾಹಿತಿಯಾಗಬೇಕೆಂದು ಬಯಸಿದ್ದೆ. ನನ್ನ ಸಾಹಿತ್ಯದ ಬರವಣಿಗೆ ನನ್ನನ್ನು ಕಥೆ ಬರೆಯಲು ಪ್ರೇರೇಪಿಸಿತು. ಹೀಗಾಗಿ ಹೊಂದಿಸಿ ಬರೆಯಿರಿಯನ್ನು ಬರೆಯಲು ಸಾಧ್ಯವಾಯಿತು ಎಂದು ರಾಮೇನಹಳ್ಳಿ ಜಗನ್ನಾಥ ಹೇಳುತ್ತಾರೆ. 

<strong>ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ</strong>
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ

ಅವರು ತಮ್ಮ ಮೊದಲ ಚಿತ್ರಕ್ಕಾಗಿ 8 ರಲ್ಲಿ 6 ಹಾಡುಗಳನ್ನು ತಾವೇ ಬರೆದಿದ್ದಾರೆ. ಹೊಂದಿಸಿ ಬರೆಯಿರಿ ಸಿನಿಮಾವು 5 ಸ್ನೇಹಿತರ ಪ್ರಯಾಣವನ್ನು ಗುರುತಿಸುತ್ತದೆ ಮತ್ತು ಕಾಲೇಜಿನಿಂದ ಮದುವೆಯ ನಂತರದ 12 ವರ್ಷಗಳ ಜೀವನದ ಮೂಲಕ ಕಥೆಗಳು ತೆರೆದುಕೊಳ್ಳುತ್ತವೆ' ಎಂದು ನಿರ್ದೇಶಕರು ಹೇಳುತ್ತಾರೆ.

ನಾನು ಹಗುರವಾದ ಸ್ಕ್ರಿಪ್ಟ್‌ಗಳತ್ತ ಒಲವು ಹೊಂದಿದ್ದೇನೆ ಮತ್ತು ಗಾಳಿಪಟ, ಜಿಂದಗಿ ನಾ ಮಿಲೇಗಿ ದೊಬಾರಾ, ದಿಲ್ ಚಟಾ ಹೈ ಮುಂತಾದ ಚಲನಚಿತ್ರಗಳನ್ನು ನೋಡುವುದನ್ನು ಆನಂದಿಸುತ್ತೇನೆ. ನಾನು ಕೂಡ ಅಂತಹದ್ದೇ ಚಿತ್ರವನ್ನು ನಿರ್ದೇಶಿಸಲು ಬಯಸಿದ್ದೆ ಮತ್ತು ಹೊಂದಿಸಿ ಬರೆಯಿರಿ ಕೂಡ ಇದಕ್ಕೆ ಹೊಂದುತ್ತದೆ ಎಂದು ರಾಮನೇನಹಳ್ಳಿ ಹೇಳುತ್ತಾರೆ. 

ಕುತೂಹಲಕಾರಿಯಾಗಿ, ಇದು ಅಪರೂಪದ ಮಲ್ಟಿಸ್ಟಾರರ್ ಸಿನಿಮಾ ಆಗಿದ್ದು, ಇದು 8 ವಿಭಿನ್ನ ಪಾತ್ರಗಳ ಮೂಲಕ ನಿರೂಪಿಸಲ್ಪಟ್ಟಿದೆ. ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಐಶಾನಿ ಶೆಟ್ಟಿ, ಭಾವನಾ ರಾವ್, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಮತ್ತು ಅನಿರುದ್ಧ ಆಚಾರ್ಯ ಮುಂತಾದ ಏಕವ್ಯಕ್ತಿ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ನಟರನ್ನು ಕರೆತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ನಾನು ಈ ನಟರನ್ನು ಸಂಪರ್ಕಿಸಲು ವಿಶಿಷ್ಟವಾದ ಮಾರ್ಗವನ್ನು ಹೊಂದಿದ್ದೇನೆ. ಅದೇನೆಂದರೆ ಈ ಕಥೆಯೇ ಅವರನ್ನೆಲ್ಲ ಒಟ್ಟಿಗೆ ಸೇರಿಸಿದೆ. ಚಿತ್ರದ ವಿವಿಧ ಹಂತಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರವು ವಿಭಿನ್ನ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಅವುಗಳು ನಿಕಟ ಸಂಬಂಧ ಮತ್ತ ವಾಸ್ತವಕ್ಕೆ ಹತ್ತಿರವಾದವುಗಳಾಗಿವೆ ಎನ್ನುತ್ತಾರೆ.

ಹೊಂದಿಸಿ ಬರೆಯಿರಿ ಸಿನಿಮಾ ಸಂಡೇ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ ಮತ್ತು ಜೋ ಕೋಸ್ಟಾ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್ ಸಿನಿಮಾಟೋಗ್ರಫಿ ನಿಭಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com