ಕುಲು ಮನಾಲಿಯಲ್ಲಿ ಮ್ಯಾಟ್ನಿ ಹಾಡಿನ ಚಿತ್ರೀಕರಣದಲ್ಲಿ ನಟ ಸತೀಶ್ ನೀನಾಸಂ- ನಟಿ ಅದಿತಿ ಪ್ರಭುದೇವ

ನಿರ್ದೇಶಕ ಮನೋಹರ್ ಕಾಂಪಲ್ಲಿ ಅವರ ಮುಂಬರುವ ರೋಮ್ಯಾಂಟಿಕ್ ಥ್ರಿಲ್ಲರ್ ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ. ಸದ್ಯ, ಕೊನೆಯ ಹಂತದ ಶೂಟಿಂಗ್‌ನಲ್ಲಿ, ತಂಡವು ಇತ್ತೀಚೆಗೆ ಕುಲು ಮನಾಲಿಗೆ ಭೇಟಿ ನೀಡಿತು. ಅಲ್ಲಿ ಸತೀಶ್ ಮತ್ತು ಅದಿತಿ ಹಾಡೊಂದನ್ನು ಚಿತ್ರೀಕರಿಸಿದ್ದಾರೆ.
ಸತೀಶ್ ನೀನಾಸಂ - ಅದಿತಿ ಪ್ರಭುದೇವ
ಸತೀಶ್ ನೀನಾಸಂ - ಅದಿತಿ ಪ್ರಭುದೇವ

ನಿರ್ದೇಶಕ ಮನೋಹರ್ ಕಾಂಪಲ್ಲಿ ಅವರ ಮುಂಬರುವ ರೋಮ್ಯಾಂಟಿಕ್ ಥ್ರಿಲ್ಲರ್ ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ. ಸದ್ಯ, ಕೊನೆಯ ಹಂತದ ಶೂಟಿಂಗ್‌ನಲ್ಲಿ, ತಂಡವು ಇತ್ತೀಚೆಗೆ ಕುಲು ಮನಾಲಿಗೆ ಭೇಟಿ ನೀಡಿತು. ಅಲ್ಲಿ ಸತೀಶ್ ಮತ್ತು ಅದಿತಿ ಹಾಡೊಂದನ್ನು ಚಿತ್ರೀಕರಿಸಿದ್ದಾರೆ. ಶೂಟಿಂಗ್ ಸ್ಪಾಟ್‌ನ ಕೆಲವು ಸ್ಟಿಲ್‌ಗಳನ್ನು ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

ಹಿಮಪಾತದ ನಡುವೆ 4 ದಿನಗಳ ಕಾಲ 5 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಈ ದೃಶ್ಯವನ್ನು ಚಿತ್ರೀಕರಿಸುವ ಬಗ್ಗೆ ಮಾತನಾಡಿದ ಸತೀಶ್, 'ಚಳಿಯನ್ನು ತಡೆದುಕೊಳ್ಳಲು ನನಗೆ ಕೋಟ್ ಇತ್ತು. ಆದರೆ, ಸೀರೆ ಮತ್ತು ಘಾಗ್ರಾ ಬಟ್ಟೆಗಳನ್ನು ಧರಿಸಿ ಚಿತ್ರೀಕರಣ ಮಾಡಬೇಕಾಗಿದ್ದ ಅದಿತಿಗೆ ತುಂಬಾ ಕಷ್ಟಕರವಾಗಿತ್ತು. ಕೆಲವು ಸವಾಲಿನ ಸನ್ನಿವೇಶಗಳು ಇದ್ದವು. ಆದರೆ, ನಾವು ಬಿಡದೆ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಹಾಡಿನ ಔಟ್‌ಪುಟ್ ಚೆನ್ನಾಗಿ ಬಂದಿದೆ ಮತ್ತು ಇದು ವಿಂಟೇಜ್ ಫೀಲ್ ನೀಡುತ್ತದೆ' ಎಂದು ತಿಳಿಸಿದರು.

ಪಾರ್ವತಿ ಎಸ್ ಗೌಡ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಪೂರ್ಣಚಂದ್ರ ಮೈಸೂರು ಮತ್ತು ಹೊಸಬರಾದ ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಸುಧಾಕರ್ ಮತ್ತು ಕೀರ್ತನ್ ಪೂಜಾರ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com