ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ವರ್ಕೌಟ್ ವಿಡಿಯೋ ವೈರಲ್, ಫೀಲ್ ದಿ ಪವರ್ ಎಂದ ಅಭಿಮಾನಿಗಳು!
ಸಿನಿಮಾಗಳಿಗಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಕಷ್ಟು ವರ್ಕೌಟ್ ಮಾಡುತ್ತಿದ್ದರು. ಇದಕ್ಕಾಗಿ ಜಿಮ್ ನಲ್ಲಿ ಸಾಕಷ್ಟು ಬೆವರಿಳಿಸುತ್ತಿದ್ದರು. ಅಂತಹ ವಿಡಿಯೋಗಳನ್ನು ಕಂಡ ಅಭಿಮಾನಿಗಳು ಫುಲ್ ಖುಷಿ ಪಡುತ್ತಿದ್ದರು.
Published: 18th February 2023 01:07 PM | Last Updated: 18th February 2023 01:07 PM | A+A A-

ಅಶ್ವಿನಿ ಪುನೀತ್ ರಾಜಕುಮಾರ್
ಬೆಂಗಳೂರು: ಸಿನಿಮಾಗಳಿಗಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಕಷ್ಟು ವರ್ಕೌಟ್ ಮಾಡುತ್ತಿದ್ದರು. ಇದಕ್ಕಾಗಿ ಜಿಮ್ ನಲ್ಲಿ ಸಾಕಷ್ಟು ಬೆವರಿಳಿಸುತ್ತಿದ್ದರು. ಅಂತಹ ವಿಡಿಯೋಗಳನ್ನು ಕಂಡ ಅಭಿಮಾನಿಗಳು ಫುಲ್ ಖುಷಿ ಪಡುತ್ತಿದ್ದರು. ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಫಿಟ್ನೆಸ್ ಕಾಯ್ದುಕೊಳ್ಳಲು ವರ್ಕೌಟ್ ಮಾಡುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಫೀಲ್ ದಿ ಪವರ್ ಎಂದು ಹೇಳುತ್ತಿದ್ದಾರೆ.
ಪುನೀತ್ ರಾಜಕುಮಾರ್ ನಿಧನದ ನಂತರ ಅಶ್ವಿನಿ ಅವರೇ ಪಿಆರ್ ಕೆ ಸಂಸ್ಥೆಯನ್ನು ನಿಭಾಯಿಸುತ್ತಿದ್ದು ಹಲವು ಸಿನಿಮಾಗಳಿಗೆ ಬೆಂಬಲ ನೀಡುತ್ತಿದ್ದಾರೆ.